
ಮದ್ದೂರು (ಜೂ.17): ಚಿತ್ರನಟ ದಿವಂಗತ ಅಂಬರೀಶ್ ಅವರ ಜನ್ಮಭೂಮಿಯಲ್ಲಿ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ವಿವಾಹ ನಿಮಿತ್ತ ನಡೆದ ಬೀಗರ ಔತಣ ಕೂಟದಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡು ನವ ವಧು-ವರರನ್ನು ಆಶೀರ್ವದಿಸಿದರು. ತಾಲೂಕಿನ ಗೆಜ್ಜಲಗೆರೆ ಸಮೀಪದ ಕಾಲೋನಿಯ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 15 ಎಕರೆ ವಿಶಾಲವಾದ ಪ್ರದೇಶದಲ್ಲಿ ಔತಣಕೂಟ ಏರ್ಪಡಿಸಲಾಗಿತ್ತು. ಮಂಡ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಹಸ್ರಾರು ಅಂಬರೀಶ್ ಅಭಿಮಾನಿಗಳು, ಗಣ್ಯರು ಔತಣಕೂಟದಲ್ಲಿ ಭಾಗಿಯಾಗಿದ್ದರು.
ಬೆಳಗ್ಗೆ 11.15ರ ಸುಮಾರಿಗೆ ಬೆಂಗಳೂರಿನಿಂದ ಕಾರಿನಲ್ಲಿ ಆಗಮಿಸಿದ ನವ ದಂಪತಿ ಅಭಿಷೇಕ್ ಮತ್ತು ಅವಿವಾ ಅವರುಗಳನ್ನು ಅಂಬಿ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರು. ಮಂಡ್ಯ ಜನರಿಂದ ನೂತನ ದಂಪತಿಗೆ ಆಶೀರ್ವಾದ ಮಾಡಿಸಲು ಸಂಸದೆ ಸುಮಲತಾ ಮಾರ್ಗದರ್ಶನದಲ್ಲಿ ಆರತಕ್ಷತೆ ವೇದಿಕೆ ಸಿದ್ಧಪಡಿಸಲಾಗಿತ್ತು. ಆರತಕ್ಷತೆ ವೇದಿಕೆಯನ್ನು ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಸಹಸ್ರಾರು ಮಂದಿ ನವ ದಂಪತಿಗೆ ಶುಭ ಕೋರಿ ಆಶೀರ್ವಾದ ಮಾಡಿದರು. ಜರ್ಮನ್ ಮಾದರಿಯಲ್ಲಿ ನಿರ್ಮಿಸಲಾಗಿದ್ದ ಟೆಂಟ್‌ನಲ್ಲಿ ಮಾಂಸಹಾರಿ ಮತ್ತು ಸಸ್ಯಹಾರಿ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಭಿಷೇಕ್ ಮತ್ತು ಅವಿವಾ ಅಭಿಮಾನಿಗಳಿಗೆ ಕೈ ಮುಗಿದು ಊಟಕ್ಕೆ ಹೋಗುವಂತೆ ಮನವಿ ಮಾಡಿದರು.
ಅನ್ನಭಾಗ್ಯಕ್ಕೆ ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳ ಖರೀದಿಸಿ: ಕುರುಬೂರು ಶಾಂತಕುಮಾರ್
ನಂತರ 11.30ರ ಸುಮಾರಿಗೆ ಊಟದ ವ್ಯವಸ್ಥೆ ಮಾಡಲಾಯಿತು. 7ರಿಂದ 8 ಟನ್ ಕುರಿ ಮಾಂಸ, 9 ರಿಂದ 10 ಟನ್ ಕೋಳಿ ಮಾಂಸವನ್ನು ಮಾಂಸಹಾರಿ ಖಾದ್ಯ ತಯಾರಿಕೆಗೆ ಬಳಸಲಾಗಿತ್ತು. ರಾಗಿ ಮುದ್ದೆ, ಬೋಟಿಗೊಜ್ಜು, ನಾಟಿಕೋಳಿ ಸಾರು, ಚಿಕನ್ ಕಬಾಬ್, ಮೊಟ್ಟೆ, ಮಟನ್ ಪಲಾವ್, ಅನ್ನ ರಸಂನೊಂದಿಗೆ, ಸಿಹಿಯಾಗಿ ಸಬ್ಬಕ್ಕಿ ಪಾಯಸ, ಬಾದೂಷದೊಂದಿಗೆ ಐಸ್‌ಕ್ರೀಂ, ಬೀಡಾ, ಬಾಳೆಹಣ್ಣು ವ್ಯವಸ್ಥೆ ಮಾಡಲಾಗಿತ್ತು. ಸಸ್ಯಹಾರಿಗಳಿಗೆ ಫೈನಾಪಲ್ ಮತ್ತು ಕ್ಯಾರೆಟ್ ಹೋಳಿಗೆ, ಹನಿರೋಲ್, ಸಬ್ಬಕ್ಕಿ ಪಾಯಸ, ಗೋಬಿ ಮಂಚೂರಿ, ಮೂರು ವಿಧದ ಪಲ್ಯಾ, ತಂದೂರಿ ರೊಟ್ಟಿ, ಮಶ್ರೂಮ್ ಪನ್ನೀರ್ ಮಸಾಲ, ಮೆಂತ್ಯಬಾತ್, ಅನ್ನ ಸಾಂಬಾರ್, ರಸಂನ್ನು ಸಸ್ಯಾಹಾರಿ ಊಟದಲ್ಲಿ ಬಡಿಸಲಾಯಿತು.
ಸಾಮ, ದಾನ, ಭೇದ, ದಂಡ ನಾಲ್ಕನ್ನು ಬಳಸಿ ಮರು ಮತಾಂತರಕ್ಕೆ ಮುಂದಾಗಬೇಕು: ಸಿ.ಟಿ.ರವಿ
ಔತಣ ಕೂಟಕ್ಕೆ ಬಂದವರು ಕುಳಿತುಕೊಳ್ಳಲು ಆರತಕ್ಷತೆ ವೇದಿಕೆ ಬಳಿ ಎರಡು ಎಲ್‌ಇಡಿ ಪರದೆಗಳನ್ನು ಅಳವಡಿಸಿ ಅಭಿಷೇಕ್ ಮತ್ತು ಅವಿವಾ ವಿವಾಹ-ಆರತಕ್ಷತೆ ದೃಶ್ಯಗಳನ್ನು ಭಿತ್ತರಿಸಲಾಯಿತು. ಚಿತ್ರ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ಅಂಬರೀಶ್ ಆಪ್ತ ವಲಯದ ಜಿ.ಪಂ. ಮಾಜಿ ಅಧ್ಯಕ್ಷ ಬಿ. ವಿವೇಕಾನಂದ, ಹನಕೆರೆ ಶಶಿ, ಕೋಣಸಾಲೆ ಜಯರಾಂ, ಬೇಲೂರು ಸೋಮಶೇಖರ್, ಮುದ್ದಹಳ್ಳಿ ಮಹೇಂದ್ರ ಸೇರಿದಂತೆ ಹಲವರು ಉಸ್ತುವಾರಿ ವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ