ರಾಜ್ಯದಲ್ಲಿ ನಿಲ್ಲದ ಮಳೆ: ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ಕಾಫಿ ತೋಟ, ಮತ್ತೆ ಮೂವರು ಬಲಿ

Published : Aug 10, 2022, 09:55 AM IST
ರಾಜ್ಯದಲ್ಲಿ ನಿಲ್ಲದ ಮಳೆ: ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ಕಾಫಿ ತೋಟ, ಮತ್ತೆ ಮೂವರು ಬಲಿ

ಸಾರಾಂಶ

ವರುಣನ ಆರ್ಭಟಕ್ಕೆ ಜನರು ಪಡಬಾರದ ಸಂಕಷ್ಟಗಳನ್ನ ಎದುರಿಸುತ್ತಿದ್ದಾರೆ.  ಮಳೆ ಸಂಬಂಧಿ ಅವಘಡಗಳಿಗೆ ರಾಜ್ಯದಲ್ಲಿ ಮೂವರು ಸಾವು

ಬೆಂಗಳೂರು(ಆ.10):  ರಾಜ್ಯದ ಹಲವೆಡೆ ನಿನ್ನೆ(ಮಂಗಳವಾರ) ರಾತ್ರಿ ಕೂಡ ಭಾರೀ ಮಳೆಯಾಗಿದೆ.  ನಿರಂತರ ಮಳೆಗೆ ಹಲವಾರು ಅವಘಡಗಳು ಸಂಭವಿಸಿದೆ.  ವರುಣನ ಆರ್ಭಟಕ್ಕೆ ಜನರು ಪಡಬಾರದ ಸಂಕಷ್ಟಗಳನ್ನ ಎದುರಿಸುತ್ತಿದ್ದಾರೆ.  ಮಳೆ ಸಂಬಂಧಿ ಅವಘಡಗಳಿಗೆ ರಾಜ್ಯದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಕಾಫಿ ತೋಟವೇ ಕೊಚ್ಚಿ ಹೋಗಿದೆ. ಚಿಕ್ಕಮಗಳೂರು ತಾಲೂಕಿನ ಹುಣಸೇಹಳ್ಳಿ ಸಮೀಪದ ತಂಬಳ್ಳಿಪುರ ಗ್ರಾಮದಲ್ಲಿ ಗುಡ್ಡ ಜರಿದು ತೋಟ ಸರ್ವ ನಾಶವಾಗಿದೆ. ಅಣ್ಣಪ್ಪಶೆಟ್ಟಿ ಎಂಬುವರಿಗೆ ಸೇರಿದ ಒಂದು ಎಕರೆ ಕಾಫಿ ತೋಟ ನಾಶವಾಗಿದೆ. ತೋಟದಲ್ಲಿ ಹೊಸ ಹಳ್ಳ ಕೊಳ್ಳಗಳು ಸೃಷ್ಟಿಯಾಗಿವೆ. ರಾತ್ರಿ ಕಳೆದು ಬೆಳಗಾಗುವುದರಲ್ಲಿ ತೋಟದ ಸ್ಥಿತಿ ಕಂಡು ರೈತ ಆತಂಕ್ಕೊಳಗಾಗಿದ್ದಾರೆ. ಬೆಳೆದು ನಿಂತಿದ್ದ ಮೆಣಸು, ಅಡಿಕೆ, ಕಾಫಿ, ಬಾಳೆ ಸಂಪೂರ್ಣವಾಗಿ ನಾಶವಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಬರುವಂತೆ ರೈತರು ಒತ್ತಾಯಿಸಿದ್ದಾರೆ. 

ಮಳೆಯ ಅಬ್ಬರಕ್ಕೆ ಇಬ್ಬರ ಬಲಿ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ವ್ಯಾಪ್ತಿಯ ಕೆ ತಲಗೂರು ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಇಬ್ಬರು ಬಲಿಯಾಗಿದ ಘಟನೆ ನಿನ್ನೆ(ಮಂಗಳವಾರ) ತಡರಾತ್ರಿ ನಡೆದಿದೆ. ಮನೆ ಮೇಲೆ ಬೃಹದಾಕಾರದ ಮರ ಬಿದ್ದು ಮಲಗಿದ್ದಲ್ಲೇ ಇಬ್ಬರು ಜೀವ ಬಿಟ್ಟಿದ್ದಾರೆ. ಮನೆಯಲ್ಲಿದ್ದ ಚಂದ್ರಮ್ಮ ಹಾಗೂ ಸರಿತಾ ದುರಂತ ಸಾವು ಕಂಡಿದ್ದಾರೆ. ಸುನಿಲ್ ಹಾಗೂ ದೀಕ್ಷಿತ್  ಮಕ್ಕಳು ಸ್ವಲ್ಪದರಲ್ಲೇ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಮೃತ ಸರಿತಾ ಹಾಗೂ ಚಂದ್ರಮ್ಮ ಪಕ್ಕದ ಮನೆಯ ಸಂಬಂಧಿಕರ ಮನೆಗೆ ಮಲಗಲು ಬಂದಿದ್ದರು ಅಂತ ತಿಳಿದು ಬಂದಿದೆ. ಮಳೆಗೆ ಕಾಫಿನಾಡಲ್ಲಿ ಈವರೆಗೂ ಐದು ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ. 

ಕರ್ನಾಟಕದಲ್ಲಿ ಮಳೆ ತಗ್ಗಿದರೂ ಅನಾಹುತಕ್ಕೆ 4 ಸಾವು: ಇಂದೂ ಕೂಡ ಭಾರೀ ಮಳೆ

ರಾಯಚೂರು: ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಡ್ಯಾಂನಿಂದ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆಯಾಗಿದೆ. ತುಂಗಭದ್ರಾ ನದಿಗೆ 1 ಲಕ್ಷ 82 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ. ಹೀಗಾಗಿ ನದಿ ತೀರಕ್ಕೆ ಯಾರೂ ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಮಂತ್ರಾಲಯಕ್ಕೆ ಬರುವ ಭಕ್ತರಿಗೂ ತಟ್ಟಿದ ಪ್ರವಾಹದ ಎಫೆಕ್ಟ್

ರಾಯರ ಆರಾಧನಾ ಮಹೋತ್ಸವ ವೇಳೆ ತುಂಗಭದ್ರಾ ನದಿ ಸ್ನಾನಕ್ಕೆ ನಿರ್ಬಂಧ ಹೇರಲಾಗಿದೆ. ತುಂಗಭದ್ರಾ ‌ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿರುವುದರಿಂದ ಸ್ನಾನಕ್ಕೆ ನಿರ್ಬಂಧಿಸಲಾಗಿದೆ. ನದಿಗೆ ಭಕ್ತರು ಇಳಿಯದಂತೆ ಬ್ಯಾರಿಕೇಡ್ ಹಾಕಿ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ.  ಆದ್ರೆ, ತುಂಗಭದ್ರಾ ನೀರಿನ ಪುಣ್ಯಸ್ನಾನಕ್ಕಾಗಿ ಶ್ರೀಮಠದಿಂದ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ತುಂಗಭದ್ರಾ ನದಿ ಪಕ್ಕದಲ್ಲೇ ಭಕ್ತರಿಗಾಗಿ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಲ್ಲಿ ಸ್ನಾನ ಮಾಡಿ ಡ್ರೆಸ್ ಬದಲಾಯಿಸಿಕೊಳ್ಳಲು ಶೆಡ್ ನಿರ್ಮಾಣ ಮಾಡಲಾಗಿದ್ದು, ನಿರ್ಭಯವಾಗಿ ಭಕ್ತರು ಆರಾಧನಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಶ್ರೀಮಠದಿಂದ ಮನವಿ ಮಾಡಲಾಗಿದೆ. ಇಂದಿನಿಂದ ‌ಆ.16ರ ವರೆಗೆ ನಡೆಯಲಿದೆ ರಾಯರ 351ನೇ ಆರಾಧನಾ ಮಹೋತ್ಸವ ನಡೆದಯಲಿದೆ. 

ಹಾಸನ ಜಿಲ್ಲೆಯಲ್ಲಿ ಮುಂದುವರೆದ ಮಳೆ ಆರ್ಭಟ

ಭಾರೀ ಮಳೆಗೆ ಒಂದೇ ಗ್ರಾಮದಲ್ಲಿ ಎರಡು ಮನೆಗಳು ಕುಸಿತವಾದ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೆಲಗಳಲೆ ಗ್ರಾಮದಲ್ಲಿ ಘಟನೆ ನಡೆದಿದೆ. ನೋಡ ನೋಡುತ್ತಲೇ ಮನೆಯ ಛಾವಣಿ ಸಮೇತ ಮನೆ ಗೋಡೆ ಕುಸಿದಿದೆ. ಮನೆ ಕುಸಿದು ಬೀಳುವ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್‌ ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  

ಗ್ರಾಮದ ಅಪ್ಪಣ್ಣಗೌಡ ಹಾಗು ತಂಗ್ಯಮ್ಮ ಎಂಬುವವರಿಗೆ ಸೇರಿದ ಮನೆಗಳು ಕುಸಿದಿವೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದವಸ ಧಾನ್ಯಗಳು ಹಾನಿಯಾಗಿವೆ. ಕಳೆದ ಒಂದು ವಾರದಿಂದ ಸುರಿದ ಮಳೆಗೆ ತೇವಾಂಶ ಹೆಚ್ಚಾಗಿ ಮನೆಗಳು ಕುಸಿದಿವೆ. ಸೂಕ್ತ ಪರಿಹಾರಕ್ಕಾಗಿ ಸಂತ್ರಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.  

ನಿರಂತರ ಮಳೆಯಿಂದ ಹೆಚ್ಚಿದ ಹಾವುಗಳ ಉಪಟಳ

ತುಮಕೂರು: ನಿರಂತರ ಮಳೆಗೆ ಹಾವುಗಳ ಉಪಟಳ ಹೆಚ್ಚಾಗಿದೆ. ಹೌದು, ಜಿಲ್ಲೆಯ ಕುಣಿಗಲ್ ಪಟ್ಟಣದಲ್ಲಿ ಒಂದೇ ದಿನ 6 ಹಾವುಗಳು ಪ್ರತ್ಯಕ್ಷವಾಗಿದೆ. ಕುಣಿಗಲ್ ಪಟ್ಟಣದ ಸಪ್ತಗಿರಿ ಹಾಸ್ಪಿಟಲ್, ಅಂದಾನಯ್ಯ ಬಡಾವಣೆ, ಹೌಸಿಂಗ್ ಬೋರ್ಡ್, ರಸ್ತೆ ಪಾಳ್ಯ ಹಲವು ಕಡೆ ಹಾವುಗಳು ಕಾಣಿಸಿಕೊಂಡಿವೆ. 

ರೇಷ್ಮೆ ನಗರಿ ರಾಮನಗರದಲ್ಲಿ ಮುಂದುವರಿದ ಮಳೆ ಅಬ್ಬರ, ಅಪಾರ ಪ್ರಮಾಣದ ಬೆಳೆ ನಾಶ

ದಶಕಗಳ ಬಳಿಕ ಕುಣಿಗಲ್ ಕೆರೆ ಮೈ ತುಂಬಿ ಹರಿಯುತ್ತಿದೆ. ನೀರು ಹೆಚ್ಚಾಗಿದ್ದರಿಂದ ಹಾವುಗಳು ಬಡಾವಣೆಗಳಿಗೆ ನುಗ್ಗುತ್ತಿವೆ. ಹಾವುಗಳ ಹಾವಳಿಗೆ ಕುಣಿಗಲ್ ನಗರದ ಜನತೆ ಕಂಗಲಾಗಿ ಹೋಗಿದ್ದಾರೆ. ಒಂದೇ ದಿನ 6 ಹಾವುಗಳನ್ನು ಸ್ನೇಕ್ ಮಹಂತೇಶ್ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಮನೆಯ ಗೋಡೆ ಬಿದ್ದು ವ್ಯಕ್ತಿ ಸಾವು

ಹಾವೇರಿ: ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮನೆಯ ಗೋಡೆ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕುನ್ನೂರ ಗ್ರಾಮದ ಪ್ಲಾಟ್‌ನಲ್ಲಿ  ನಡೆದಿದೆ. ಮುಸ್ತಾಕ್‌ ಶರೀಫ್‌ ಸಾಬ್‌ ಯರಗುಪ್ಪಿ(27) ಮೃತಪಟ್ಟ ದುರ್ದೈವಿಯಾಗಿದ್ದಾನೆ. 

ಮನೆಯು ತೀವ್ರ ಶಿಥಿಲಗೊಂಡಿದ್ದರಿಂದ ಗೋಡೆ ಕುಸಿತಗೊಂಡಿದೆ. ಕೆಲ ದಿನಗಳ ಹಿಂದಷ್ಟೇ ಪತ್ನಿ ಜುಲೇಖಾ ಅವರಿಗೆ ಹೆರಿಗೆಯಾಗಿತ್ತು. ಫರ್ವ ಪುತ್ರ, ಪುತ್ರಿ ಹಾಗೂ ತಾಯಿ ಮನೆಯಲ್ಲಿದ್ದರು ಎನ್ನಲಾಗಿದೆ. ನಿನ್ನೆ ರಾತ್ರಿ ವೇಳೆ 2-30 ರ ವೇಳೆಗೆ ದುರ್ಘಟನೆ ನಡೆದಿದೆ. ಗೋಡೆ ಬಿದ್ದು ಗಾಯಗೊಂಡಿದ್ದ ಮುಸ್ತಾಕ್ ನನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮುಸ್ತಾಕ್ ಸಾವನ್ನಪ್ಪಿದ್ದಾನೆ ಅಂತ ತಿಳಿದು ಬಂದಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !