ಅಲ್ಪಸಂಖ್ಯಾತರ ಅಭಿವೃದ್ಧಿಗೆ 400 ಕೋಟಿ ವ್ಯಯ

By Kannadaprabha NewsFirst Published Nov 13, 2020, 12:39 PM IST
Highlights

ರಾಜ್ಯ ದೇಶದಲ್ಲಿ ಹಾಲು ಸಂಗ್ರಹಣೆಯಲ್ಲಿ 2ನೇ ಸ್ಥಾನ| ಮೊಟ್ಟೆ ಉತ್ಪಾದನೆಯಲ್ಲಿ ಏಳನೇ ಸ್ಥಾನ| ಮಾಂಸ ಉತ್ಪಾದನೆಯಲ್ಲಿ 11ನೇ ಸ್ಥಾನ| ಪಶುಪಾಲನಾ ಕ್ಷೇತ್ರ ರಾಜ್ಯದ ಕೃಷಿ ಜಿಡಿಪಿಗೇ ಶೇ.20.7ರಷ್ಟು ಹಾಗೂ ರಾಜ್ಯದ ಒಟ್ಟು ಜಿಡಿಪಿಗೆ ಶೇ.2.3ರಷ್ಟು ಕೊಡುಗೆ|

ಬೆಂಗಳೂರು(ನ.13): ಅಲ್ಪಸಂಖ್ಯಾತ ಕಲ್ಯಾಣ ಹಜ್‌ ಮತ್ತು ವಕ್ಫ್ ಇಲಾಖೆಯಡಿ ಒಂದು ವರ್ಷದಲ್ಲಿ ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗೆ 400 ಕೋಟಿ ವ್ಯಯಿಸುವ ಮೂಲಕ ಆ ಸಮುದಾಯದ ಅಭಿವೃದ್ಧಿಗೆ ಇಲಾಖೆ ಶ್ರಮಿಸಿದೆ.

ಅಲ್ಪ ಸಂಖ್ಯಾತ ಕಲ್ಯಾಣ ಹಜ್‌ ಮತ್ತು ವಕ್ಫ್ ಹಾಗೂ ಪಶು ಸಂಗೋಪಾನಾ ಇಲಾಖೆ ಒಂದು ವರ್ಷದ ಅಭಿವೃದ್ಧಿಯ ವರುಷದ ಹರುಷ ಪುಸ್ತಕವನ್ನು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಿಡುಗಡೆಗೊಳಿಸಿದರು.

ಕ್ರಿಶ್ಚಿಯನ್‌ ಸಮುದಾಯ ಅಭಿವೃದ್ಧಿ ಯೋಜನೆಯಡಿ 68 ಕೋಟಿ ವೆಚ್ಚದಲ್ಲಿ ಸಮುದಾಯ ಭವನ, ಚಚ್‌ರ್‍ ನವೀಕರಣ, ಸಶ್ಮಾನ ಅಭಿವೃದ್ಧಿ, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳ ಅಭಿವೃದ್ಧಿ ಮಾಡಲಾಗಿದೆ. ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ 28,987 ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ 152 ಕೋಟಿ ಸಾಲ ಒದಗಿಸಲಾಗಿದೆ. ಜೈನ್‌, ಬೌದ್ಧ ಮತ್ತು ಸಿಖ್‌ ಸಮುದಾಯದ ಅಭಿವೃದ್ಧಿ ಯೋಜನೆಯಡಿ ಆರು ಸಂಸ್ಥೆಗಳು ಹಾಗೂ 750 ವಿದ್ಯಾರ್ಥಿಗಳು 26 ಕೋಟಿ ಪ್ರಯೋಜನಾ ಪಡೆದಿದ್ದಾರೆ.

'BJPಗೆ ಅಲ್ಪಸಂಖ್ಯಾತರೇ ಆಹಾರ, ಅವರಿಲ್ಲದಿದ್ರೆ ಬಿಜೆಪಿ ಪಕ್ಷವೇ ಇಲ್ಲ'..!

ಗುರುನಾನಕ್‌ರ 550ನೇ ಜನ್ಮ ದಿನೋತ್ಸವದ ಅಂಗವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಬೀದರ್‌ನಲ್ಲಿರುವ ಐತಿಹಾಸಿನ ಗುರುನಾನಕ್‌ ಝರಾ ಗುರು ದ್ವಾರಕ್ಕೆ 10 ಕೋಟಿ ಹಾಗೂ ಬೆಂಗಳೂರಿನ ಹಲಸೂರು ಗುರುದ್ವಾರಕ್ಕೆ 25 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಇನ್ನು ಬಿದಾಯಿ ಯೋಜನೆಯಡಿ 42,294 ಫಲಾನುಭವಿಗಳಿಗೆ 130 ಕೋಟಿ ಸಹಾಯಧನ ನೀಡಲಾಗಿದೆ. ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರ ಮಂತ್ರಾಲಯ ವತಿಯಿಂದ ಪ್ರಧಾನಮಂತ್ರಿ ಜನವಿಕಾಸ ಕಾರ್ಯಕ್ರಮ ಯೋಜನೆಯ 12ನೇ ಪಂಚವಾರ್ಷಿಕ ಸಾಲಿನಲ್ಲಿ ಒಟ್ಟು 300 ಕೋಟಿ ಅನುದಾನಕ್ಕೆ ಅನುಮೋದನೆ ದೊರೆತಿದ್ದು, ಈ ಪೈಕಿ 221 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ 167 ಕೋಟಿ ವ್ಯಯಿಸಲಾಗಿದೆ.

ಪಶುಪಾಲನಾ ಇಲಾಖೆ:

ರಾಜ್ಯವು ದೇಶದಲ್ಲಿ ಹಾಲು ಸಂಗ್ರಹಣೆಯಲ್ಲಿ 2ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ ಏಳನೇ ಸ್ಥಾನ, ಮಾಂಸ ಉತ್ಪಾದನೆಯಲ್ಲಿ 11ನೇ ಸ್ಥಾನ ಹೊಂದಿದ್ದು, ಪಶುಪಾಲನಾ ಕ್ಷೇತ್ರ ರಾಜ್ಯದ ಕೃಷಿ ಜಿಡಿಪಿಗೇ ಶೇ.20.7ರಷ್ಟು ಹಾಗೂ ರಾಜ್ಯದ ಒಟ್ಟು ಜಿಡಿಪಿಗೆ ಶೇ.2.3ರಷ್ಟು ಕೊಡುಗೆ ನೀಡುತ್ತಿದೆ.

ರಾಜ್ಯದ 8.8 ಲಕ್ಷ ಹಾಲು ಉತ್ಪಾದಕರಿಗೆ 1260.82 ಕೋಟಿ ಪ್ರೋತ್ಸಾಹ ಧನವನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗಿದೆ. 132 ಗೋ ಶಾಲೆಗಳಿಗೆ 5.61 ಕೋಟಿ ಅನುದಾನದಲ್ಲಿ ಪಿಂಜರಾ ಪೋಲ್‌ ಹಾಗೂ ಇತರೆ ಗೋ ಶಾಲೆಗಳಿಗೆ ಅನುದಾನ ಬಿಡುಗಡೆ ಒದಗಿಸಿದೆ. ಆಕಸ್ಮಿಕವಾಗಿ ಮರಣ ಹೊಂದಿದ 37,094 ಕುರಿ/ಮೇಕೆಗಳ ಮಾಲೀಕರಿಗೆ 17.07 ಕೋಟಿ ಸಹಾಯಧನ ನೀಡಲಾಗಿದೆ. ಅಸೀಲ್‌ ದೇಶಿ ಕೋಳಿಗಳ ಪಾಲನೆಗೆ ರೈತರು ಆಸ್ತಿ ತೋರಿದ ಕಾರಣ ಹಿತ್ತಲ ಕೋಳಿ ಸಾಕಾಣಿಕೆಗೇ ಅಸೀಲ್‌ ತಳಿಯ ಕೋಳಿಗಳನ್ನು ಪೂರೈಸಿ ಪ್ರೋತ್ಸಾಹಿಸಲಾಗಿದ್ದು, 5292 ಫಲಾನುಭವಿಗಳಿಗೆ 20,100 ಕೋಳಿಗಳನ್ನು ವಿತರಿಸಲಾಗಿದೆ. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಪಶುಸಂಗೋಪನೆ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್‌ ಇದ್ದರು.

ಬಲ್ಯಾನ್‌ ಜತೆ ಚೌಹಾಣ್‌ ಭೇಟಿ

ಬೆಂಗಳೂರಿನ ಖಾಸಗಿ ಹೋಟೆಲ್‌ ಕೇಂದ್ರ ಸಚಿವ ಸಂಜೀವ್‌ ಕುಮಾರ್‌ ಬಲ್ಯಾನ್‌ ಅವರನ್ನು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಭೇಟಿಯಾದರು. ರಾಜ್ಯದಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡ ಪಶುಸಂಜೀವಿನಿ (ಸುಸಜ್ಜಿತ ಪಶು ಶಸ್ತ್ರ ಚಿಕಿತ್ಸಾ ವಾಹನ), ಪ್ರಾಣಿಕಲ್ಯಾಣ ಮಂಡಳಿ ಹಾಗೂ ಸದ್ಯದಲ್ಲೇ ಅನುಷ್ಠಾನಗೊಳ್ಳಲಿರುವ ಗೋ ಸೇವಾ ಆಯೋಗ, ವಾರ್‌ ರೂಮ… ಕುರಿತಾಗಿ ಪ್ರಭು ಚವ್ಹಾಣ್‌ ಕೇಂದ್ರ ಸಚಿವರಿಗೇ ಮಾಹಿತಿ ನೀಡಿದರು. ಈ ವೇಳೆ ಕೇಂದ್ರ ಪಶುಸಂಗೋಪನೆ ಇಲಾಖೆಯ ಆಯುಕ್ತರಾದ ಪ್ರವೀಣ್‌ ಮಲಿಕ್‌ ಇದ್ದರು.
 

click me!