
ಮೈಸೂರು (ಸೆ.30): ನಗರದ ಜಿಆರ್.ಎಸ್. ಸ್ನೋ ಪಾರ್ಕ್‌ನಲ್ಲಿರುವ ಸ್ನೋ ಅಂಬಾರಿಯ ಆನೆಗೆ ಐರಾವತ ಎಂದು ನಟಿ ರಂಜನಿ ರಾಘವನ್ ಹೆಸರಿಟ್ಟರು. ಮಾವುತರ ಕುಟುಂಬಗಳಿಂದ ಕಳೆದ ವಾರ ಭವ್ಯವಾಗಿ ಅನಾವರಣಗೊಂಡ ಜನತ್ತಿನ ಮೊದಲ ಸ್ನೋ ಅಂಬಾರಿ ವೀಕ್ಷಿಸಲು ಜನಪ್ರಿಯ ನಟಿ ಹಾಗೂ ನಿರ್ದೇಶಕಿ ರಂಜನಿ ರಾಘವನ್ ಅವರು ಜಿಆರ್.ಎಸ್ ಸ್ನೋ ಪಾರ್ಕ್ ಗೆ ಆಗಮಿಸಿದ್ದರು, ತಮ್ಮ ಭೇಟಿಯ ಸಂದರ್ಭದಲ್ಲಿ ರಂಜನಿಯವರು ಆ ಸ್ನೋ ಆನೆಗೆ ಪೌರಾಣಿಕ ಶಕ್ತಿಯ ಹಾಗೂ ದೈವತ್ವದ ಪ್ರತೀಕವಾದ ಬಿಳಿ ಆನೆ ಐರಾವತ ಎಂಬ ಹೆಸರನ್ನು ನೀಡುವ ಮೂಲಕ ವೈಯಕ್ತಿಕ ಸ್ವರ್ಶವನ್ನು ನೀಡಿದರು.
ಮೈಸೂರಿನ ವೈಭವವನ್ನು ಇಷ್ಟು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿರುವುದು ನೋಡುವುದು ಅದ್ಬುತ ಸ್ನ್ನೋ ಅಂಬಾರಿ ಇಂದಿನ ಪೀಳಿಗೆಗೆ ದಸರಾ ಹಬ್ಬವನ್ನು ಜೀವಂತವಾಗಿರಿಸುತ್ತದೆ. ಆನೆಗೆ ಐರಾವತ ಎಂದು ಹೆಸರಿಡುವುದು ಸಹಜವೆನಿಸಿತು. ಅದು ಶಕ್ತಿ ದೈವತ್ವ ಮತ್ತು ಮೈಸೂರಿನ ಆನೆಗಳ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಅಲ್ಲಿದ್ದ ಅಭಿಮಾನಿಗಳಿಗೂ ಭೇಟಿ ನೀಡಿದವರಿಗೆಲ್ಲ ಹೇಳಿದರು.
ಜಿಆರ್.ಎಸ್. ಫ್ಯಾಂಟಸಿ ಪಾರ್ಕ್ ನಲ್ಲಿ ಹೈ ಟೀ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಭಿಮಾನಿಗಳೊಂದಿಗೆ ಮಾತನಾಡಿ, ಫೋಟೋಗಳಿಗಾಗಿ ಪೋಸ್ ನೀಡಿ, ಕುಟುಂಬಗಳೊಂದಿಗೆ ಹಬ್ಬದ ಹರ್ಷ ಹಂಚಿಕೊಂಡು ಅವರ ಹಾಜರಾತಿಯಿಂದಲೇ ಈ ದಸರಾದ ಅತ್ಯಂತ ಚರ್ಚೆಯ ಆಕರ್ಷಣೆಗೆ ಇನ್ನಷ್ಟು ಉತ್ಸಾಹ ತುಂಬಿತು.
ರಂಜನಿಯವರು ನಮ್ಮೊಂದಿಗೆ ಇದ್ದರಿಂದ ನಾವು ತುಂಬ ಸಂತೋಷಪಟ್ಟೆವು ಎಂದು ಜಿಆರ್.ಎಸ್. ಸ್ನೋ ಪಾರ್ಕ್‌ನ ನಿರ್ದೇಶಕ ಆಶ್ವಿನ್ ಡಾಂಗೇ ಹೇಳಿದರು. ಮಾವುತರು ಅನಾವರಣಗೊಳಿಸಿದ್ದು. ಈಗ ರಂಜನಿಯವರು ಹೆಸರಿಡಿರುವುದರಿಂದ ಸ್ನೋ ಅಂಬಾರಿ ಕೇವಲ ಶಿಲ್ಪವಲ್ಲ, ಅದಕ್ಕೆ ಕಥೆ, ಆತ್ಮ ಮತ್ತು ವ್ಯಕ್ತಿತ್ವ ಬಂದಿದೆ. ದಸರಾ ಮುಗಿದ ಮೇಲು ಜನ ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ.
ಈ ದಸರಾದಲ್ಲಿ ಸ್ನೋ ಅಂಬಾರಿಯನ್ನು ಅನಾವರಣಗೊಳಿಸುವುದರೊಂದಿಗೆ ಜಿಆರ್‌ಎಸ್ ಕುಟುಂಬಗಳು ಮತ್ತು ಅತಿಥಿಗಳಿಗೆ ಸ್ನೋ ಹಾಲ್ ಒಳಗೆ ಅನಿಯಮಿತ ಸಮಯವನ್ನು ಅನುಮತಿಸುತ್ತಿದೆ, ಜಿಆರ್.ಎಸ್. ಸ್ನೋ ಪಾರ್ಕ್ ವರ್ತುಲ ರಸ್ತೆಯಲ್ಲಿ ಜಿಆರ್.ಎಸ್. ಫ್ಯಾಂಟಸಿ ಪಾರ್ಕ್ ಹತ್ತಿರವೇ ನಗರದ ಕೇಂದ್ರದಿಂದ ಕೇವಲ 5 ಕಿ.ಮೀ ದೂರದಲ್ಲಿದೆ. ಟೆಕೆಟ್ ಗಳನ್ನು ಆನ್‌ಲೈನ್ ಮತ್ತು ಸ್ಥಳದಲ್ಲಿಯೂ ಪಡೆಯಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ