ಗೃಹಲಕ್ಷ್ಮಿ ಬೆನ್ನಲ್ಲೇ, ಅನ್ನಭಾಗ್ಯ ಹಣ ಪಾವತಿ ಬಾಕಿ!

Kannadaprabha News   | Kannada Prabha
Published : Jan 30, 2026, 06:28 AM IST
annabhagya

ಸಾರಾಂಶ

ಬೆಳಗಾವಿ ಅಧಿವೇಶನದಲ್ಲಿ ‘ಗೃಹಲಕ್ಷ್ಮೀ’ ಫಲಾನುಭವಿಗಳಿಗೆ ಎರಡು ತಿಂಗಳ ಹಣ ಪಾವತಿಯಾಗದ ವಿಚಾರ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಭಾರೀ ಜಟಾಪಟಿಗೆ ಕಾರಣವಾದ ಬೆನ್ನಲ್ಲೇ ಇದೀಗ, ‘ಅನ್ನಭಾಗ್ಯ’ದ ಫಲಾನುಭವಿಗಳಿಗೆ ಒಂದು ತಿಂಗಳ ಹಣ ಪಾವತಿಯಾಗದ ವಿಚಾರ ಗುರುವಾರ ವಿಧಾನಸಭೆಯಲ್ಲಿ ಸದ್ದು ಮಾಡಿತು.

ವಿಧಾನಸಭೆ : ಬೆಳಗಾವಿ ಅಧಿವೇಶನದಲ್ಲಿ ‘ಗೃಹಲಕ್ಷ್ಮೀ’ ಫಲಾನುಭವಿಗಳಿಗೆ ಎರಡು ತಿಂಗಳ ಹಣ ಪಾವತಿಯಾಗದ ವಿಚಾರ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಭಾರೀ ಜಟಾಪಟಿಗೆ ಕಾರಣವಾದ ಬೆನ್ನಲ್ಲೇ ಇದೀಗ, ‘ಅನ್ನಭಾಗ್ಯ’ದ ಫಲಾನುಭವಿಗಳಿಗೆ ಒಂದು ತಿಂಗಳ ಹಣ ಪಾವತಿಯಾಗದ ವಿಚಾರ ಗುರುವಾರ ವಿಧಾನಸಭೆಯಲ್ಲಿ ಸದ್ದು ಮಾಡಿತು.

ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯ ಮಹೇಶ್‌ ಟೆಂಗಿನಕಾಯಿ ಪ್ರಸ್ತಾಪಕ್ಕೆ ಉತ್ತರಿಸಿದ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್‌.ಮುನಿಯಪ್ಪ, 2025ರ ಜನವರಿ ತಿಂಗಳಲ್ಲಿ ಅನ್ನಭಾಗ್ಯದ 1.27 ಕೋಟಿ ಫಲಾನುಭವಿಗಳಿಗೆ ತಲಾ 5 ಕೆ.ಜಿ. ಅಕ್ಕಿ ಕೊಟ್ಟಿಲ್ಲ. ಅಕ್ಕಿ ಬದಲಾಗಿ ನೀಡುತ್ತಿದ್ದ ತಲಾ 170 ರು.ನಂತೆ 657 ಕೋಟಿ ರು. ಪಾವತಿ ಮಾಡಿಲ್ಲ ಎಂದು ಒಪ್ಪಿಕೊಂಡರು.

ಇದಕ್ಕೂ ಮುನ್ನ ಮಾತನಾಡಿದ ಮಹೇಶ್‌ ಟೆಂಗಿನಕಾಯಿ, ಈ ಹಿಂದೆ ಗೃಹಲಕ್ಷ್ಮೀ ಫಲಾನುಭವಿಗಳಿಗೆ ಎರಡು ತಿಂಗಳ ಕಂತು ಪಾವತಿಸಿರಲಿಲ್ಲ. ಈಗ ಅನ್ನಭಾಗ್ಯದಡಿ ಒಂದು ತಿಂಗಳ ಅಕ್ಕಿ ನೀಡಿಲ್ಲ. ಬದಲಾಗಿ ಹಣವನ್ನೂ ಪಾವತಿಸಿಲ್ಲ. ಒಂಬತ್ತು ಜಿಲ್ಲೆಗಳ ಆಹಾರ ಇಲಾಖೆ ಉಪನಿರ್ದೇಶಕರೇ ನೀಡಿರುವ ಮಾಹಿತಿಯಲ್ಲಿ ಇದು ಬೆಳಕಿಗೆ ಬಂದಿದೆ. ಏಕೆ ಆ ತಿಂಗಳ ಅಕ್ಕಿ ಅಥವಾ ಹಣ ಕೊಟ್ಟಿಲ್ಲ ಎಂದು ಪ್ರಶ್ನಿಸಿದರು.

ಗೊಂದಲದಿಂದ ಗ್ಯಾಪ್‌:

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅನ್ನಭಾಗ್ಯ ಯೋಜನೆ ಅಡಿ ಈ ಮೊದಲು ಸರ್ಕಾರ ಅಕ್ಕಿ ನೀಡಲಾಗುತ್ತಿತ್ತು. ಅಕ್ಕಿ ಕೊರತೆ ಉಂಟಾದ ಹಿನ್ನೆಲೆಯಲ್ಲಿ ತಲಾ 170 ರು. ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿತ್ತು. ಈ ನಡುವೆ 2025ರ ಜನವರಿ ಮಧ್ಯೆ ಕೇಂದ್ರ ಸರ್ಕಾರದ ಅಕ್ಕಿ ಕೊಡುವುದಾಗಿ ಹೇಳಿತು. ಅದರಂತೆ ನಾವು ಕೇಂದ್ರ ಸರ್ಕಾರದ ಆದೇಶ ಪಾಲಿಸಿದೆವು. ಫೆಬ್ರವರಿ ತಿಂಗಳಿಂದ ಬಿಪಿಎಲ್‌ ಕುಟುಂಬಗಳಿಗೆ ಹಣದ ಬದಲು ತಲಾ 5 ಕೆ.ಜಿ.ಅಕ್ಕಿ ವಿತರಿಸಲಾಗುತ್ತಿದೆ. ಈ ನಡುವೆ ಜನವರಿ ತಿಂಗಳದ್ದು ಗ್ಯಾಪ್‌ ಆಗಿದೆ ಎಂದು ಹೇಳಿದರು.

ಇದಕ್ಕೆ ಮಹೇಶ್‌ ಟೆಂಗಿನಕಾಯಿ, ಆ ಒಂದು ತಿಂಗಳ 657 ಕೋಟಿ ರು. ಹಣ ಎಲ್ಲಿಗೆ ಹೋಯಿತು ಎಂದು ಪ್ರಶ್ನಿಸಿದರು. ಆಗ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಆ ಹಣವನ್ನು ಖರ್ಚು ಮಾಡಿಲ್ಲ. ಆರ್ಥಿಕ ಇಲಾಖೆ ಬಳಿಯೇ ಇದೆ ಎಂದು ಸ್ಪಷ್ಟನೆ ನೀಡಿದರು.

ಯಾಕೆ ಬಾಕಿ? ಎಲ್ಲಿ ಹೋಯ್ತು ಹಣ?

ಈ ಹಿಂದೆ ರಾಜ್ಯ ಸರ್ಕಾರ 5 ಕೆ.ಜಿ. ಅಕ್ಕಿ ಬದಲು 170 ರು. ನೀಡುತ್ತಿತ್ತು

ಈ ನಡುವೆ ಕೇಂದ್ರವೇ ಅಕ್ಕಿ ನೀಡುವುದಾಗಿ ಹೇಳಿದ್ದರಿಂದ ಗೊಂದಲಇದರಿಂದ ಬಾಕಿ ಉಳಿದುಬಿಟ್ಟ ಜನವರಿ ತಿಂಗಳ 5 ಕೆ.ಜಿ. ಅಕ್ಕಿ ಹಣ

ಆರ್ಥಿಕ ಇಲಾಖೆ ಬಳಿ ಉಳಿದ ಅಕ್ಕಿ ಬದಲು ನೀಡುವ 657 ಕೋಟಿ ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬ್ಯಾನರ್ ಗಲಾಟೆ ಕೇಸ್‌: ಚಾರ್ಜ್ ಕೊಡದೆ ಪಟ್ಟು ಹಿಡಿದ ಡಿವೈಎಸ್‌ಪಿ? ಐಪಿಎಸ್ ಅಧಿಕಾರಿ ವರ್ಗಾವಣೆಯೇ ರದ್ದು!
ಸಿಎಂ ಡಿಸಿಎಂ ಫೋಟೋ ಬಳಸಿ ಬಿಜೆಪಿ 'ಸ್ಕ್ಯಾಮ್ ಲಾರ್ಡ್' ಪೋಸ್ಟ್: ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ ಕಾಂಗ್ರೆಸ್