* ರಾಜ್ಯದಲ್ಲಿ ಬೆಳ್ಳಬೆಳಗ್ಗೆ ಎಸಿಬಿ ಅಧಿಕಾರಿಗಳಿಂದ ಬೃಹತ್ ರೇಡ್
* 80 ಕಡೆ ಏಕಕಾಲಕ್ಕೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು
* 21 ಭ್ರಷ್ಟ ಅಧಿಕಾರಿಗಳ ಮನೆ , ಕಚೇರಿ ಸಂಬಂಧಿಕರ ಮನೆಗಳ ಮೇಲೆ ದಾಳಿ
ಬೆಂಗಳೂರು(ಜೂ.17): ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಬೆಳ್ಳಂ ಬೆಳಗ್ಗೆ ಶಾಕ್ ನಿಡಿದೆ. ಹೌದು ರಾಜ್ಯದ ಒಟ್ಟು 21 ಅಧಿಕಾರಿಗಳ ಮೇಲೆ ದಾಳಿ ನಡೆದಿದ್ದು, ಇವರಿಗೆ ಸಂಬಂಧಿಸಿದ 80 ಸ್ಥಳಗಳ ಮೇಲೆ ಈ ರೇಡ್ ನಡೆದಿದೆ.
ಯಾವೆಲ್ಲಾ ಅಧಿಕಾರಿಗಳ ನಿವಾಸಗಳ ಮೇಲೆ ಎಸಿಬಿ ರೇಡ್?
1. ಭೀಮಾ ರಾವ್ ವೈ ಪವಾರ್, ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್. ಬೆಳಗಾವಿ.
2.ಹರೀಶ್.ಸಹಾಯಕ ಇಂಜಿನಿಯರ್.ಸಣ್ಣ ನೀರಾವರಿ.ಉಡುಪಿ.
3.ರಾಮಕೃಷ್ಣ ಎಚ್ .ವಿ, AEE.ಮೈನರ್ ನೀರಾವರಿ.ಹಾಸನ.
4.ರಾಜೀವ್ ಪುರಸಯ್ಯ ನಾಯಕ್, ಸಹಾಯಕ ಇಂಜಿನಿಯರ್.PWD. ಕಾರವಾರ.
5.ಬಿ ಆರ್ ಬೋಪಯ್ಯ, ಜೂನಿಯರ್ ಇಂಜಿನಿಯರ್, ಪೊನ್ನಂಪೇಟೆ ಜಿಲ್ಲಾ ಪಂಚಾಯತ್.
6 .ಮಧುಸೂಧನ್, ಜಿಲ್ಲಾ ನೋಂದಣಾಧಿಕಾರಿ, IGR ಕಛೇರಿ. ಬೆಳಗಾವಿ.
7.ಪರಮೇಶ್ವರಪ್ಪ, ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಹೂವಿನದಾಗಲಿ.
8.ಯೆಲ್ಲಪ್ಪ ಎನ್ ಪಡಸಾಲಿ, RTO.ಬಾಗಲಕೋಟೆ.
9.ಶಂಕರಪ್ಪ ನಾಗಪ್ಪ ಗೋಗಿ, ಯೋಜನಾ ನಿರ್ದೇಶಕರು .ನಿರ್ಮಿತಿ ಕೇಂದ್ರ .ಬಾಗಲಕೋಟೆ.
10 .ಪ್ರದೀಪ್ ಎಸ್ ಆಲೂರ್, ಪಂಚಾಯತ್ ಗ್ರೇಡ್ ಎರಡು ಕಾರ್ಯದರ್ಶಿ. RDPR .ಗದಗ.
11.ಸಿದ್ದಪ್ಪ ಟಿ, ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು.
12.ತಿಪ್ಪಣ್ಣ ಪಿ ಸಿರಸಗಿ, ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್.
13.ಮುರುತುಂಜಯ ಚೆನ್ನಬಸಯ್ಯ ತಿರಾಣಿ, ಸಹಾಯಕ ಕಂಟ್ರೋಲರ್, ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ. ಬೀದರ್.
14.ಮೋಹನ್ ಕುಮಾರ್.ಕಾರ್ಯನಿರ್ವಾಹಕ ಇಂಜಿನಿಯರ್. ನೀರಾವರಿ .
ಚಿಕ್ಕಬಳ್ಳಾಪುರ ಜಿಲ್ಲೆ.
15. ಶ್ರೀಧರ್. ಜಿಲ್ಲಾ ನೋಂದಣಾಧಿಕಾರಿ ಕಾರವಾರ .
16. ಮಂಜುನಾಥ್ ಜಿ, ನಿವೃತ್ತ ಇಇ. PWD.
17.ಶಿವಲಿಂಗಯ್ಯ, ಗುಂಪು C. ಬಿಡಿಎ.
18. ಉದಯ ರವಿ, ಪೊಲೀಸ್ ಇನ್ಸ್‌ಪೆಕ್ಟರ್, ಕೊಪ್ಪಳ.
19.ಬಿ. ಜಿ.ತಿಮ್ಮಯ್ಯ, ಕೇಸ್ ವರ್ಕರ್, ಕಡೂರು ಪುರಸಭೆ.
20.ಚಂದ್ರಪ್ಪ ಸಿ ಹೋಳೇಕರ್, UTP ಕಛೇರಿ. ರಾಣೆಬೆನ್ನೂರು.
21. ಜನಾರ್ದನ್, ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ), ಬೆಂಗಳೂರು.
ನಿವೃತ್ತಿಯಾಗಬೇಕಿದ್ದ ಹಿರಿಯ ಅಧಿಕಾರಿಗೂ ಶಾಕ್!
ಜೂ.30ರಂದು ನಿವೃತ್ತಿಯಾಗಬೇಕಿದ್ದ ಹಿರಿಯ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ಬೆಳಗಾವಿಯ ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಬಿ.ವೈ ಪವಾರ್ ಮನೆ, ಕಚೇರಿ ಸೇರಿ 6 ಕಡೆ ದಾಳಿ ನಡಸಲಾಗಿದೆ. ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿರುವ ಸ್ವಂತ ಮನೆ, ಸರ್ಕಾರಿ ಮನೆ, ಕಚೇರಿ ಮೇಲೆ ಈ ದಾಳಿ ನಡೆದಿದ್ದು, ಸರ್ಕಾರಿ ನಿವಾಸದಲ್ಲೂ ಪರಿಶೀಲನೆ ನಡೆಯುತ್ತಿದೆ.
ನಿವೃತ್ತ ಇಂಜಿನಿಯರ್, ಜಿ ಮಂಜುನಾಥ ಮನೆ ಮೇಲೆ ಎಸಿಬಿ ದಾಳಿ
ನಿವೃತ್ತ ಇಂಜಿನಿಯರ್ ಜಿ ಮಂಜುನಾಥ ನಿವಾಸಗಳ ಮೇಲೂ ಎಸಿಬಿ ದಾಳಿ ನಡೆಸಿದೆ. ಈ ವೇಳೆ ಜಯನಗರದ 9 ನೇ ಬ್ಲಾಕ್ ಒಂದರಲ್ಲೇ ಅಂದಾಜು 20 ಕೋಟಿ ಮೌಲ್ಯದ ಚೈತನ್ಯ ಗೋಲ್ಡ್ ವಾಣಿಜ್ಯ ಕಟ್ಟಡ ಬೆಳಕಿಗೆ ಬಂದಿದೆ. ಇವರು ನಿವೃತ್ತಿ ಬಳಿಕ ಪತ್ನಿ ಉಮಾದೇವಿ ಹೆಸರಲ್ಲಿ ಇದನ್ನು ಖರೀದಿಸಿದ್ದಾರೆ. ಇದೇ ವೇಳೆ ವಿಧಾನಸೌಧ ಸಹಕಾರ ಬ್ಯಾಂಕ್ ನಲ್ಲಿ ಕೋಟಿ ಕೋಟಿ ವಹಿವಾಟು ನಡೆಸಿದ್ದು, ಮಗಳ ಹೆಸರಿಲ್ಲಿ ಫ್ಲಾಟ್ ಖರೀದಿಸಿದ್ದಾರೆ. ಇಷ್ಟೇ ಅಲ್ಲದೇ ತಮ್ಮ ತಾಯಿ ಹೆಸರಿನಲ್ಲಿಯೂ ಮಂಜುನಾಥ್ ಆಸ್ತಿ ಖರೀದಿ ಮಾಡಿರುವ ಆರೋಪ ಕೇಳಿ ಬಂದಿದೆ. ಕಂದಾಯ ಇಲಾಖೆ ಉಪ ನೋಂದಣಾಧಿಕಾರಿಗಳ ಕಡತಗಳು ಮಂಜುನಾಥ ಮನೆಯಲ್ಲಿ ಪತ್ತೆಯಾಗಿದ್ದು, ಮಂಜುನಾಥ್ ಕೊರೊನಾ ಕಾಲದಲ್ಲಿ ಕೋಟಿ ಕೋಟಿ ವಹಿವಾಟು ಆರೋಪ ಕೇಳಿ ಬಂದಿದೆ.