ಕರ್ನಾಟಕದ ಖ್ಯಾತ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ನಿಧನ| ರವಿ ಬೆಳಗೆರೆ ನಿಧನದ ಬೆನ್ನಲ್ಲೇ ವೈರಲ್ ಆಯ್ತು ಫೇಸ್‌ಬುಕ್ ಪೋಸ್ಟ್| ನಿಮ್ಮ ಪ್ರೀತಿಗೆ ಸದಾ ಅಭಾರಿ, ಮತ್ತೆ ಹುಟ್ಟಿ ಬರ್ತೇನೆ ಕಾಯ್ತಿರಿ...!
ಬೆಂಗಳೂರು(ನ.13): ಕರ್ನಾಟಕದ ಖ್ಯಾತ ಪತ್ರಕರ್ತ, ಬರಹಗಾರ ರವಿ ಬೆಳಗೆರೆ ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಹಾಯ್ ಬೆಂಗಳೂರು ಪತ್ರಿಕೆ ಮೂಲಕವೇ ಕರುನಾಡ ಮಂದಿಗೆ ಚಿರಪರಿಚಿತರಾದ ರವಿ ಬೆಳಗೆರೆ ಬಳಿಕ ಓ ಮನಸೇ ಮೂಲಕ ಜನಪ್ರಿಯಾಗಿದ್ದರು. ಕಾದಂಬರಿ,ಅನುವಾದ, ಜೀವನ ಕಥನ ಸೇರಿದಂತೆ ಇನ್ನಿತರ ಬರಹಗಳನ್ನು ಬರೆದಿದ್ದ ಬೆಳಗೆರೆಯವರ ಪುಸ್ತಕಗಳು ಅಚ್ಚರಿಯ ರೀತಿಯಲ್ಲಿ ಮಾರಾಟವಾಗುತ್ತಿದ್ದವು.
ತಮ್ಮ ಬರಹದ ಮೂಲಕವೇ ಅನೇಕರನ್ನು ಓದಲು ಹುರುದುಂಬಿಸಿದ್ದ ರವಿ ಬೆಳಗೆರೆ, ಕರ್ನಾಟಕ್ದ ಅನೇಕ ಮಂದಿ ಯುವಜನರು ಬರವಣಿಗೆಯೆಡೆ ಮುಖ ಮಾಡುವಂತೆ ಪ್ರೇರೇಪಿಸಿದವರು. ಪತ್ರಕರ್ತರಿಗೆ ಮಾದರಿ, ಧೈರ್ಯಕ್ಕೆ ಮತ್ತೊಂದು ಹೆಸರಾಗಿದ್ದವರು. ಹೊರಗೆ ಹುಲಿಯಂತೆ ಇದ್ದರೂ, ಅವರ ಮನಸ್ಸು, ಹೃದಯ ಮಗುವಿನಂತೆ ಮುಗ್ಧವಾಗಿತ್ತು. ಹಸಿವು ಕಲಿಸಿದ ಪಾಠಗಳನ್ನು ಯಶಸ್ಸಿನ ಮೆಟ್ಟಿಲಾಗಿಸಿಕೊಂಡೇ, ವಿವಾದಗಳನ್ನು ಮೀರಿ ಬೆಳೆದಿದ್ದರು. ಹೀಗಾಗೇ ಅವರ ಅಗಲುವಿಕೆ ಕರ್ನಾಟಕ ಮಂದಿಯನ್ನು ದುಃಖಕ್ಕೆ ದೂಡಿದೆ.
Tap to resizeLatest Videos
ಇಷ್ಟು ದಿನ ಪ್ರೀತಿಸಿದ ನಿಮ್ಮೆಲ್ಲರ ಪ್ರೀತಿಗೆ ಸದಾ ನಾನು ಸದಾ ಅಭಾರಿ. ಮತ್ತೆ ಹುಟ್ಟಿ ಬರ್ತೆನೆ ಕಾಯ್ತಿರಿ.
Posted by on Thursday, 12 November 2020
ಇಂತಹ ಸಂದರ್ಭದಲ್ಲಿ ಅಅವರ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾದ ಬರಹವೊಂದು ಭಾರೀ ವೈರಲ್ ಆಗಿದೆ. ಹೌದು ಬೆಳಗೆರೆ ನಿಧನದ ಬಳಿಕ ಈ ಪೋಸ್ಟ್ ಮಾಡಲಾಗಿದ್ದು, 'ಇಷ್ಟು ದಿನ ಪ್ರೀತಿಸಿದ ನಿಮ್ಮೆಲ್ಲರ ಪ್ರೀತಿಗೆ ನಾನು ಸದಾ ಅಭಾರಿ. ಮತ್ತೆ ಹುಟ್ಟಿ ಬರುತ್ತೇನೆ ಕಾಯುತ್ತಿರಿ' ಎಂದು ಬರೆಯಲಾಗಿದೆ. ಇನ್ನು ಇದನ್ನು ಅವರ ಮಗ ಪೋಸ್ಟ್ ಮಾಡಿದ್ದಾನೆನ್ನಲಾಗಿದ್ದು, ಅವರ ಅಭಿಮಾನಿಗಳಿಂದ ಭಾರೀ ಲೈಕ್ಸ್ ಪಡೆದಿದೆ.