
ಕೊಳ್ಳೇಗಾಲ (ಆ.25) : ಎರಡು ದಿನಗಳ ಹಿಂದೆ ಕರ್ತವ್ಯಕ್ಕೆ ಆಗಮಿಸಿದ್ದ ಕೆಎಸ್‌ಆರ್‌ಪಿ ಪೊಲೀಸ್ ಮುಖ್ಯಪೇದೆ ಮೋಹನ್ (44) ಎಂಬುವರು ಸಾರ್ವಜನಿಕರ ವಿದ್ಯಾರ್ಥಿ ನಿಲಯದಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಜರುಗಿದೆ.
ಕಾವೇರಿ ನದಿ ನೀರ(Cauvery river)ನ್ನು ತಮಿಳುನಾಡಿಗೆ ಹರಿಸುತ್ತಿದ್ದು, ಈ ಸಂಬಂಧ ಗಲಭೆಗಳು ಉಂಟಾಗದಂತೆ ಎಚ್ಚರವಹಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‌ಆರ್‌ಪಿ ಮೈಸೂರು ಬೆಟಾಲಿಯನ್‌ನ 23 ಮಂದಿ ಕೊಳ್ಳೇಗಾಲದಲ್ಲಿ ಕರ್ತವ್ಯ ನಿರ್ವಹಣೆಗಾಗಿ ಕಳೆದ ಎರಡು ದಿನಗಳ ಹಿಂದೆ ಆಗಮಿಸಿದ್ದವರನ್ನು ಇಲ್ಲಿನ ಸಾರ್ವಜನಿಕರ ವಿದ್ಯಾರ್ಥಿ ನಿಲಯದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕರ್ತವ್ಯ ಮುಗಿಸಿಕೊಂಡು ಹಾಸ್ಟೆಲ್‌ನಲ್ಲಿ ತಂಗಿದ್ದ ಮುಖ್ಯಪೇದೆ ಮೋಹನ್ ಕುಟುಂಬದ ಜೊತೆ ಪೋನ್‌ನಲ್ಲಿ ಮಾತನಾಡಿ ಮಲಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಪೊಲೀಸರೆಲ್ಲಾ ಎದ್ದು ರೋಲ್ ಕಾಲ್‌ಗೆ ರೆಡಿಯಾಗದೇ ಮಲಗಿದ್ದ ಮೋಹನ್‌ನನ್ನು ಎಬ್ಬಿಸಲು ತೆರಳಿದ ವೇಳೆ ಮೋಹನ್ ಸಾವಿಗೀಡಾಗಿರುವುದು ಕಂಡು ಬಂದಿದೆ. ತಕ್ಷಣ ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ತಿಳಿಸಿ ಬಳಿಕ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ತಂದಿರಿಸಲಾಯಿತು.
ಸೊಂಟ ದಪ್ಪಗಿರೋರಿಗೆ ಹೃದಯಾಘಾತದ ಅಪಾಯ ಹೆಚ್ಚು; ಮನೆಯಲ್ಲೇ ಹೀಗೆ ಚೆಕ್ ಮಾಡಿಕೊಳ್ಳಿ!
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಶವವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಗಿದೆ.
ಮಡಿಕೇರಿ ಜಿಲ್ಲೆಯ ನಾಪ್ಲೋಕು ಹೋಬಳಿಯ ಕಕ್ಕಬೇ ಗ್ರಾಮದ ವಾಸಿ ಮೋಹನ್(head constable mohan), ಕಳೆದ 24ವರ್ಷ ಹಿಂದೆ 1999 ಬ್ಯಾಚ್‌ನಲ್ಲಿ ಕರ್ತವ್ಯಕ್ಕೆ ಸೇರಿ ಮುಖ್ಯ ಪೇದೆಯಾಗಿ ಬಡ್ತಿ ಹೊಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮೈಸೂರಿನ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ವಾಸವಿದ್ದರು.
ವಿಚಾರ ತಿಳಿಯುತ್ತಿದ್ದಂತೆ ಚಾ.ನಗರ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಡಿವೈಎಸ್ಪಿ ಸೋಮೇಗೌಡ, ವೃತ್ತ ನಿರೀಕ್ಷಕ ಕೃಷ್ಣಪ್ಪ, ಮೈಸೂರು ಕೆಎಸ್‌ಆರ್‌ಪಿ ಡಿವೈಎಸ್ಪಿ ರಾಜು, ಟೌನ್ ಸಬ್‌ಇನ್ಸ್‌ಪೆಕ್ಟರ್ ಮಹೇಶ್ ಕುಮಾರ್ ಹಾಗೂ ಸಿಬ್ಬಂದಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.
36 ವರ್ಷದ WWE ಮಾಜಿ ಚಾಂಪಿಯನ್, ರಸ್ಲರ್ ಬ್ರೇ ವ್ಯಾಟ್ ಹೃದಯಾಘಾತಕ್ಕೆ ಬಲಿ
ಈ ವೇಳೆ ಎಸ್ಪಿಯವರು ಮೃತ ಮುಖ್ಯ ಪೇದೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಅಂತಿಮ ಗೌರವ ಸಲ್ಲಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ