
ಬಂಗಾರಪೇಟೆ (ಜ.4): ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿದ್ದ ಕಾರ್ಯಕ್ರಮದಲ್ಲಿ ಹಾವೊಂದು ಕಾಣಿಸಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿದ ಪ್ರಸಂಗ ಬುಧವಾರ ನಡೆಯಿತು.
ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿ ಹೊಸ ಪೊಲೀಸ್ ಠಾಣೆ ಕಟ್ಟಡ ಉದ್ಘಾಟಿಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಆಗಮಿಸುವ ಮುನ್ನ ಸಭಿಕರಿಗಾಗಿ ಹಾಕಿದ್ದ ಪೆಂಡಾಲ್ ಕೆಳಗೆ ನೂರಾರು ಕುರ್ಚಿಗಳನ್ನು ಹಾಕಲಾಗಿತ್ತು. ಅಲ್ಲಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕೂತಿದ್ದರು. ಈ ವೇಳೆ ವಿದ್ಯಾರ್ಥಿಗಳು ಕೂತಿದ್ದ ಸ್ಥಳದಲ್ಲಿ ಹಾವೊಂದು ಕಾಣಿಸಿಕೊಂಡು ಕೆಲಕಾಲ ಎಲ್ಲರೂ ಆತಂಕದಿಂದ ಗಲಿಬಿಲಿ ಗೊಳ್ಳುವಂತೆ ಮಾಡಿತು.
ಐಟಿ ಸಿಟಿ ಬೆಂಗಳೂರು ಈಗ ಕ್ರೈಂ ಸಿಟಿ! ಒಂದೇ ವರ್ಷದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾರೀ ಹೆಚ್ಚಳ!
ಹಾವನ್ನು ಕಂಡ ಕೂಡಲೇ ವಿದ್ಯಾರ್ಥಿಗಳು ಗಾಬರಿಯಿಂದ ಕಿರುಚಲು ಆರಂಭಿಸಿದರು. ಕೆಲವರು ಅಲ್ಲಿಂದ ಓಡತೊಡಗಿದರು. ಆಗ ಪೇದೆಯೊಬ್ಬರು ಹಾವನ್ನು ಲಾಠಿಯಿಂದ ಹೊಡೆದು ಕೊಂದ ನಂತರ ಎಲ್ಲರೂ ನಿರಾಳರಾದರು. ನಂತರ ಸಚಿವರು ಆಗಮಿಸಿ ಉದ್ಘಾಟನಾ ಕಾರ್ಯಕ್ರಮ ನಿರಾತಂಕವಾಗಿ ನಡೆಯಿತು.
ಲೋಕಸಭಾ ಚುನಾವಣೆ: ಇಂದು ವರಿಷ್ಠರ ಜೊತೆ ಸಿದ್ದರಾಮಯ್ಯ, ಡಿಕೆಶಿ ರಣತಂತ್ರ ಸಭೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ