ಶಾಲಾ ಶೌಚಾಲಯ ಸ್ವಚ್ಛತೆಗೆ ಶೀಘ್ರ ಪರ್‍ಯಾಯ ವ್ಯವಸ್ಥೆ: ಸಿಎಂ ಜತೆ ಚರ್ಚಿಸಿ ಕ್ರಮವೆಂದ ಮಧು ಬಂಗಾರಪ್ಪ

By Kannadaprabha NewsFirst Published Jan 15, 2024, 2:00 AM IST
Highlights

ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಸ ಗುಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು ತಲೆ ತಗ್ಗಿಸುವ ವಿಚಾರ, ನಮ್ಮ ಇಲಾಖೆಗೂ ಅಗೌರವ. ಇದಕ್ಕೆ ಆದಷ್ಟು ಬೇಗ ಮುಕ್ತಿ ಹಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

ಬೆಂಗಳೂರು (ಜ.15): ಶಾಲೆಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕಸ ಗುಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು ತಲೆ ತಗ್ಗಿಸುವ ವಿಚಾರ, ನಮ್ಮ ಇಲಾಖೆಗೂ ಅಗೌರವ. ಇದಕ್ಕೆ ಆದಷ್ಟು ಬೇಗ ಮುಕ್ತಿ ಹಾಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕ ಪೆನ್ನು ಹಿಡಿಯಬೇಕಾದ ಶಿಕ್ಷಕರು ಮತ್ತು ಮಕ್ಕಳ ಕೈಯಲ್ಲಿ ಕಸಪೊರಕೆ ಕೊಡುವ ಪದ್ಧತಿಯನ್ನು ನಾನು ಒಪ್ಪುವುದಿಲ್ಲ ಎಂದರು.

ಆದರೆ, ಇಂತಹ ವಿಚಾರಗಳು ಬಹಳಷ್ಟು ಸಲ ಗಮನಕ್ಕೆ ಬರುವುದಿಲ್ಲ. ಮೊದಲೇ ಗಮನಕ್ಕೆ ಬಂದಿದ್ದರೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗನಾಗಿ, ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ಸಚಿವನಾಗಿ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ ಎಂದು ಅವರು ಹೇಳಿದರು. ಈ ಕಾರ್ಯಗಳಿಗಾಗಿ ಶಾಲೆಗಳಿಗೆ ಒಂದೇ ಬಾರಿ 48 ಸಾವಿರ ಡಿ ಗ್ರೂಪ್‌ ನೌಕರರನ್ನು ನೇಮಕ ಮಾಡುವುದು ಸುಲಭವಲ್ಲ. ಆದರೂ, ಆದಷ್ಟು ಬೇಗ ಇದನ್ನು ನಿಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಒಂದು ಉತ್ತಮ ಪರ್ಯಾಯ ವ್ಯವಸ್ಥೆ ತರಲು ತೀರ್ಮಾನ ಮಾಡಲಾಗುವುದು ಎಂದರು. 

ಬಿಜೆಪಿಯವರು ರಾಮನ ಹೆಸರಲ್ಲಿ ಚುನಾವಣೆಗೆ ಹೊರಟಿದ್ದಾರೆ: ಸಚಿವ ಆರ್‌.ಬಿ.ತಿಮ್ಮಾಪುರ

ಶಿಕ್ಷಕರ ಬೇಡಿಕೆಗಳ ಚರ್ಚೆ: ಅದೇ ರೀತಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 6 ಮತ್ತು 8ನೇ ತರಗತಿಗೆ ಪದೋನ್ನತಿ ನೀಡಲು ಸುಗ್ರೀವಾಜ್ಞೆ ಮಾಡುವಂತೆ ಕೋರಿದ್ದೀರಿ. ಇದು ಸಚಿವ ಸಂಪುಟದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯಬೇಕಾದ ವಿಚಾರ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಲೋಕಸಭಾ ಚುನಾವಣೆ ಇರುವುದರಿಂದ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸ್ವಲ್ಪ ಹಿಂದೆ ಮುಂದೆ ಆಗಬಹುದು ಎಂದು ಹೇಳಿದರು.

click me!