
ಮಂಗಳೂರು(ಮೇ.02) ನನ್ನ ಮಗ ಹಿಂದುತ್ವವನ್ನೇ ಉಸಿರಾಗಿಸಿಕೊಂಡಿದ್ದ. ಹಿಂದೂಗಳನ್ನು ಒಗ್ಗೂಡಿಸಿದ್ದ. ಆದರೆ ಸದಾ ಹಿಂದುತ್ವ ಹಿಂದುತ್ವ ಹಿಂದುತ್ವವೇ ನನ್ನ ಉಸಿರು ಅನ್ನುತ್ತಿದ್ದವನ ಉಸಿರನ್ನೇ ಕಸಿದರು ಎಂದು ಹ*ತ್ಯೆಯಾಗ ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಹೇಳಿದ್ದಾರೆ. ತೀವ್ರ ಅನಾರೋಗ್ಯ ಪೀಡಿತರಾಗಿರುವ ಸುಹಾಸ್ ಶೆಟ್ಟಿ ತಾಯಿಗೆ ಈಗಷ್ಟೇ ಮಗನ ಹ*ತ್ಯೆ ಕುರಿತು ಮಾಹಿತಿ ನೀಡಲಾಗಿತ್ತು. ಈ ವಿಚಾರ ತಿಳಿದು ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಸ್ಥರು ಸುಹಾಸ್ ಶೆಟ್ಟಿ ಪೋಷಕರನ್ನು ಸಮಾಧಾನ ಪಡಿಸುತ್ತಿದ್ದಾರೆ. ಸುಹಾಸ್ ಶೆಟ್ಟಿ ಮನೆ ಬಳಿ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹ*ತ್ಯೆ ಪ್ರಕರಣ ರಾಜ್ಯದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ವಿಶ್ವ ಹಿಂದೂ ಪರಿಷತ್ ಕರೆ ನೀಡಿದೆ. ನಿನ್ನ(ಮೇ.01) ರಾತ್ರಿ ಸುಹಾಸ್ ಶೆಟ್ಟಿ ಮೇಲೆ ವ್ಯವಸ್ಥಿತ ಸಂಚು ರೂಪಿಸಿ ದಾಳಿ ಮಾಡಿದ್ದರು. ಪರಿಣಾಮ ಸುಹಾಸ್ ಶೆಟ್ಟಿ ಮೃತಪಟ್ಟಿದ್ದ. ಆದರೆ ಸುಹಾಸ್ ಶೆಟ್ಟಿ ತಾಯಿಗೆ ಈಗಷ್ಚೇ ಮಾಹಿತಿ ನೀಡಲಾಗಿದೆ. ತನ್ನ ಮಗನ ಹ*ತ್ಯೆ ತಿಳಿದು ತಾಯಿ ಸುಲೋಚನಾ ಮತ್ತಷ್ಟು ಅಸ್ವಸ್ಥರಾಗಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಶ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿಗಳ ಸುಳಿವು ಪತ್ತೆ
ನಿತ್ಯವೂ ಫೋನ್ ಮಾಡುತ್ತಿದ್ದ ಮಗ
ನಿತ್ಯವೂ ಫೋನ್ ಮೂಲಕ ಮಗನ ಜೊತೆ ಮಾತನಾಡುತ್ತಿದ್ದೆ. ಆದರೆ ನಿನ್ನೆ ಸಂಬಂಧಿಕರ ಮದುವೆ ಇದ್ದ ಕಾರಣ ಸುಹಾಸ್ ಶೆಟ್ಟಿ ಫೋನ್ ಮಾಡಿದರೂ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಬೆಳಗ್ಗೆಯಿಂದ ಸಂಜೆ ವರೆಗೆ ಮದುವೆ ಕಾರ್ಯಕ್ರಮದಲ್ಲಿದ್ದ ಕಾರಣ ಮಗನಿಗ ಮರಳಿ ಫೋನ್ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಮದುವೆ ಕಾರ್ಯಕ್ರಮ ಮುಗಿಸಿ ಫೋನ್ ಮಾಡಿದಾಗ ಸುಹಾಸ್ ಶೆಟ್ಟಿ ಫೋನ್ ಸ್ವಿಚ್ ಆಫ್ ಆಗಿತ್ತು. ಅಷ್ಟೊತ್ತಿಗಾಗಲೇ ಸುಹಾಸ್ ಶೆಟ್ಟಿಯನ್ನು ಹ*ತ್ಯೆ ಮಾಡಲಾಗಿತ್ತು ಎಂದು ತಾಯಿ ಸುಲೋಚನಾ ಕಣ್ಣೀರಿಟ್ಟಿದ್ದಾರೆ.
ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ತಾಯಿಯ ನೋವು ಯಾರಿಗೂ ಅರ್ಥವಾಗಲ್ಲ. ಹಿಂದುತ್ವವನ್ನೇ ಉಸಿರಾಗಿಸಿದ್ದ ನನ್ನ ಮಗ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾನೆ ಎಂದು ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಹೇಳಿದ್ದಾರೆ. ಸುಹಾಸ್ ಶೆಟ್ಟಿ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ
ಕಾರಿಂಜದ ಪುಳಿಮಜಲು ಎಂಬಲ್ಲಿರುವ ಸುಹಾಸ್ ಶೆಟ್ಟಿ ಮನೆಯಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮನೆ ಮಂಭಾಗವೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಮನೆ ಸಮೀಪವೇ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಹಿಂದೂ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನಡೆಯಲಿದೆ.
ಸುಹಾಶ್ ಶೆಟ್ಟಿ ಮನೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕೆ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇತ್ತ ಘಟನೆ ಕುರಿತು ಚಿಕ್ಕಮಗಳೂರಿನಲ್ಲಿ ಸಿಟಿ ರವಿ ಮಾತನಾಡಿದ್ದಾರೆ. ಭಾರತ್ ಮಾತಾ ಕೀ ಜೈ ಅನ್ನೋನ ಹ*ತ್ಯೆ ಮಾಡಲಾಗಿದೆ. ಇದು ಪ್ರತೀಕಾರದ ಕೊಲೆಯಾಗಿದೆ. ಕ್ರಿಕೆಟ್ ಗ್ರೌಂಡ್ ಗೆ ಬಂದು ಪಾಕಿಸ್ತಾನ ಜಿಂದಾಬಾದ್ ಎಂದವನ ಹೊಡೆದರು, ಅದಕ್ಕೆ ಪ್ರತೀಕಾರವಾಗಿ ಭಾರತ್ ಮಾತಾ ಕೀ ಜೈ ಎಂದನ ಹ*ತ್ಯೆ ಮಾಡಿದ್ದಾರೆ. ಹೊರಗಿನ ಶತ್ರುಗಳನ್ನ ಸೇನೆ ನೋಡಿಕೊಳ್ಳುತ್ತೆ, ಒಳಗಿನ ಶತ್ರುಗಳನ್ನ ರಾಜಕಾರಣ ದೂರವಿಟ್ಟು ಬೇರು ಸಹಿತ ಕಿತ್ತಾಕಬೇಕು ಎಂದು ಸಿಟಿ ರವಿ ಹೇಳಿದ್ದಾರೆ.
ಇವರೆಲ್ಲಾ ಮತಾಂದತೆಯ ಹುಚ್ಚು ಹಿಡಿಸಿಕೊಂಡಿರುವ ದೇಶದ್ರೋಹಿಗಳು. ಇವರನ್ನ ಸಹಿಸೋದು ಕ್ಷಮಿಸೋದು, ಎರಡನ್ನೂ ಮಾಡ್ಬಾರ್ದು. ಎಸ್.ಡಿ.ಪಿ.ಐ. ಇಂತಹಾ ಮತಾದಂತೆಯ ಹುಚ್ಚು ಹಿಡಿದ ದ್ರೋಹಿಗಳ ಸಂಘಟಿಸೋ ಕೆಲಸ ನಿರಂತರವಾಗಿ ಮಾಡುತ್ತಿದೆ ಎಂದು ಸಿಟಿ ರವಿ ಹೇಳಿದ್ದಾರೆ.
ಇಂದು ದಕ್ಷಿಣ ಕನ್ನಡ ಜಿಲ್ಲಾ ಬಂದ್, ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ