ACB Raids: ಲಂಚಬಾಕರ ಬಳಿ ಇನ್ನೂ ಇದೆ ಬೆಟ್ಟದಷ್ಟು ಆಸ್ತಿ..!

Published : Mar 18, 2022, 08:36 AM IST
ACB Raids: ಲಂಚಬಾಕರ ಬಳಿ ಇನ್ನೂ ಇದೆ ಬೆಟ್ಟದಷ್ಟು ಆಸ್ತಿ..!

ಸಾರಾಂಶ

*  2ನೇ ದಿನವೂ ಮುಂದುವರೆದ ಅಕ್ರಮ ಆಸ್ತಿಗಳ ಶೋಧ ಕಾರ್ಯ *  ಆದಾಯಕ್ಕಿಂತ 929%ವರೆಗೂ ಹೆಚ್ಚುವರಿ ಆಸ್ತಿ ಪತ್ತೆ *  ಸಂಬಂಧಿಸಿದ ದಾಖಲೆಗಳ ಪರಿಶೀಲನೆ   

ಬೆಂಗಳೂರು(ಮಾ.18):  ರಾಜ್ಯದೆಲ್ಲೆಡೆ ಬುಧವಾರ ಭ್ರಷ್ಟಾಚಾರ ನಿಗ್ರಹ ದಳ (ACB)ದ ದಾಳಿಗೊಳಗಾಗಿದ್ದ 18 ‘ಲಂಚಬಾಕ’ ಸರ್ಕಾರಿ ಅಧಿಕಾರಿಗಳು, ತಮ್ಮ ಆದಾಯಕ್ಕಿಂತ ನೂರಾರು ಪಟ್ಟು ಆಕ್ರಮ ಸಂಪತ್ತು(Illegal Asset) ಸಂಪಾದಿಸಿರುವುದು ತನಿಖೆಯಲ್ಲಿ ಬಯಲಾಗಿದೆ.

ಈ ಸರ್ಕಾರಿ ಅಧಿಕಾರಿಗಳ ಪೈಕಿ ವಿಜಯಪುರ(Vijayapura) ಜಿಲ್ಲೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ್‌ ಸಾ ನಾಗೇಂದ್ರ (ಶೇ.929) ಅವರು ಅತಿ ಹೆಚ್ಚು ಅಕ್ರಮ ಆಸ್ತಿ ಹೊಂದಿದ್ದರೆ, ಮಂಗಳೂರಿನ ಕೆಪಿಟಿಎಸ್‌ನ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ದಯಾಳು ಸುಂದರ್‌ ರಾಜ್‌ (ಶೇ.55.10) ಕಡಿಮೆ ಅಕ್ರಮ ಸಂಪತ್ತು ಗಳಿಸಿದ್ದಾರೆ. ಇವರೆಲ್ಲರ ಆಸ್ತಿಗಳ ಹಾಗೂ ಚಿನ್ನಾಭರಣ(Gold) ಮೌಲ್ಯಮಾಪನ, ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಮುಂದುವರೆದಿದೆ. ಹೀಗಾಗಿ ಆಕ್ರಮ ಆಸ್ತಿ ಮೌಲ್ಯವು ಹೆಚ್ಚಾಗಬಹುದು ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದಾರೆ.

ACB Raids: ಕರ್ನಾಟಕದ 78 ಕಡೆ ಎಸಿಬಿ ದಾಳಿ: ರಾಶಿ ರಾಶಿ ಹಣ, ಚಿನ್ನ ಪತ್ತೆ..!

ಶೇಕಡಾವಾರು ಆಸ್ತಿ ಗಳಿಕೆ:

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಬಿ.ಕೆ.ಶಿವಕುಮಾರ್‌ (ಶೇ.300), ಸಾರಿಗೆ ಇಲಾಖೆ (ರಸ್ತೆ ಸುರಕ್ಷತೆ) ಹೆಚ್ಚುವರಿ ಆಯುಕ್ತ ಜೆ.ಜ್ಞಾನೇಂದ್ರ ಕುಮಾರ್‌ (ಶೇ.121), ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಯೋಜನೆ ನಗರ) ಉಪ ನಿರ್ದೇಶಕರ ವಿ.ರಾಕೇಶ್‌ ಕುಮಾರ್‌ (ಶೇ.131), ಯಾದಗಿರಿ ಜಿಲ್ಲೆ ಆರ್‌ಎಫ್‌ಓ (ಸಾಮಾಜಿಕ ಅರಣ್ಯ) ರಮೇಶ್‌ ಕನಕಟ್ಟೆ(ಶೇ.382.01), ಬೆಳಗಾವಿ ಜಿಲ್ಲೆ ಗೋಕಾಕ್‌ ತಾಲೂಕಿನ ಜಿಆರ್‌ಎಸ್‌ ಕೌಜಲಗಿ ವಿಭಾಗದ ಕಾರ್ಯಪಾಲಕ ಅಭಿಯಂತರ ಬಸವರಾಜ ಶೇಖರ್‌ ರೆಡ್ಡಿ ಪಾಟೀಲ್‌ (ಶೇ.174.47), ಗದಗ ಜಿಲ್ಲೆ ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ್‌ ಬಸವಕುಮಾರ್‌ ಎಸ್‌.ಅಣ್ಣಿಗೇರಿ (ಶೇ.190), ವಿಜಯಪುರ ಜಿಲ್ಲೆ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ್‌ ಸಾ ನಾಗೇಂದ್ರ (ಶೇ.929), ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ವಲಯ ಅರಣ್ಯಾಧಿಕಾರಿ ಶಿವಾನಂದ ಅಲಿಯಾಸ್‌ ಪೀರಪ್ಪ ಶರಣಪ್ಪ ಕೇದಗಿ (ಶೇ.325), ಮೈಸೂರು ನಗರ ವಿಜಯನಗರ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್‌ ಎಚ್‌.ಎನ್‌.ಬಾಲಕೃಷ್ಣಗೌಡ (ಶೇ.129.42), ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ವೃತ್ತ ಅಬಕಾರಿ ಇನ್ಸ್‌ಪೆಕ್ಟರ್‌ ಚೆಲುವರಾಜು (ಶೇ.256), ರಾಮನಗರ ಉಪ ವಿಭಾಗದ ಎಸಿ ಸಿ.ಮಂಜುನಾಥ್‌ (ಶೇ.216.25), ಬೆಂಗಳೂರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು (ಮೂಲಸೌಕರ್ಯ) ಎ.ಶ್ರೀನಿವಾಸ್‌ (ಶೇ.222.082), ಮಂಗಳೂರಿನ ಕೆಪಿಟಿಎಸ್‌ನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದಯಾಳು ಸುಂದರ್‌ ರಾಜ್‌ (ಶೇ.55.10), ಚಿಕ್ಕಮಗಳೂರು ಪಿಡಬ್ಲ್ಯುಡಿ ಸಹಾಯಕ ಕಾರ್ಯಪಾಲಕ ಎಂಜನಿಯರ್‌ ಬಿ.ಎಚ್‌.ಗವಿರಂಗಪ್ಪ (ಶೇ.81), ಕೊಪ್ಪಳ ಜಿಲ್ಲೆ ಯಲಬುರ್ಗದ ರಾಷ್ಟ್ರೀಯ ಹೆದ್ದಾರಿ ಉಪ ವಿಭಾಗ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಗಿರೀಶ್‌ (ಶೇ.200.14), ರಾಯಚೂರು ಜಿಲ್ಲೆ ದೇವದುರ್ಗದ ಕೃಷ್ಣ ಭಾಗ್ಯ ಜಲ ನಿಗಮದ ಎಇಇ ಅಶೋಕ ರೆಡ್ಡಿ ಪಾಟೀಲ್‌ (ಶೇ.164.19), ದಾವಣಗೆರೆ ಜಿಲ್ಲಾ ಪರಿಸರ ಅಧಿಕಾರಿ ಎಂ.ಎಸ್‌.ಮಹೇಶ್ವರಪ್ಪ (ಶೇ.198.15), ಹಾವೇರಿ ಜಿಲ್ಲೆ ಎಪಿಎಂಸಿ ಉಪ ವಿಭಾಗದ ಎಇಇ ಕೃಷ್ಣ ಕೇಶಪ್ಪ ಆರೇರ (ಶೇ.184.71) ಅಕ್ರಮ ಆಸ್ತಿ ಸಂಪತ್ತು ಹೊಂದಿದ್ದಾರೆ ಎಂದು ಎಸಿಬಿ ವಿವರಿಸಿದೆ.

ಲಂಚ ಸ್ವೀಕರಿಸಿದ್ದ ಇನ್‌ಸ್ಪೆಕ್ಟರ್‌, ಬಿಎಂಟಿಎಫ್‌ ನೌಕರನಿಗೆ ಶಿಕ್ಷೆ

ಬೆಂಗಳೂರು(Bengaluru): ನಾಲ್ಕು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರಿಂದ 50 ಸಾವಿರ ಲಂಚ(Bribe) ಸ್ವೀಕರಿಸಿದ ಪ್ರಕರಣ ಸಂಬಂಧ ನಗರ ಸಿಟಿ ರೈಲ್ವೆ ಠಾಣೆ ಇನ್‌ಸ್ಪೆಕ್ಟರ್‌ ಹಾಗೂ ಬಿಎಂಟಿಎಫ್‌(BMTF) ಹೊರಗುತ್ತಿಗೆ ನೌಕರನಿಗೆ ಮೂರು ವರ್ಷ ಸಜೆ ಹಾಗೂ 25 ಸಾವಿರ ದಂಡ ವಿಧಿಸಿ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು(Court) ಆದೇಶಿಸಿದೆ.

ಇನ್‌ಸ್ಪೆಕ್ಟರ್‌ ವಿ.ಶಿವಕುಮಾರ್‌ ಹಾಗೂ ಬಿಎಂಟಿಎಫ್‌ ಹೊರಗುತ್ತಿಗೆ ಗುಮಾಸ್ತ ಕೆ.ಎನ್‌.ಚೇತನ್‌ ಶಿಕ್ಷೆ ಗುರಿಯಾಗಿದ್ದು, 2018ರಲ್ಲಿ ಉತ್ತರಹಳ್ಳಿ ನಿವಾಸಿಯೊಬ್ಬರಿಂದ ಬಿಎಂಟಿಎಫ್‌ ಠಾಣೆಯಲ್ಲಿ ದೂರು ಮುಕ್ತಾಯಗೊಳಿಸಲು ಲಂಚ ಸ್ವೀಚರಿಸುವಾಗ ಆರೋಪಿಗಳು ಎಸಿಬಿ ಬಲೆಗೆ ಬಿದ್ದಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯಾದ್ಯಂತ ಎಸಿಬಿ ಬೃಹತ್ ದಾಳಿ: 18 ಭ್ರಷ್ಟ ಅಧಿಕಾರಿಗಳಿಗೆ ನಡುಕ, 75 ಕಡೆ ಶೋಧ ಕಾರ್ಯ!

ಅಂದು ಬಿಎಂಟಿಎಫ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ (ಪ್ರಸುತ್ತ ರೈಲ್ವೆ ಪೊಲೀಸ್‌ ಇನ್‌ಸ್ಪೆಕ್ಟರ್‌) ವಿ.ಶಿವಕುಮಾರ್‌ ಅವರು, ಉತ್ತರಹಳ್ಳಿ ನಿವಾಸಿ ಬಳಿ .80 ಸಾವಿರ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಎಸಿಬಿಗೆ ದೂರು ಸಲ್ಲಿಕೆಯಾಗಿತ್ತು. ಆಗ .50 ಸಾವಿರ ಪಡೆಯುವಾಗ ಶಿವಕುಮಾರ್‌ ಹಾಗೂ ಬಿಎಟಿಎಂಫ್‌ ಹೊರಗುತ್ತಿಗೆ ನೌಕರ ಚೇತನ್‌ ಎಸಿಬಿಗೆ ಸೆರೆಯಾಗಿದ್ದರು. ಪ್ರಕರಣದ ತನಿಖೆ ನಡೆಸಿದ ಎಸಿಬಿ, 2021ರ ಮಾಚ್‌ರ್‍ನಲ್ಲಿ ಆರೋಪಿಗಳ ವಿರುದ್ಧ 23ನೇ ನಗರ ಸಿವಿಲ್‌ ಮತ್ತು ಸತ್ರ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿತು. ಈ ಬಗ್ಗೆ ಸುದೀರ್ಘವಾಗಿ ವಿಚಾರಣೆ ನಡೆಸಿದ ಬಳಿಕ ಆರೋಪ ರುಜುವಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕೆ.ಲಕ್ಷ್ಮೇನಾರಾಯಣ ಭಟ್‌ ಅವರು, ಆರೋಪಿಗಳಿಗೆ 3 ವರ್ಷ ಸಜೆ ಹಾಗೂ .25 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಕರಣದಲ್ಲಿ ಸಾರ್ವಜನಿಕ ಅಭಿಯೋಜಕಿ ಸಿ.ಕೆ.ಸರೋಜ ವಾದ ಮಂಡಿಸಿದ್ದರು ಎಂದು ಎಸಿಬಿ ತಿಳಿಸಿದೆ.

ಉಲ್ಟಾ ಹೊಡೆದ ದೂರುದಾರ

ಪಿಎಸ್‌ಐ ಹಾಗೂ ಕ್ಲರ್ಕ್ ವಿರುದ್ಧ ಲಂಚದ ಆರೋಪದ ಮಾಡಿದ್ದ ದೂರುದಾರ, ನ್ಯಾಯಾಲಯದ ವಿಚಾರಣೆ ವೇಳೆ ಉಲ್ಟಾಹೊಡೆದು ಆರೋಪಿಗಳ ಪರವಾಗಿ ಸಾಕ್ಷಿ ನುಡಿದಿದ್ದರು. ಹೀಗಿದ್ದರೂ ಸಾದಂರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ನ್ಯಾಯಾಲಯವು, ಆರೋಪಿಗಳಿಗೆ ಶಿಕ್ಷೆ ವಿಧಿಸಿದೆ. ಅಲ್ಲದೆ ಪ್ರತಿಕೂಲ ಸಾಕ್ಷಿ ನುಡಿದ ಕಾರಣಕ್ಕೆ ದೂರುದಾರರಿಗೆ ಕಾರಣ ಕೇಳಿ ನ್ಯಾಯಾಲಯ ನೋಟಿಸ್‌ ನೀಡಿದ್ದು, ಇದೇ ಮಾ.30ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌