* ಕೋವಿಡ್ ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆ
* ಸೋಂಕಿತರ ಸಂಖ್ಯೆ ಹೆಚ್ಚಳ ಆತಂಕ
* ಯಲಹಂಕದಲ್ಲಿರುವ ಬಿಎಸ್‌ಎಫ್ ಕ್ಯಾಂಪ್
ಬೆಂಗಳೂರು(ಸೆ.30): ಮೇಘಾಲಯದ(Meghalaya) ಶಿಲ್ಲಾಂಗ್‌ನಿಂದ ಯಲಹಂಕದ ಬಿಎಸ್‌ಎಫ್ ಕ್ಯಾಂಪ್‌ಗೆ ತರಬೇತಿಗಾಗಿ ಬಂದಿದ್ದ ಯೋಧರ ಪೈಕಿ ಮತ್ತೆ 22 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಕೋವಿಡ್ ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ.
ಸೋಂಕಿತ ಯೋಧರಲ್ಲಿ 22 ಮಂದಿ ಯಲಹಂಕ ಕೋವಿಡ್ ಆರೈಕೆ ಕೇಂದ್ರ, 61 ಯೋಧರು(BSF Soldiers) ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆ ಮತ್ತು 21 ಮಂದಿ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 34 ಯೋಧರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಎಂದು ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಧನಂಜಯ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
undefined
ಬಿಎಸ್‌ಎಫ್ ಶಿಬಿರದಲ್ಲಿ ಕೊರೋನಾ ಸ್ಫೋಟ: ಮತ್ತೆ 14 ಯೋಧರಿಗೆ ಸೋಂಕು
ಈ ಯೋಧರ ತಂಡ ಸೆ.15ರಂದು ಯಲಹಂಕದ ಬಿಎಸ್‌ಎಫ್ ಕ್ಯಾಂಪ್‌ಗೆ ಬಂದಿತ್ತು. ಮೂರು ದಿನದ ಬಳಿಕ ಕೆಲವರಲ್ಲಿ ಶೀತ, ಕೆಮ್ಮು, ಜ್ವರ ಸೇರಿದಂತೆ ಕೋವಿಡ್(Covid19) ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸೆ.19ರಂದು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಚಿಕ್ಕಜಾಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕ್ಯಾಂಪ್‌ಗೆ ತೆರಳಿ 150 ಮಂದಿ ಯೋಧರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದು, ಆರಂಭದಲ್ಲಿ 34 ಯೋಧರಲ್ಲಿ ಸೋಂಕು ದೃಢಪಟ್ಟಿತ್ತು.
ನಂತರ ನಡೆದ ಕೋವಿಡ್ ಪರೀಕ್ಷೆಯಲ್ಲಿ 50ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿತ್ತು. ಮೂರ್ನಾಲ್ಕು ದಿನಗಳ ಹಿಂದೆ ನಡೆದಿದ್ದ ಪರೀಕ್ಷೆಯಲ್ಲಿ ಮತ್ತೆ 22 ಯೋಧರಲ್ಲಿ ಸೋಂಕು ದೃಢಪಟ್ಟಿತ್ತು. ಬುಧವಾರವೂ ಕೋವಿಡ್ ಪರೀಕ್ಷೆ ನಡೆದಿದ್ದು ವರದಿ ಇಂದು ಬರಲಿದೆ. ಸೋಂಕಿತ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಹಾಗಾಗಿ ತರಬೇತಿಗೆಂದು ಬಂದಿರುವ ಎಲ್ಲ ಯೋಧರಿಗೆ ಮತ್ತೊಮ್ಮೆ ಎರಡನೇ ಸುತ್ತಿನ ಕೋವಿಡ್ ಪರೀಕ್ಷೆ ಮಾಡಲು ಸೇನೆ ಅಧಿಕಾರಿಗಳು ನಿರ್ಧರಿಸಿದ್ದಾರೆ. ಸೋಂಕಿತರು ವಾಸವಿದ್ದ ಕೊಠಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶವನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ಡಾ.ಧನಂಜಯ ತಿಳಿಸಿದ್ದಾರೆ.