ಸಂವಿಧಾನ ಪರವಾದ ಏಕೈಕ ಪಕ್ಷ ಬಿಜೆಪಿ ಎಂದ ಯದುವೀರ್ ಒಡೆಯರ್‌ಗೆ ಟಾಂಗ್ ಕೊಟ್ಟ ನಟ ಚೇತನ್ 

By Mahmad Rafik  |  First Published Sep 6, 2024, 9:43 PM IST

ಸಂವಿಧಾನ ಪರವಾದ ಏಕೈಕ ಪಕ್ಷ ಬಿಜೆಪಿ ಎಂಬ ಸಂಸದ ಯದುವೀರ್ ಒಡೆಯರ್ ಹೇಳಿಕೆಗೆ ನಟ ಚೇತನ್ ಟಾಂಗ್ ನೀಡಿದ್ದಾರೆ. ಭ್ರಾತೃತ್ವವು ಸಂವಿಧಾನದ ಆದರ್ಶವಾಗಿದ್ದು, ಮುಸ್ಲಿಂ ಮತ್ತು ಕ್ರಿಶ್ಚಿಯನ್ ವಿರೋಧಿ ನೀತಿಗಳು ಭ್ರಾತೃತ್ವಕ್ಕೆ ವಿರುದ್ಧವಾಗಿದೆ ಎಂದು ಚೇತನ್ ಹೇಳಿದ್ದಾರೆ.


ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಪರವಾದ ಏಕೈಕ ಪಕ್ಷ ಬಿಜೆಪಿ ಎಂದ ಕೊಡಗು-ಮೈಸೂರು ಸಂಸದ ಯದುವೀರ್ ಒಡೆಯರ್‌ ಅವರಿಗೆ ನಟ ಚೇತನ್ ಟಾಂಗ್ ನೀಡಿದ್ದಾರೆ. ಮೈಸೂರಿನಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ್ದ ಸಂಸದರು, ಭಾರತ ಅಭಿವೃದ್ಧಿ ಹೊಂದವುದು ಬಿಜೆಪಿಯಿಂದ ಮಾತ್ರ ಸಾಧ್ಯ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿ ಸೇರ್ಪಡೆಯಾಗಬೇಕು. ಇಂದು ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ ಅಂದ್ರೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಕಾರಣ. ಭಾರತವನ್ನು ಆರ್ಥಿಕವಾಗಿ ದೊಡ್ಡ ದೇಶವನ್ನಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಬಿಜೆಪಿಗೆ ನಿಮ್ಮೆಲ್ಲರ ಬೆಂಬಲ ಬೇಕೆಂದು ಯದುವೀರ್ ಒಡೆಯರ್ ಮನವಿ ಮಾಡಿಕೊಂಡರು. 

ಬಿಜೆಪಿಯಲ್ಲಿ ಕುಟುಂಬ ರಾಜಕೀಯಕ್ಕಿಂತ ದೇಶ ಮೊದಲು ಎಂಬವುದು ಪಕ್ಷದ ಧ್ಯೇಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಪರವಾದ ಏಕೈಕ ಪಕ್ಷ ಬಿಜೆಪಿ. ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುಲ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಸಿದ್ಧಾಂತಗಳನ್ನು ತಿಳಿಸಿ ಜನರನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ಯದುವೀರ್ ಒಡೆಯರ್ ಕರೆ ನೀಡಿದರು. 

Latest Videos

undefined

ಹೈಕೋರ್ಟ್ ತೀರ್ಪೋ, ಅಜೆಂಡಾವೋ: ಸರ್ಕಾರಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ

ಯದುವೀರ್ ಒಡೆಯರ್ ಹೇಳಿಕೆ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಕಟಿಸಿತ್ತು. ಈ ಲೇಖನದ ಫೋಟೋ ಹಂಚಿಕೊಂಡಿರುವ ನಟ ಚೇತನ್, ಸಂವಿಧಾನದ ಪರವಾದ ಏಕೈಕ ಪಕ್ಷ ಬಿಜೆಪಿ ಎಂದು ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್ ಹೇಳಿದ್ದಾರೆ, ಎಂಥ ಸುಳ್ಳು. ಭ್ರಾತೃತ್ವವು ನಮ್ಮ ಸಂವಿಧಾನದ ಪೀಠಿಕೆಯ ಅವಿಭಾಜ್ಯ ಆದರ್ಶವಾಗಿದೆ. ಮುಸ್ಲಿಂ ವಿರೋಧಿ ಮತ್ತು ಕ್ರಿಶ್ಚಿಯನ್ ವಿರೋಧಿ ನೀತಿಗಳನ್ನು ಸಾಂಸ್ಥಿಕವಾಗಿ ಜಾರಿಗೆ ತರುವ ಹಿಂದುತ್ವವು ಸ್ಪಷ್ಟವಾಗಿ ಭ್ರಾತೃತ್ವಕ್ಕೆ ವಿರುದ್ಧವಾಗಿದೆ. ಯದುವೀರ ಅವರು ನಮ್ಮ ನ್ಯಾಯ ಮಾದರಿಯಾದ ಕೃಷ್ಣರಾಜ ಒಡೆಯರ್ ಕೊಡುಗೆಗಳನ್ನು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಇದರ ಜೊತೆಯಲ್ಲಿ #fraternity #justice #Wodeyar ಎಂಬ ಹ್ಯಾಶ್‌ ಟ್ಯಾಗ್‌ಗಳನ್ನು ಸಹ ಚೇತನ್ ಬಳಸಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಯದುವೀರ್ ಒಡೆಯರ್, ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ವಿಚಾರಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕೆಲವು ನಿರ್ಣಯ ಕೈಗೊಂಡಿರುವುದು ಆಕ್ಷೇಪಾರ್ಹ. ಚಾಮುಂಡಿಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಕೆಲವು ನಿರ್ಣಯ ಕೈಗೊಳ್ಳಲಾಗಿದೆ. ಪ್ರಾಧಿಕಾರದ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಿರ್ಧಾರಕ್ಕೆ ನನ್ನ ಆಕ್ಷೇಪವಿದೆ. ಆ ನಿರ್ಣಯ ಊರ್ಜಿತವಾಗುವುದಿಲ್ಲ. ನಾವು ಕಾನೂನಾತ್ಮಕ ಹೋರಾಟ ಮುಂದುವರೆಸುತ್ತೇವೆ. ನಮ್ಮ ಮುಂದಿನ ನಡೆ ಏನು ಎಂಬುದನ್ನು ಸದ್ಯದಲ್ಲಿಯೇ ತಿಳಿಸುತ್ತೇವೆ ಎಂದು ಹೇಳಿದ್ದರು.

ಬಯಲುಸೀಮೆಯನ್ನು ಬಂಗಾರದ ಸೀಮೆ ಮಾಡುವ ಶುಭ ಘಳಿಗೆ: ಡಿ.ಕೆ.ಶಿವಕುಮಾರ್

click me!