ಅನಂತ್ ವಿಧಿವಶರಾದರೂ ನಿಲ್ಲದ ಮಕ್ಕಳ ಊಟ!

By Web DeskFirst Published Nov 13, 2018, 1:42 PM IST
Highlights

ಅಪರೂಪದ ನಾಯಕ, ಸರಳ ವ್ಯಕ್ತಿ, ಮೇಧಾವಿ ರಾಜಕಾರಣಿ, ಮುತ್ಸದ್ದಿ ನಾಯಕ ಅನಂತ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಹೀಗಿದ್ದರೂ ಬಡ ಮಕ್ಕಳ ಸೇವೆ ಮಾತ್ರ ಯಾವುದೇ ತೊಡಕಿಲ್ಲದೆ ಸಾಗಿದೆ.

ಕೇವಲ ರಾಜಕೀಯದಲ್ಲಿ ಮಾತ್ರ ತಮ್ಮ ಛಾಪು ಮೂಡಿಸದ ಕೇಂದ್ರ ಸಚಿವ ಅನಂತ್ ಕುಮಾರ್ ಸಮಾಜ ಸೇವೆ ಹಾಗೂ ಪರಿಸರ ರಕ್ಷಣೆಯಲ್ಲೂ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅದಕ್ಕೆ ವೇದಿಕೆಯಾಗಿದ್ದು ಅವರೇ ಸ್ಥಾಪಿಸಿದ ಅದಮ್ಯ ಚೇತನ ಸಂಸ್ಥೆ.

ಸಾಮಾಜಿಕ ಒಳಿತಿಗಾಗಿ ಆರಂಭಿಸಿರುವ ಆದಮ್ಯ ಚೇತನವು ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ರಾಜಕೀಯದಲ್ಲಿ ಬಿಡುವಿಲ್ಲದ ಕೆಲಸದಲ್ಲಿ ಅನಂತ್ ಕುಮಾರ್ ತೊಡಗಿರುವ ಹಿನ್ನೆಲೆಯಲ್ಲಿ ಅದ್ಯಮ ಚೇತನ ಸಂಸ್ಥೆಯನ್ನು ಅವರ ಪತ್ನಿ ಡಾ.ತೇಜಸ್ವಿನಿ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಮೂಲಕ ಅನಂತ್ ಕುಮಾರ್ ಸಾಮಾಜಿಕ ಕಾರ್ಯಗಳಿಗೆ ತೇಜಸ್ವಿನಿ ಬೆನ್ನೆಲುಬಾಗಿ ನಿಂತಿದ್ದಾರೆ. ಅನಂತ್ ಸಂಸ್ಥೆಯ ಗೌರವ ಪೋಷಕರಾಗಿದ್ದರೆ, ಪತ್ನಿ ತೇಜಸ್ವಿನಿ ವ್ಯವಸ್ಥಾಪಕ ಟ್ರಸ್ಟಿ ಹಾಗೂ ಅಧ್ಯಕ್ಷರಾಗಿದ್ದಾರೆ.

ಅನ್ನಪೂರ್ಣ ಎಂಬ ಹೆಸರಲ್ಲಿ ಅದಮ್ಯ ಚೇತನದ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ಜೋಧಪುರದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಶಾಲೆಗಳ ಎರಡು ಲಕ್ಷದಷ್ಟು ಮಕ್ಕಳಿಗೆ ಬಿಸಿಯೂಟ ತಲುಪಿಸಲಾಗುತ್ತಿದೆ. ಸರ್ಕಾರ ಮತ್ತು ದಾನಿಗಳ ಸಹಾಯದಿಂದ ವ್ಯವಸ್ಥಿತವಾದ ಅಡುಗೆ ಮನೆ ಉಪಕರಣಗಳನ್ನು ಬಳಕೆ ಮಾಡಿ ಪೌಷ್ಟಿಕ, ರುಚಿಕರ ಮತ್ತು ಆರೋಗ್ಯದಾಯಕವಾದ ಆಹಾರವನ್ನು ತಯಾರಿಸಲಾಗುತ್ತಿದೆ. ಇದೆಲ್ಲವನ್ನು ಅನಂತ ಆರಂಭಿಸಿದರೆ, ಅದನ್ನು ಅವರ ಪತ್ನಿ ತೇಜಸ್ವಿನಿ ಮುಂದಾಳತ್ವದಲ್ಲಿ ನಡೆಸಿಕೊಂಡು ಹೋಗಲಾಗುತ್ತಿದೆ. ಅನಂತ್ ಕುಮಾರ್ ತಾಯಿ ಗಿರಿಜಾ ಶಾಸ್ತ್ರಿ ಅವರು ಬಡವರ ಮತ್ತು ಸೌಲಭ್ಯ ವಂಚಿತರ ಸೇವೆಗಾಗಿ ತಮ್ಮ ಜೀವನವನ್ನು ಡುಪಾಗಿಟ್ಟಿದ್ದರು. ಅವರ ನೆನಪಿಗಾಗಿ ಅದಮ್ಯ ಚೇತನ ಸಂಸ್ಥೆ ಆರಂಭಿಸಲಾಗಿದೆ. 1998ರಲ್ಲಿ ನೋಂದಣಿಯಾದ ಅದಮ್ಯ ಸಂಸ್ಥೆಯು ಅನ್ನ, ಆರೋಗ್ಯ ಮತ್ತು ಶಿಕ್ಷಣವು ಎಲ್ಲರಿಗೂ ಸಿಗಬೇಕು ಎಂಬ ಉದ್ದೇಶದಿಂದ ಕೆಲಸ ಮಾಡಲಾಗುತ್ತಿದೆ. 1998ರಲ್ಲಿ ಬಡ ಹೆಣ್ಣುಮಕ್ಕಳಿಗಾಗಿ ಉಚಿತವಾಗಿ ಹೊಲಿಗೆ ತರಬೇತಿ ನೀಡುವ ಮೂಲಕ ಸಂಸ್ಥೆ ಆರಂಭವಾಗಿದ್ದು, ನಂತರ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ಯೋಜನೆ ಪ್ರಾರಂಭಿಸಲಾಯಿತು. ತದನಂತರ ರಕ್ತದಾನಿ ಶಿಬಿರ, ಪರಿಸರ ರಕ್ಷಣೆಗಾಗಿ ಗಿಡ ಬೆಳೆಸಿ ಪೋಷಿಸುವುದು ಸೇರಿದಂತೆ ಇತರೆ ಸಾಮಾಜಿಕ ಕಾರ್ಯದಲ್ಲಿ ಅದಮ್ಯ ಚೇತನವು ತೊಡಗಿಸಿಕೊಂಡಿದೆ. 

ಸಾಮಾಜಿಕ ಮೌಲ್ಯಗಳನ್ನು ಸಮರ್ಥವಾಗಿ ಹರಡಲು ಸಂಸ್ಕೃತಿಯು ಅತ್ಯುತ್ತಮ ಮಾಧ್ಯಮ ಎಂಬುದನ್ನು ಅರಿತು ಪ್ರತಿ ವರ್ಷ ಸಂಸ್ಕೃತಿಯ ಮೌಲ್ಯಗಳನ್ನು, ವಿಜ್ಞಾನದ ಕುರಿತು ಸೇರಿದಂತೆ ಹಲವು ವಿಷಯಗಳ ಬಗ್ಗೆ ಜನತೆಗೆ ತಿಳಿಸುವ ನಿಟ್ಟಿನಲ್ಲಿ ಅದಮ್ಯ ಉತ್ಸವವನ್ನು 2008ರಲ್ಲಿ ಆರಂಭಿಸಲಾಯಿತು. 

"

ಅನಂತ್ ಕುಮಾರ್ ವಿಧಿವಶರಾದರೂ ಮಕ್ಕಳ ಸೇವೆ ನಿರಂತರ

ಅಪರೂಪದ ನಾಯಕ, ಸರಳ ವ್ಯಕ್ತಿ, ಮೇಧಾವಿ ರಾಜಕಾರಣಿ, ಮುತ್ಸದ್ದಿ ನಾಯಕ ಅನಂತ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಹೀಗಿದ್ದರೂ ಬಡ ಮಕ್ಕಳ ಸೇವೆ ಮಾತ್ರ ಯಾವುದೇ ತೊಡಕಿಲ್ಲದೆ ಸಾಗಿದೆ. ದಿನನಿತ್ಯ ಬೆಂಗಳೂರಿನ 300 ಶಾಲೆಯ 50 ಸಾವಿರ ಮಕ್ಕಳಿಗೆ ಊಟ ರವಾನಿಸಲಾಗುತ್ತಿದ್ದು, ನಿನ್ನೆ ಸೋಮವಾರವೂ ಅದಮ್ಯ ಚೇತನದಲ್ಲಿ ಊಟ ತಯಾರಾಗಿತ್ತು. ಆದರೆ ಶಾಲೆ ರಜೆ ಘೋಷಣೆಯಾದ ಹಿನ್ನಲೆ ಅನಾಥ ಆಶ್ರಮಗಳಿಗೆ ಊಟ ಹಂಚಿಕೆ ಮಾಡಲಾಗಿದೆ. ಇಂದು ಕೂಡ ಮಕ್ಕಳಿಗೆ ಅದಮ್ಯ ಚೇತನ ಸಂಸ್ಥೆ ಊಟ ತಲುಪಿಸಲಾಗಿದೆ. ಈ ಮೂಲಕ ಅನಂತ್ ಕುಮಾರ್ ವಿಧಿವಶರಾಗಿದ್ದರೂ ತಮ್ಮ ಸಮಾಜಮುಖಿ ಕೆಲಸಗಳಿಂದ ಅಮರರಾಗಿದ್ದಾರೆ.

click me!