ದರ್ಶನ್ ಕೊಲೆಗಡುಕನಲ್ಲ: ಕಾಂಗ್ರೆಸ್‌ ಶಾಸಕ ಉದಯ್ ಗೌಡ

Published : Jun 22, 2024, 08:42 AM IST
ದರ್ಶನ್ ಕೊಲೆಗಡುಕನಲ್ಲ: ಕಾಂಗ್ರೆಸ್‌ ಶಾಸಕ ಉದಯ್ ಗೌಡ

ಸಾರಾಂಶ

ದರ್ಶನ್‌ರದ್ದು ಕೊಲೆ ಮಾಡುವ ವ್ಯಕ್ತಿತ್ವ ಅಲ್ಲ. ಸ್ವಲ್ಪ ಸಿಡುಕು ಮನೋಭಾವ ಹೊಂದಿದ್ದಾರೆ. ಸಹಜವಾಗಿಯೇ ರಫ್ ಅಂಡ್ ಟಫ್ ಆಗಿ ವರ್ತಿಸುತ್ತಿದ್ದರು. ಆದರೆ ಕೊಲೆಗಡುಕ ಅಲ್ಲ: ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಉದಯ್ ಗೌಡ 

ಬೆಂಗಳೂರು(ಜೂ.22):  'ನಟ ದರ್ಶನ್ ಅವರದ್ದು ಸಿಡುಕು ಹಾಗೂ ಒರಟು ಸ್ವಭಾವ ನಿಜ. ಆದರೆ ಆತ ಕೊಲೆಗಡುಕ ಅಲ್ಲ' ಎಂದು ಮದ್ದೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಉದಯ್ ಗೌಡ ಸಮರ್ಥಿಸಿಕೊಂಡಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ದರ್ಶನ್‌ರದ್ದು ಕೊಲೆ ಮಾಡುವ ವ್ಯಕ್ತಿತ್ವ ಅಲ್ಲ. ಸ್ವಲ್ಪ ಸಿಡುಕು ಮನೋಭಾವ ಹೊಂದಿದ್ದಾರೆ. ಸಹಜವಾ ಗಿಯೇ ರಫ್ ಅಂಡ್ ಟಫ್ ಆಗಿ ವರ್ತಿಸುತ್ತಿದ್ದರು. ಆದರೆ ಕೊಲೆಗಡುಕ ಅಲ್ಲ ಎಂದು ಹೇಳಿದರು.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಇಂದು ದರ್ಶನ್‌ ಪರಪ್ಪನ ಅಗ್ರಹಾರ ಜೈಲಿಗೆ?

ಹತ್ಯೆ ಖಂಡನೀಯ. ಆದರೆ ಪ್ರಕರಣದಲ್ಲಿ ದರ್ಶನ್ ಪಾತ್ರ ಏನು ಎಂಬುದು ತನಿಖೆಯಿಂದ ಅಷ್ಟೇ ಬಹಿರಂಗವಾಗಬೇಕು. ನನಗೂ ಪ್ರಕರಣದ ಬಗ್ಗೆ ಮಾಹಿತಿ ಇಲ್ಲ. ನಿತ್ಯ ಮಾಧ್ಯಮಗಳಲ್ಲಿ ತೋರಿಸುವಷ್ಟೇ ನನಗೂ ಗೊತ್ತಿದೆ. ದರ್ಶನ್ ಮಾಡಿದ್ದಾ ರೆಯೇ ಅಥವಾ ಜೊತೆಗೆ ಇರುವವರು ಹತ್ಯೆ ಮಾಡಿ ಅದು ಇವರಿಗೂ ಸುತ್ತಿಕೊಂ ಡಿತೇ ಎಂಬುದು ಇನ್ನಷ್ಟೇ ತಿಳಿಯಬೇಕು. ನನಗೆ ಗೊತ್ತಿರುವಂತೆ ಕೊಲೆ ಮಾಡುವ ವ್ಯಕ್ತಿತ್ವ ಅವರದ್ದಲ್ಲ. ನಿಮ್ಮ (ಮಾಧ್ಯಮಗಳ) ಮೇಲೂ ಹಲವು ಬಾರಿ ರೇಗಾಡಿದ್ದಾರೆ. ಅಷ್ಟೇ ಹೊರತು ಕೊಲೆ ಮಾಡುವಂತಹ ಕಟುಕ ಸಮರ್ಥಿಸಿಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ
ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!