ದೊಡ್ಡ ಹೋಟೆಲ್‌ಗಳಲ್ಲಿ ಕುದುರಿದ ವ್ಯಾಪಾರ : ವರ್ಷಾಂತ್ಯಕ್ಕೆ ಕುದುರುವ ಸಾಧ್ಯತೆ

By Kannadaprabha NewsFirst Published Sep 9, 2020, 8:21 AM IST
Highlights

ದೇಶದಲ್ಲಿ ಕೊರೋನಾ ಹಾವಳಿ ಹೆಚ್ಚಾಗಿದ್ದು, ಇದರಿಂದ ಹಲವು ಉದ್ಯಮಗಳ ಮೇಲೆ ಪರಿಣಾಮ ಬೀರಿತ್ತು. ಇದೀಗ ಮತ್ತೆ ಆರಂಭವಾಗಿದ್ದು, ಉದ್ಯಮದಲ್ಲಿ ಕೊಂಚ ಚೇತರಿಕೆ ಕಂಡಿದೆ.

ವರದಿ : ಲಿಂಗರಾಜು ಕೋರಾ

 ಬೆಂಗಳೂರು (ಸೆ.09): ರಾಜಧಾನಿಯಲ್ಲಿ ಅನ್‌ಲಾಕ್‌ 1.0ರ ಬಳಿಕ ಆರಂಭಗೊಂಡ ಹೋಟೆಲ್‌ ಉದ್ಯಮದ ವ್ಯಾಪಾರ ಮೂರು ತಿಂಗಳ ಸುಮಾರಿಗೆ ಶೇ.50ರಷ್ಟುಚೇತರಿಸಿಕೊಂಡಿದೆ. ಆದರೆ, ಉದ್ಯಮ ಇನ್ನೂ ಲಾಭದ ಹಂತ ತಲುಪಿಲ್ಲ. ಬಾಡಿಗೆ, ನೀರು, ವಿದ್ಯುತ್‌ ಬಿಲ್‌ ಎಲ್ಲವನ್ನೂ ಕಳೆದರೆ ಏನೂ ಉಳಿಯುತ್ತಿಲ್ಲ ಎನ್ನುತ್ತಾರೆ ಹೋಟೆಲ್‌ ಉದ್ಯಮಿಗಳು.

ಜೂನ್‌ನಲ್ಲಿ ಹೋಟೆಲ್‌ ಆರಂಭಕ್ಕೆ ಅನುಮತಿ ನೀಡಲಾಯಿತಾದರೂ ತೀವ್ರವಾಗಿದ್ದ ಕೊರೋನಾ ಆತಂಕದಿಂದ ಜನರು ಹೋಟೆಲ್‌ಗಳಿಗೆ ಬರಲು ಅಥವಾ ಹೊರಗಡೆ ಆಹಾರ ಸೇವಿಸಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಜುಲೈ ಆರಂಭವಾದರೂ ಶೇ.20ರಷ್ಟೂಚೇತರಿಸಿಕೊಂಡಿರಲಿಲ್ಲ. ಸರ್ಕಾರ ಜು.13ರಿಂದ ಬೆಂಗಳೂರನ್ನು ಮತ್ತೆ ಒಂದು ವಾರ ಲಾಕ್‌ಡೌನ್‌ ಮಾಡಿದ್ದರಿಂದ ಉದ್ಯಮಕ್ಕೆ ಮತ್ತೆ ಅಡ್ಡಿಯುಂತಾಯಿತು. ಲಾಕ್‌ಡೌನ್‌ ತೆರವು ಬಳಿಕ ವ್ಯಾಪಾರ ಸುಧಾರಿಸುತ್ತಿದೆ. ಪ್ರಸ್ತುತ ಕೊರೋನಾ ಪೂರ್ವ ಕಾಲದಲ್ಲಿ ಆಗುತ್ತಿದ್ದ ವ್ಯಾಪಾರ ವಹಿವಾಟಿಗೆ ಹೋಲಿಸಿದರೆ ಶೇ.50ರಷ್ಟುಚೇತರಿಸಿಕೊಂಡಿದೆ. ವರ್ಷಾಂತ್ಯದ ವೇಳೆಗೆ ಪೂರ್ಣ ಚೇತರಿಕೆಯಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ನಗರದ ವಿವಿಧ ಹೋಟೆಲ್‌ಗಳ ಮ್ಯಾನೇಜರ್‌ಗಳು.

ಕರ್ನಾಟಕದಲ್ಲಿ ಮಂಗಳವಾರ ಕೂಡ ಕೊರೋನಾ ಅಬ್ಬರ: ಗುಣಮುಖ ಸಂಖ್ಯೆಯಲ್ಲೂ ಹೆಚ್ಚಳ .

ಕೊರೋನಾ ಆತಂಕ ದೂರ ಮಾಡಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಕೆಲವು ಹೋಟೆಲ್‌ಗಳು ಸರ್ಕಾರ ಸೂಚಿಸಿದ ಮಾಸ್ಕ್‌ ಕಡ್ಡಾಯ, ಸಾಮಾಜಿಕ ಅಂತಕ, ಸ್ಯಾನಿಟೈಸರ್‌ ಬಳಕೆಯಂತಹ ಕೊರೋನಾ ನಿಯಂತ್ರಣ ಕ್ರಮಗಳ ಜೊತೆಗೆ ಪ್ರತಿ ಟೇಬಲ್‌ನಲ್ಲಿ ಆಸನಗಳ ಸಂಖ್ಯೆ ಕಡಿಮೆ ಮಾಡುವುದು. ಒಬ್ಬ ಗ್ರಾಹಕನಿಗೂ ಮತ್ತೊಬ್ಬ ಗ್ರಾಹಕನ ನಡುವೆ ಗಾಜಿನ ಪರದೆ, ಗ್ರಾಹಕರಿಗೆ ದೇಹದ ಉಷ್ಣಾಂಶ ಪರಿಶೀಲನೆ ಹೀಗೆ ಇನ್ನೂ ಕೆಲ ಮುಂಜಾಗ್ರತಾ ಕ್ರಮಗಳನ್ನೂ ಅನುಸರಿಸಿದ್ದರಿಂದ ಹೋಟೆಲ್‌ ನಿರ್ವಹಣೆಯ ಖರ್ಚುಗಳೂ ಹೆಚ್ಚಾಗಿವೆ ಎನ್ನುತ್ತಾರೆ ಎನ್‌.ಆರ್‌.ಕಾಲೋನಿಯ ದ್ವಾರಕಾ ಹೋಟೆಲ್‌ ಮ್ಯಾನೇಜರ್‌ ಶಿವಾನಂದ ಐತಾಳ್‌.

ಅಡಿಗಾಸ್‌, ಕಾಮತ್‌, ಸವಿರುಚಿ, ಸುಖಸಾಗರ್‌, ದ್ವಾರಕಾ, ನಮ್ಮೂರ ತಿಂಡಿ ಹೀಗೆ ಹೆಸರಾಂತ ಹೋಟೆಲ್‌ಗಳ ವ್ಯವಹಾರ ಅರ್ಧದಷ್ಟುಚೇತರಿಸಿಕೊಂಡಿರಬಹುದು. ಆದರೆ, ಸ್ಥಳಾವಕಾಶ ಕಡಿಮೆ ಇರುವ, ಸೆಲ್‌್ಫ ಸವೀರ್‍ಸ್‌ ಹೋಟೆಲ್‌ಗಳು ಹಾಗೂ ಸಣ್ಣ ಪುಟ್ಟದರ್ಶಿನಿ, ಕ್ಯಾಂಟೀನ್‌ಗಳಲ್ಲಿ ವ್ಯಾಪಾರ ಇನ್ನೂ ಶೇ.50ರಷ್ಟುಕೂಡ ಚೇತರಿಸಿಕೊಂಡಿಲ್ಲ. ಕೋವಿಡ್‌ ಪೂರ್ವ ಕಾಲದ ವ್ಯಾಪಾರಕ್ಕೆ ಹೋಲಿಸಿದರೆ ಈಗ 35ರಿಂದ 45ರಷ್ಟುಸುಧಾರಿಸಿದೆ. ಮೊದಲು ನಿತ್ಯ 10 ಸಾವಿರ ವ್ಯಾಪಾರ ಆಗುತ್ತಿದ್ದೆಡೆ ಈಗ 4 ಸಾವಿರ ದಾಟುತ್ತಿಲ್ಲ ಎಂದು ಮೈಸೂರು ರಸ್ತೆಯ ಸಿದ್ದಪ್ಪಾಜಿ ಕ್ಯಾಟೀನ್‌ ಮಾಲಿಕ ಕೆಂಪೇಗೌಡ ಹೇಳುತ್ತಾರೆ.

ಹೋಟೆಲ್‌ಗಳತ್ತ ಮುಖ ಮಾಡಿದ ಸಾರ್ವಜನಿಕರು

ಹೋಟೆಲ್‌ ಉದ್ಯಮ ವ್ಯವಹಾರ ಚೇತರಿಕೆ ಕುರಿತು ಮಾತನಾಡಿರುವ ಬೆಂಗಳೂರು ಹೋಟೆಲ್‌ ಮಾಲಿಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್‌ ಅವರು, ಬೆಂಗಳೂರನ್ನು 2ನೇ ಬಾರಿಗೆ ಒಂದು ವಾರ ಸಂಪೂರ್ಣ ಲಾಕ್‌ಡೌನ್‌ ಮಾಡಿ ಅನ್‌ಲಾಕ್‌ ಮಾಡಿದ ನಂತರ ಶೇ.80 ರಷ್ಟುಹೋಟೆಲ್‌ ಉದ್ಯಮ ಆರಂಭಗೊಂಡಿದೆ. ಲಾಕ್‌ಡೌನ್‌ನಿಂದ ಚೇತರಿಸಿಕೊಳ್ಳಲಾಗದ ಮೊದಲೇ ನಷ್ಟದಲ್ಲಿದ್ದ ಕೆಲ ಹೋಟೆಲ್‌ಗಳು ಬಾಗಿಲು ಹಾಕಿರುವ ಉದಾಹರಣೆಗಳೂ ಇವೆ.

ಕೊರೋನಾ ಭೀತಿ ನಡುವೆಯೂ ಕರ್ನಾಟಕದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್ ..

ಆರಂಭಗೊಂಡ ಹೋಟೆಲ್‌ಗಳಿಗೆ ಕಳೆದ 15 ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರಲಾರಂಭಿಸಿದ್ದಾರೆ. ಇದರಿಂದ ಪ್ರಸ್ತುತ ವ್ಯಾಪಾರ ಕೋವಿಡ್‌ ಪೂರ್ವ ಕಾಲಕ್ಕೆ ಹೋಲಿಸಿದರೆ ಶೇ.50ರಷ್ಟುಚೇತರಿಸಿಕೊಂಡಿದೆ. ಅಂದರೆ, ಮೊದಲು ನಿತ್ಯ ಒಂದು ಲಕ್ಷ ವ್ಯಾಪಾರವಾಗುತ್ತಿದ್ದ ಜಾಗದಲ್ಲಿ ಈಗ 50 ಸಾವಿರ ಆಗುತ್ತಿದೆ. ಆದರೆ, ಲಾಭ ಬರುತ್ತಿಲ್ಲ. ನಿರೀಕ್ಷೆಯಂತೆ ಕೋವಿಡ್‌ ಕಡಿಮೆಯಾಗುತ್ತಾ ಸಾಗಿದರೆ ಹೊಸ ವರ್ಷ 2021ರ ಆರಂಭದ ವೇಳೆಗೆ ಬಹುಶಃ ಪೂರ್ಣ ಪ್ರಮಾಣದಲ್ಲಿ ವ್ಯಾಪಾರ ಚೇತರಿಕೆ ಕಾಣಬಹುದು ಎಂದು ಹೇಳಿದ್ದಾರೆ.

click me!