
ಬೆಂಗಳೂರು (ಅ.22): ಆರೋಗ್ಯ ಇಲಾಖೆಯು ತೀವ್ರ ಶ್ರವಣದೋಷವುಳ್ಳ ಮಕ್ಕಳಿಗೆ ಹೊಸ ಬದುಕು ನೀಡುವ ಉದ್ದೇಶದಿಂದ ಪ್ರಸಕ್ತ ಸಾಲಿನಲ್ಲಿ ‘ಆಲಿಸು ಕಂದ’ ಕಾರ್ಯಕ್ರಮದ ಅಡಿ 200 ಮಕ್ಕಳಿಗೆ ಉಚಿತ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿದೆ.
ಶ್ರವಣದೋಷ ಮುಕ್ತ ಕರ್ನಾಟಕ ಅಭಿಯಾನದಡಿ ಮಕ್ಕಳಿಗೆ ಶ್ರವಣದೋಷ ಇದ್ದರೆ ಅವರ ಸಮಸ್ಯೆ ಬಗೆಹರಿಸಲು ‘ಆಲಿಸು ಕಂದ’ ಕಾರ್ಯಕ್ರಮ ರೂಪಿಸಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಬಳಿ ₹5400 ಕೋಟಿ ಕೇಳಿದೆ, ಈ ಸಲ ನೋಡೋಣ ಡಿಕೆ ಅಂದ್ರು.. ಏಷ್ಯಾನೆಟ್ ವಿಶೇಷ ಸಂದರ್ಶನದಲ್ಲಿ ಸಿಎಂ ಹೇಳಿದ್ದೇನು?
ತೊಟ್ಟಿಲಿನಿಂದ ತರಗತಿವರೆಗೆ ಶ್ರವಣ ಆರೈಕೆ ಪ್ರತಿಯೊಂದು ಮಗುವಿನ ಹಕ್ಕು. ಹೀಗಾಗಿ ಯೋಜನೆಯಡಿ ಶ್ರವಣದೋಷ ಪರಿಹಾರ ಕಲ್ಪಿಸುವ ಆಲಿಸು ಕಂದ ಕಾರ್ಯಕ್ರಮದ ಈವರೆಗಿನ ಸಾಧನೆ ಹಾಗೂ ಮುಂದೆ 200 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡುವ ಕುರಿತು ಅ.22 ರಂದು ಬೆಳಗ್ಗೆ 10.30 ಗಂಟೆವರೆಗೆ ಆರೋಗ್ಯ ಸಚಿವ ಯು.ಟಿ ಖಾದರ್ ಚಾಲನೆ ನೀಡಲಿದ್ದಾರೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಆರೋಗ್ಯ ಸೌಧದ ಬಿ.ಸಿ.ರಾಯ್ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಫಲಾನುಭವಿ ಮಕ್ಕಳು ಭಾಗವಹಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ