ಜೈಲಿಂದ ಹೊರಬರುವ ಮುನ್ನ ನಟ ದರ್ಶನ್ ಭೇಟಿಯಾಗದೆ ಸುಳ್ಳು ಕಥೆ ಕಟ್ಟಿದ್ರಾ ಸಿದ್ದರೂಢ?

By Gowthami K  |  First Published Jul 28, 2024, 9:43 AM IST

ಜೈಲಲ್ಲಿರೋ ದರ್ಶನ್ ಬಗ್ಗೆ ಅಭಿಮಾನಿಯ ಮಾತು ಈಗ ಸಂಕಷ್ಟಕ್ಕೀಡಾಗಿದೆ. ಜೈಲಲ್ಲಿ ನಟ ದರ್ಶನ್ ನನ್ನು ಭೇಟಿಯಾಗದೆ ಸುಳ್ಳು ಕಥೆ ಕಟ್ಟಿದ್ರಾ ಸಿದ್ದರೂಢ? ಎಂಬ ಅನುಮಾನ ವ್ಯಕ್ತವಾಗಿದೆ.


ಬೆಂಗಳೂರು (ಜು.28): ಚಿತ್ರದುರ್ಗದ ರೇಣುಕಸ್ವಾಮಿಯನ್ನು ಬೆಂಗಳೂರಿಗೆ ಅಪಹರಣ ಮಾಡಿಕೊಂಡು ಬಂದು ಕೊಲೆ ಮಾಡಿರುವ ಆರೋಪದಲ್ಲಿ ಕೇಂದ್ರ ಕಾರಾಗೃಹ ಸೇರಿರುವ ನಟ ದರ್ಶನ್‌ನನ್ನು ಇತ್ತೀಚೆಗಷ್ಟೇ ಸಹ ಖೈದಿಯೊಬ್ಬರು ಭೇಟಿಯಾಗಿ ಅವರ ಬಳಿ ಮಾತುಕತೆ ನಡೆಸಿದ್ದು, ದರ್ಶನ್‌ ಅವರು ತುಂಬಾ ಪಶ್ಚತಾಪ ಪಡುತ್ತಿದ್ದಾರೆ ಎಂದು ಸನ್ನಡತೆಯ ಮೇಲೆ ಜೈಲಿನಿಂದ ಹೊರಬಂದ ಸಿದ್ದರೂಢ ಎಂಬವರು ಹೇಳಿದ್ದರು.

ಇದು ಭಾರೀ ಸುದ್ದಿಯಾಗಿತ್ತು. ಆದರೆ ಜೈಲಲ್ಲಿರೋ ದರ್ಶನ್ ಬಗ್ಗೆ ಅಭಿಮಾನಿಯ ಮಾತು ಈಗ ಸಂಕಷ್ಟಕ್ಕೀಡಾಗಿದೆ. ಜೈಲಲ್ಲಿ ನಟ ದರ್ಶನ್ ನನ್ನು ಭೇಟಿಯಾಗದೆ ಸುಳ್ಳು ಕಥೆ ಕಟ್ಟಿದ್ರಾ ಸಿದ್ದರೂಢ? ಎಂಬ ಅನುಮಾನ ವ್ಯಕ್ತವಾಗಿದೆ.

Latest Videos

undefined

ದರ್ಶನ್ ಬಿಡುಗಡೆಗಾಗಿ ಕೊಲ್ಲೂರಿನಲ್ಲಿ ಪತ್ನಿ ವಿಜಯಲಕ್ಷ್ಮಿ ನವಚಂಡಿಕಾ ಹೋಮ!, ಏನಿದರ ವಿಶೇಷ?

ದರ್ಶನ್ ಭೇಟಿ ಮಾಡಿಸಲೇ ಇಲ್ಲವೆಂದು ಕಾರಾಗೃಹ ಇಲಾಖೆಗೆ  ಜೈಲಾಧಿಕಾರಿಗಳು ರಿಪೋರ್ಟ್ ಕೊಟ್ಟಿದ್ದಾರೆ. ಸನ್ನಡತೆ ಮೇಲೆ ರಿಲೀಸ್ ಆದ ಸಿದ್ದರೂಢ ಮಾಧ್ಯಮಕ್ಕೆ ಬಂದು ನೀಡಿರುವ ಹೇಳಿಕೆ ಬಗ್ಗೆ ಜೈಲಾಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಕಾರಾಗೃಹ ಇಲಾಖೆಯಿಂದ ಬಳ್ಳಾರಿ ಮತ್ತು ಸೆಂಟ್ರಲ್ ಜೈಲಾಧಿಕಾರಿಗಳ ಬಳಿ ಕಾರಾಗೃಹ ಇಲಾಖೆ ರಿಪೋರ್ಟ್ ಕೇಳಿತ್ತು. ಎರಡೂ ಕಡೆ ಜೈಲಾಧಿಕಾರಿಗಳಿಗೆ ಮಾಹಿತಿ ನೀಡುವಂತೆ ನೋಟೀಸ್ ಕೊಟ್ಟಿತ್ತು. ಇದೀಗ ಈ ನೋಟೀಸ್‌ ಗೆ ಉತ್ತರ ಕೊಟ್ಟಿರುವ ಅಧಿಕಾರಿಗಳು , ಕಾರಾಗೃಹ ಇಲಾಖೆಗೆ ದರ್ಶನ್ ಭೇಟಿಗೆ ಸಿದ್ದರೂಢನನ್ನ ಬಿಡಲೇ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

ಜುಲೈ 8ರಂದು  ಸೆಂಟ್ರಲ್ ಜೈಲಿಗೆ ಬಳ್ಳಾರಿ ಜೈಲಿಂದ ಬಂದಿದ್ದು, ಜುಲೈ9ರಂದು  ರಿಲೀಸ್ ಮಾಡಲಾಗಿದೆ. ದರ್ಶನ್ ಭದ್ರತಾ ಸೆಲ್ ನಲ್ಲಿದ್ದು ಯಾರಿಗೂ ಅವಕಾಶ ಕೊಡಲಿಲ್ಲ. ಜೈಲಿಗೆ ಬಿಟ್ಟಾಗ ಸೆಂಟ್ರಲ್ ಜೈಲು ಅಧಿಕಾರಿಗಳ ಅಧೀನದಲ್ಲಿರುತ್ತಾರೆ ಎಂದು ಬಳ್ಳಾರಿ ಜೈಲಾಧಿಕಾರಿಗಳು ಉತ್ತರಿಸಿದ್ದಾರೆ. ಸಿದ್ದರೂಢನನ್ನ ಸನ್ನಡತೆ ಮೇಲೆ ಬಿಡಲು ರೆಫರ್ ಮಾಡಿದ ಅಧಿಕಾರಿ ಬಳಿಯೂ ರಿಪೋರ್ಟ್ ಕೇಳಲಾಗಿದೆ.

ಜೈಲಿನಲ್ಲಿರುವ ದರ್ಶನ್ ಈಗ ಹೇಗಿದ್ದಾರೆ? ನಟನ ದಿನಚರಿ ಬಿಟ್ಟಿಟ್ಟ ಅಭಿಮಾನಿ

ಸಿದ್ಧರೂಢ ಜೈಲು ಸೇರಿದ್ಯಾಕೆ?
ಕೊಲೆ ಪ್ರಕರಣದಲ್ಲಿ ಚಿತ್ರದುರ್ಗ, ಬಳ್ಳಾರಿ ಹಾಗೂ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಆರೋಪಿ ಸಿದ್ಧರೂಢ ಸನ್ನಡತೆಯ ಆಧಾರದಲ್ಲಿ ಬಿಡುಗಡೆಯಾಗಿದ್ದಾರೆ. ಚಿತ್ರದುರ್ಗದ ತುರುವನೂರಿನ ಸಿದ್ಧರೂಢ ರೈತ ಕುಟುಂಬದಿಂದ ಬಂದವನಾಗಿದ್ದು, ತಂದೆ ಗುತ್ತಿಗೆದಾರ ಆಗಿದ್ದರು. ಇಂಜಿನಿಯರ್ ಒಬ್ಬರು ಒಂದು ದಿನ ಲಂಚಕ್ಕೆ ಬೇಡಿಕೆ ಇಟ್ಟಿದ್ದರಿಂದ ತಂದೆ ಮತ್ತು ಇಂಜಿನಿಯರ್ ಗೆ ಗಲಾಟೆ ಆಗಿ ತಂದೆ ಮೇಲೆ ಹಲ್ಲೆ ಮಾಡಿದ್ದರು. ಇದರಿಂದ ತಂದೆಗೆ ಹೊಡೆದಾಗ ಮಕ್ಕಳಿಗೆ ಸಹಜವಾಗಿ ಕೋಪ ಬರುತ್ತದೆ. ಹೀಗಾಗಿ ದುಡುಕಿದೆ ಎಂದು ಹೇಳಿದ್ದರು. ಆದರೆ ಕೊಲ್ಲುವ ಹಕ್ಕು ಯಾರಿಗೂ ಇಲ್ಲ. ಆತುರದ ನಿರ್ಧಾರ ಮಾಡಿದ ನಾನು ಸುಮಾರು 21 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಸನ್ನಡತೆಯ ಆಧಾರದ ಮೇಲೆ ಜೈಲಿನಿಂದ ಹೊರಬಂದಿದ್ದೇನೆ ಎಂದು ಮಾಧ್ಯಮಗಳ ಬಳಿ ಹೇಳಿಕೊಂಡಿದ್ದರು.

ನಾನು ದರ್ಶನ್ ಅಪ್ಪಟ ಅಭಿಮಾನಿ ಹೀಗಾಗಿ ಒಂದು ಬಾರಿ ಭೇಟಿ ಮಾಡುವಂತೆ ಮನವಿ ಮಾಡಿಕೊಂಡಿದ್ದೆ, ಒತ್ತಾಯಕ್ಕೆ ಮಣಿದ ಜೈಲಾಧಿಕಾರಿಗಳು ಒಟ್ಟು 12 ನಿಮಿಷಗಳ ಕಾಲ  ಭೇಟಿಗೆ ಅವಕಾಶ ಕೊಟ್ಟರು. ದರ್ಶನ್ ಭೇಟಿ ಬಳಿಕ ಅವರು ಪಶ್ಚಾತಾಪ ಪಡುತ್ತಿರುವುದು ನಾನು ಅವರ ಕಣ್ಣಲ್ಲಿ ನೋಡಿದೆ. ದೇವರು ಅವಕಾಶ ಕೊಟ್ಟರೆ ರೇಣುಕಾಸ್ವಾಮಿ ಕುಟುಂಬದವರ ಕಾಲಿಗೆ ಬೀದ್ದು ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದರು ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದರು. ಇದರ ಜೊತೆಗೆ ದರ್ಶನ್ ಅವರಿಗೆ ನಾನು ಧ್ಯಾನವನ್ನು ಹೇಳಿಕೊಟ್ಟಿದ್ದೇನೆ ಎಂದೆಲ್ಲ ಹೇಳಿದ್ದರು.

click me!