ಬಾಲಕಿಯ ಬೆನ್ನಲ್ಲಿ ಬೆಳೆದ ಬಾಲ: ಜನರಿಗೆ ಅಚ್ಚರಿ-ಕುಟುಂಬಕ್ಕೆ ಕಿರಿಕಿರಿ

By Sathish Kumar KHFirst Published Jan 15, 2023, 12:48 PM IST
Highlights

ಕುಣಿಗಲ್ ತಾಲೂಕಿನ ಹಂಗರಹಳ್ಳಿಯ ಕುಸುಮಾ ಎಂಬ ಒಂಭತ್ತು ವರ್ಷದ ವಿಶೇಷಚೇತನ ಬಾಲಕಿಯೊಬ್ಬಳಿಗೆ ಬಾಲವೊಂದು ಬೆಳೆದಿದೆ. ಈ ವಿಚಿತ್ರ ಘಟನೆ ಜನರಿಗೆ ಅಚ್ಚರಿ ಮೂಡಿಸಿದರೆ, ಕುಸುಮಾ ಕುಟುಂಬದವರಿಗೆ ಸಹಿಸಲಾರದ ಸಂಕಷ್ಟ ಬಂದೆರಗಿದಂತಾಗಿದೆ.

ಬೆಂಗಳೂರು (ಜ.14):  ಕುಣಿಗಲ್ ತಾಲೂಕಿನ ಹಂಗರಹಳ್ಳಿಯ ಕುಸುಮಾ ಎಂಬ ಒಂಭತ್ತು ವರ್ಷದ ವಿಶೇಷಚೇತನ ಬಾಲಕಿಯೊಬ್ಬಳಿಗೆ ಬಾಲವೊಂದು ಬೆಳೆದಿದೆ. ಈ ವಿಚಿತ್ರ ಘಟನೆ ಜನರಿಗೆ ಅಚ್ಚರಿ  ಮೂಡಿಸಿದರೆ, ಕುಸುಮಾ ಕುಟುಂಬದವರಿಗೆ ಸಹಿಸಲಾರದ ಸಂಕಷ್ಟ ಬಂದೆರಗಿದಂತಾಗಿದೆ. ಹುಟ್ಟಿನಿಂದಲೇ ಬಾಲ ಹೊಂದಿರುವ ಬಾಲಕಿಗೆ ನೆರವು ಬೇಕಿದೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ. 

ಸಾಮಾನ್ಯವಾಗಿ ಎಲ್ಲಾ ರೀತಿಯ ಪ್ರಾಣಿಗಳಿಗೆ ಬಾಲ ಇರೋದನ್ನು ನಾವೆಲ್ಲರೂ ನೋಡಿದ್ದೇವೆ. ಆದ್ರೆ ಮನುಷ್ಯನಿಗೆ ಮಾತ್ರ ಅಂಗಾಂಗಗಳಲ್ಲಿ ವೈವಿಧ್ಯತೆ ಇರುತ್ತೆ ಹೊರತು ಬಾಲ ಇರೋದಿಲ್ಲ. ಆದ್ರೆ ಇಲ್ಲೊಂದು ಮಗುವಿಗೆ (Baby) ಹುಟ್ಟಿನಿಂದಲೇ ಬಾಲ ಇದೆ. ಅದೂ ಸಣ್ಣ ಪುಟ್ಟ ಬಾಲವಲ್ಲ. ಬರೋಬ್ಬರಿ 2 ಇಂಚು ಉದ್ದದ ಬಾಲ. (Tail) ಮೆಕ್ಸಿಕೋದಲ್ಲಿ ಬಾಲವನ್ನು ಹೊಂದಿರುವಂಥಾ ಮಗು ಜನಿಸಿದೆ. ಬಾಲಕಿಗೆ ಹುಟ್ಟಿನಿಂದಲೇ ಬಾಲ ಬೆಳೆದಿದ್ದು, ಒಂಭತ್ತು ವರ್ಷದವರೆಗೂ ಅದು ಹಾಗೆಯೇ ಬೆಳೆಯುತ್ತಿದೆ.

ಅಬ್ಬಬ್ಬಾ..2 ಇಂಚು ಉದ್ದದ ಬಾಲದೊಂದಿಗೆ ಜನಿಸಿದ ಹೆಣ್ಣು ಮಗು

ಬಾಲಕಿಗೆ ಅಂಗವೈಕಲ್ಯ ಸೇರಿ ಹಲವು ಸಮಸ್ಯೆ: ಈ ವಿಚಿತ್ರ ಘಟನೆ ಜನರಿಗೆ ಅಚ್ಚರಿಯನ್ನು ಉಂಟು ಮಾಡಿದರೂ, ಅವರ ಕುಟುಂಬ ಅನುಭವಿಸುತ್ತಿರುವ ನೋವು ಮಾತ್ರ ಮನಕಲಕುವಂತಿದೆ. ಬಾಲಕಿಗೆ ಬಾಲ ಮೂಡಿರುವ ಸಂಗತಿ ಒಂದೆಡೆಯಾದರೆ, ಮತ್ತೊಂದೆಡೆ ಅಂಗವೈಕಲ್ಯ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಕಾಲಿನ ಸ್ವಾಧೀನ ಕಳೆದುಕೊಂಡಿರುವ ಬಾಲಕಿ ಹಾಸಿಗೆ ಹಿಡಿದಿದ್ದಾಳೆ. ಮೂತ್ರ ವಿಸರ್ಜನೆ ಸಮಸ್ಯೆಯಿಂದ ಶಾಲೆಗೂ ಹೋಗದೆ ಮನೆಯಲ್ಲೇ ಇದ್ದಾಳೆ. ಈಗ ವಿಚಿತ್ರ ಸಮಸ್ಯೆಯಿಂದ ಪೋಷಕರು ಕಷ್ಟ ಅನುಭವಿಸುತ್ತಿದ್ದಾರೆ.

7 ಲಕ್ಷ ರೂ. ಖರ್ಚು ಮಾಡಿ ಕಾಲಿನ ಆಪರೇಷನ್: ಪೋಷಕರು ಮಗಳ ಸಮಸ್ಯೆಯನ್ನು ಸರಿಪಡಿಸಲು ನಾಗಸಂದ್ರಕ್ಕೆ ಬಂದು ಅಲ್ಲೇ ನೆಲೆಸಿದ್ದಾರೆ. ಆಸ್ತಿ ಮಾರಿಕೊಂಡು ಬೆಂಗಳೂರಿಗೆ ಬಂದು ಮಗಳಿಗೆ ಈಗಾಗಲೇ ಚಿಕಿತ್ಸೆ ಕೊಡಿಸಿದ್ದಾರೆ. ತಳ್ಳುವ ಗಾಡಿ ನಡೆಸಿಕೊಂಡು ಬಾಲಕಿಗೆ ಪೋಷಕರು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಅಂಗವಿಕಲ ಬಾಲಕಿಗೆ ಈಗಾಗಲೇ 7 ಲಕ್ಷ ರೂ. ಖರ್ಚು ಮಾಡಿ ಕಾಲಿನ ಆಪರೇಷನ್ ಮಾಡಿಸಿದ್ದಾರೆ. ಆದರೆ ಈಗ ಬಾಲ ತೆಗೆಸಲು ಪೋಷಕರಿಗೆ ಹಣ ಸಮಸ್ಯೆ ಎದುರಾಗಿದೆ. ಆರ್ಥಿಕ ಸಂಕಷ್ಟದಿಂದ ಸೂಕ್ತ ಚಿಕತ್ಸೆ ಕೊಡಿಸಲಾಗದೆ ಕುಟುಂಬ ಸದಸ್ಯರು ಕಣ್ಣೀರು ಹಾಕುತ್ತಿದ್ದಾರೆ. 

ಬಾಲ ತೆಗೆಸದಿದ್ದರೆ ಪ್ರಾಣಕ್ಕೆ ಸಂಚಕಾರ: ಬಾಲಕಿಯನ್ನು ಈಗಾಗಲೇ ನಿಮಾನ್ಸ್ ವೈದ್ಯರು ಬಳಿ ತೋರಿಸಲಾಗಿದೆ. ವೈದ್ಯರು ಆಪರೇಷನ್ ಮಾಡಿ ಬಾಲ ತೆಗೆಯುವುದಾಗಿ ಹೇಳಿದ್ದಾರೆ. ಆಪರೇಷನ್ ಮಾಡದಿದ್ದರೆ ವೈದ್ಯರು ಪ್ರಾಣಕ್ಕೆ ಅಪಾಯವೆಂದು ಹೇಳಿದ್ದಾರೆ. ಆಪರೇಷನ್‌ಗೆ ಹಣವಿಲ್ಲ ಎಂದು ಪೋಷಕರು ಬೇಸರತೋಡಿಕೊಂಡಿದ್ದಾರೆ. ಆರ್ಥಿಕವಾಗಿ ಸಹಾಯ ಮಾಡುವಂತೆ ಪೋಷಕರು ಮನವಿ ಮಾಡಿಕೊಂಡಿದ್ದಾರೆ.

ಕೂದಲುಳ್ಳ ಬಾಲ ಹೊಂದಿರುವ ನೇಪಾಳದ ಹುಡುಗ, 'ಹನುಮಂತನ ಪುನರ್ಜನ್ಮ' ಅಂದ್ರು ಸ್ಥಳೀಯರು!

ಮೆಕ್ಸಿಕೋ: ಇತ್ತೀಚೆಗೆ ಮೆಕ್ಸಿಕೋದಲ್ಲಿ ಬಾಲವನ್ನು ಹೊಂದಿರುವಂಥಾ ಮಗು ಜನಿಸಿತ್ತು. ನಂತರ ಶಸ್ತ್ರಚಿಕಿತ್ಸೆ (Operaton) ಮಾಡಿ ಬಾಲವನ್ನು ತೆಗೆಯಲಾಗಿದೆ.  ಎರಡು ತಿಂಗಳ ಹಿಂದೆ ನ್ಯೂವೊ ಲಿಯಾನ್‌ನಲ್ಲಿರುವ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಮೂಲಕ ಹೆಣ್ಣು ಮಗು ಜನಿಸಿದ್ದು, ವೈದ್ಯರು, ನರ್ಸ್‌ಗಳಲ್ಲಿ ಅಚ್ಚರಿ ಮೂಡಿಸಿದೆ. ಈಶಾನ್ಯ ಮೆಕ್ಸಿಕೋದಲ್ಲಿ ಹೆಣ್ಣು ಮಗು 2 ಇಂಚು ಉದ್ದದ ನಿಜವಾದ ಬಾಲದೊಂದಿಗೆ ಜನಿಸಿರುವುದನ್ನು ನೋಡಿ ವೈದ್ಯರು, ನರ್ಸ್‌ಗಳು ಮತ್ತು ಪೋಷಕರು ಆಘಾತಕ್ಕೊಳಗಾಗಿದ್ದಾರೆ.  ಬಾಲವನ್ನು ಹೊರತುಪಡಿಸಿ, ಶಿಶು ಸಂಪೂರ್ಣವಾಗಿ ಪರಿಪೂರ್ಣ ಮತ್ತು ಆರೋಗ್ಯಕರವಾಗಿತ್ತು. ತಾಯಿ ಕೂಡಾ ಆರೋಗ್ಯವಾಗಿದ್ದರು. ಗರ್ಭಾವಸ್ಥೆಯಲ್ಲಿಯೂ ಯಾವುದೇ ತೊಂದರೆಗಳಿರಲ್ಲಿಲ್ಲ ಮತ್ತು ಮಗು ಪೂರ್ಣಾವಧಿಯಲ್ಲಿ ಜನಿಸಿತು. 

click me!