ಆ.1ರಿಂದ ಕರ್ನಾಟಕದಲ್ಲಿ ವೋಟರ್‌ ಐಡಿ ಜೊತೆ ಆಧಾರ್‌ ನಂಬರ್‌ ಜೋಡಣೆ

By Govindaraj SFirst Published Jul 30, 2022, 4:30 AM IST
Highlights

ವಿಧಾನಸಭಾ ಚುನಾವಣೆ ಸೇರಿದಂತೆ ಇತರೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ಆ.1ರಿಂದ ಅಗತ್ಯ ಬದಲಾವಣೆಯ ಪ್ರಕ್ರಿಯೆಗಳನ್ನು ಆರಂಭಿಸಲಿದ್ದು, ನಕಲಿ ಮತದಾನದ ತಡೆಗೆ ಮತದಾರರ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವ ಕಾರ್ಯವನ್ನು ಕೈಗೆತ್ತಿಗೊಳ್ಳಲಿದೆ.

ಬೆಂಗಳೂರು (ಜು.30): ವಿಧಾನಸಭಾ ಚುನಾವಣೆ ಸೇರಿದಂತೆ ಇತರೆ ಚುನಾವಣೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ಆ.1ರಿಂದ ಅಗತ್ಯ ಬದಲಾವಣೆಯ ಪ್ರಕ್ರಿಯೆಗಳನ್ನು ಆರಂಭಿಸಲಿದ್ದು, ನಕಲಿ ಮತದಾನದ ತಡೆಗೆ ಮತದಾರರ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವ ಕಾರ್ಯವನ್ನು ಕೈಗೆತ್ತಿಗೊಳ್ಳಲಿದೆ.

ಮತದಾರರ ಪಟ್ಟಿnಪರಿಷ್ಕರಣೆಯಲ್ಲಿ ಅಗತ್ಯ ಬದಲಾವಣೆಗಳನ್ನು ತರುವ ಪ್ರಕ್ರಿಯೆಯನ್ನು ಆ.1ರಿಂದ ಪ್ರಾರಂಭಿಸಲಿದ್ದು, ಮಾ.31ರವರೆಗೆ ಪ್ರಕ್ರಿಯೆ ನಡೆಯಲಿದೆ. 18 ವರ್ಷ ಪೂರ್ಣಗೊಂಡ ಬಳಿಕ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಕೆ ಮಾಡುವ ಬದಲು 17 ವರ್ಷ ಪೂರೈಸಿದವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 18 ವರ್ಷ ತುಂಬಲು ಆರು ತಿಂಗಳು ಕಡಿಮೆ ಇದ್ದರೂ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಇದರಿಂದ ಚುನಾವಣೆಯ ವೇಳೆಗೆ 18 ವರ್ಷ ಆಗಲಿದ್ದು, ಮತದಾನ ಮಾಡಲು ಅನುಕೂಲವಾಗಲಿದೆ ಎಂದು ಚುನಾವಣಾ ಆಯೋಗವು ತಿಳಿಸಿದೆ.

ಮತದಾರರ ಪಟ್ಟಿ ಜತೆ ಆಧಾರ್‌ ಲಿಂಕ್‌ಗೆ ಶೀಘ್ರ ನಿಯಮ ಜಾರಿ: ಸಿಇಸಿ ಸುಶೀಲ್ ಚಂದ್ರ

ನಕಲಿ ಮತದಾನ ತಡೆಗೆ ಮತ್ತು ಪತ್ತೆ ಮಾಡಲು ಮತದಾರರ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಲು ಆಯೋಗವು ಮುಂದಾಗಿದೆ. ಮತದಾರರು ತಮ್ಮ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಿ ದೃಢೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಮತದಾರರಿಗೆ ಸ್ವಯಂ ಪ್ರೇರಿತ ಅವಕಾಶವಿದೆ. ಒಂದು ವೇಳೆ ಆಧಾರ್‌ ಮಾಹಿತಿ ಒದಗಿಸಲು ಸಾಧ್ಯವಾಗದಿದ್ದರೆ ಮತದಾನದ ವೇಳೆ ಉಪಯೋಗಿಸುವ 11 ದಾಖಲೆಗಳನ್ನು ಒದಗಿಸಿ ದೃಢೀಕರಿಸಬಹುದಾಗಿದೆ.

ಮತದಾರರ ನೋಂದಣಿಗಾಗಿ ಹೊಸ ಸರಳೀಕರಿಸಿದ ಅರ್ಜಿ ನಮೂನೆಗಳು ಸಹ ಲಭ್ಯವಾಗಲಿವೆ. ಮತದಾರರ ಪಟ್ಟಿಯ ತಿದ್ದುಪಡಿಗಾಗಿ ಹೊಸ ನಮೂನೆ-8 ಲಭ್ಯ ಇದೆ. ಮತದಾರರ ಪಟ್ಟಿಗೆ ಹೆಸರು ಮತ್ತು ಮತದಾರರ ವರ್ಗಾವಣೆಗಾಗಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದನ್ನು ಪರಿಷ್ಕರಿಸಿ ನಮೂನೆ-6ರಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ಹೇಳಿದೆ.

Official Documents : ವ್ಯಕ್ತಿಯೊಬ್ಬನ ಸಾವಿನ ಬಳಿಕ ಆಧಾರ್, ಪಾನ್ ಕಾರ್ಡ್ ಏನಾಗುತ್ತೆ ಗೊತ್ತಾ?

ಒಂದು ಮತಗಟ್ಟೆಯಲ್ಲಿ 1500 ಕ್ಕಿಂತ ಹೆಚ್ಚು ಮತದಾರರಿದ್ದಲ್ಲಿ ವಿಭಜಿಸಿ ಹೊಸ ಮತಗಟ್ಟೆಸ್ಥಾಪನೆ ಮಾಡಲಾಗುವುದು. ಒಂದು ಕುಟುಂಬದ ಎಲ್ಲಾ ಸದಸ್ಯರು ಮತ್ತು ನೆರೆಹೊರೆಯವರು ಒಂದೇ ವಿಭಾಗದಲ್ಲಿರುವಂತೆ ಖಾತರಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಇದರ ಜತೆಗೆ ಮತದಾರರ ಪಟ್ಟಿಯಲ್ಲಿ ಒಬ್ಬರೇ ಮತದಾರರು ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೆ ತೆಗೆಯಲು ಕ್ರಮ ಜರುಗಿಸಲಾಗುವುದು. ಮತದಾರರ ಭಾವಚಿತ್ರ ಅಸ್ಪಷ್ಟವಾಗಿದ್ದರೆ ಸ್ಪಷ್ಟ ಭಾವಚಿತ್ರಗಳನ್ನು ಪಡೆದು ಮತದಾರರ ಪಟ್ಟಿಯಲ್ಲಿ ಸೇರಿಸಿ ಸುಧಾರಣೆ ಮಾಡುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಯೋಗವು ತಿಳಿಸಿದೆ.

click me!