Digital technology ರೈತರಿಗೆ ವೇಗವಾಗಿ ತಲುಪಿದರೆ ಕೃಷಿ ಕ್ಷೇತ್ರ ಪ್ರಗತಿ: ರಾಜ್ಯಪಾಲ

By Kannadaprabha NewsFirst Published Sep 10, 2022, 6:59 AM IST
Highlights

ಕೃಷಿ ರಂಗದಲ್ಲಿನ ತಾಂತ್ರಿಕ ಬದಲಾವಣೆಗಳು, ಡಿಜಿಟಲ್‌ ತಂತ್ರಜ್ಞಾನದ ಮೂಲಕ ರೈತರನ್ನು ವೇಗವಾಗಿ ತಲುಪಿದರೆ ಕೃಷಿ ರಂಗದಲ್ಲಿ ಭಾರತದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ರಾಜ್ಯಪಾಲ ಮತ್ತು ಕುಲಾಧಿಪತಿ ಥಾವರ್‌ಚಂದ್‌ ಗೆಹಲೋತ್‌ ಹೇಳಿದ್ದಾರೆ.

ಬೆಂಗಳೂರು (ಸೆ.10) : ಕೃಷಿ ರಂಗದಲ್ಲಿನ ತಾಂತ್ರಿಕ ಬದಲಾವಣೆಗಳು, ಡಿಜಿಟಲ್‌ ತಂತ್ರಜ್ಞಾನದ ಮೂಲಕ ರೈತರನ್ನು ವೇಗವಾಗಿ ತಲುಪಿದರೆ ಕೃಷಿ ರಂಗದಲ್ಲಿ ಭಾರತದ ಅಭಿವೃದ್ಧಿಯ ವೇಗ ಹೆಚ್ಚಲಿದೆ ಎಂದು ರಾಜ್ಯಪಾಲ ಮತ್ತು ಕುಲಾಧಿಪತಿ ಥಾವರ್‌ಚಂದ್‌ ಗೆಹಲೋತ್‌ ಹೇಳಿದ್ದಾರೆ. ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ 56ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು. ಭಾರತವು ಆತ್ಮ ನಿರ್ಭರಗೊಳ್ಳಬೇಕಾದರೆ ಕೃಷಿ ಕ್ಷೇತ್ರವು ದೊಡ್ಡ ಕೊಡುಗೆ ನೀಡುವ ಅಗತ್ಯವಿದೆ. ದೇಶವು 5 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ಆರ್ಥಿಕತೆಯನ್ನು ಸಾಧಿಸಬೇಕಾದರೆ ಕೃಷಿಯು ಕನಿಷ್ಠ ಪಕ್ಷ 1 ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ಕೊಡುಗೆ ಕೃಷಿಯಿಂದ ಬರಬೇಕು ಎಂದು ಹೇಳಿದರು.

ಉಡುಪಿ ಜಿಲ್ಲೆಗೆ 25ರ ಸಂಭ್ರಮ: ರಜತ ಮಹೋತ್ಸವಕ್ಕೆ ರಾಜ್ಯಪಾಲರಿಂದ ಚಾಲನೆ

ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಧಾರಿತ ಭೂಮಿ ಇದೆ. ಲಭ್ಯವಿರುವ ಭೂಮಿಯಲ್ಲಿ ಹೆಚ್ಚು ಆಹಾರ ಉತ್ಪಾದನೆಗೆ ಇಸ್ರೇಲ್‌ ಮಾದರಿ(Israel model) ಅನುಸರಿಸುವ ಅವಶ್ಯಕತೆ ಇದೆ. ಜತೆಗೆ ನೈಸಗಿಕ ಕೃಷಿ, ದೇಶೀಯ ಬೀಜಗಳ ಸಂರಕ್ಷಣೆಗೆ ಕೃಷಿ ವಿವಿಯು ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು. ಸಹ ಕುಲಾಧಿಪತಿ, ಕೃಷಿ ಸಚಿವ ಬಿ.ಸಿ.ಪಾಟೀಲ್‌(B.C.Patil) ಮಾತನಾಡಿ, ಸರ್ಕಾರ ಈಗಾಗಲೇ ರೈತ ಮಕ್ಕಳಿಗೆ ಕೃಷಿ ವಿವಿ(agriculture university)ಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದು, ರೈತರ ಮಕ್ಕಳಿಗೆ ಇದರಿಂದ ಅನುಕೂಲ ಆಗಿದೆ. ಅಷ್ಟೇ ಅಲ್ಲ, ರೈತ ಮಕ್ಕಳಿಗೆ ನೀಡಲಾಗುತ್ತಿರುವ ರೈತ ವಿದ್ಯಾನಿಧಿ ಯೋಜನೆಯನ್ನು ರೈತ ಕಾರ್ಮಿಕ ಮಕ್ಕಳಿಗೂ ವಿಸ್ತರಿಸಲು ಸರ್ಕಾರ ನಿರ್ಧರಿಸಿದ್ದು, ತಿಂಗಳಲ್ಲಿ ಅದು ಜಾರಿಯಾಗಲಿದೆ ಎಂದರು.

ಪ್ರಗತಿಪರ ರೈತ ಎನ್‌.ಸಿ.ಪಟೇಲ್‌(N.C.Patil) ಅವರಿಗೆ ಗೌರವ ಡಾಕ್ಟರೆಟ್‌ ಪ್ರದಾನ ಮಾಡಲಾಯಿತು. 2020-21ರ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆಯಾದ 90 ಡಾಕ್ಟರೆಟ್‌, 751 ಸ್ನಾತಕ ಮತ್ತು 304 ಸ್ನಾತಕೋತ್ತರ ಸೇರಿ ಒಟ್ಟಾರೆ 1,144 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಒಟ್ಟಾರೆ 156 ಚಿನ್ನದ ಪದಕ ಹಾಗೂ ಪ್ರಶಸ್ತಿ, ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು.

ಕೃಷಿ ವಿಜ್ಞಾನ ಪ್ರಗತಿ ಟ್ರಸ್ಟ್‌ ಅಧ್ಯಕ್ಷ ಡಾ ಆರ್‌.ಎಸ್‌.ಪರೋಡ ಮಾತನಾಡಿದರು. ಕುಲಪತಿ ಡಾ ರಾಜೇಂದ್ರ ಪ್ರಸಾದ್‌ ಉಪಸ್ಥಿತರಿದ್ದರು. Bengaluru: ರಾಜ್ಯಪಾಲರ ಹೆಸರಲ್ಲಿ ಮಹಾಮೋಸ: ವಿಧಾನಸೌಧ ಪೊಲೀಸರಿಂದ ಆರೋಪಿ ಬಂಧನ

click me!