ಚಲಿಸುತ್ತಿದ್ದ ಬಸ್‌ ಟೈಯರ್‌ ಸ್ಫೋಟ, 80ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು!

By Ravi Janekal  |  First Published Aug 24, 2023, 11:02 PM IST

ತಾಲೂಕಿನ ಗೋಪಶಿಟ್ಟಾಸಮೀಪ ಸಾರಿಗೆ ಸಂಸ್ಥೆಯ ಬಸ್‌ನ ಮುಂಭಾಗದ ಚಕ್ರ ಗುರುವಾರ ಸ್ಫೋಟಗೊಂಡ ಪರಿಣಾಮ ಆಗುತ್ತಿದ್ದ ಅನಾಹುತವು ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದೆ. ಅಂದಾಜು 65-70 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.


ಕಾರವಾರ (ಆ.24) :  ತಾಲೂಕಿನ ಗೋಪಶಿಟ್ಟಾಸಮೀಪ ಸಾರಿಗೆ ಸಂಸ್ಥೆಯ ಬಸ್‌ನ ಮುಂಭಾಗದ ಚಕ್ರ ಗುರುವಾರ ಸ್ಫೋಟಗೊಂಡ ಪರಿಣಾಮ ಆಗುತ್ತಿದ್ದ ಅನಾಹುತವು ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದೆ. ಅಂದಾಜು 65-70 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಸಾರಿಗೆ ಸಂಸ್ಥೆಯ ಕಾರವಾರ ಘಟಕದ ಬಸ್‌ ನಗರದ ಬಸ್‌ ನಿಲ್ದಾಣದಿಂದ ಮಲ್ಲಾಪುರ ಕದ್ರಾ ಮಾರ್ಗವಾಗಿ ಪ್ರಯಾಣಿಕರನ್ನು ತುಂಬಿಕೊಂಡು ಹೊರಟಿತ್ತು. ಆದರೆ ಗೋಪಶಿಟ್ಟಾಸಮೀಪ ಬಸ್ಸಿನ

Latest Videos

undefined

ಮುಂದಿನ ಟೈಯರ್‌ ಸ್ಫೋಟಗೊಂಡಿತ್ತು. ಚಾಲಕನ ಸಮಯ ಪ್ರಜ್ಞೆಯಿಂದ ಅಪಘಾತ ಸಂಭವಿಸುವ ಹಂತದಲ್ಲಿದ್ದ ಬಸ್‌ ಸೇತುವೆಯನ್ನು ತಪ್ಪಿ ಮುಂದೆ ಹೋಗಿ ನಿಂತಿತು. ಹೀಗಾಗಿ ಅದೃಷ್ಠವಶಾತ್‌ ಯಾವುದೇ ಆಪಾಯವಾಗಿಲ್ಲ. ಈ ಭಾಗದಲ್ಲಿ ಹೆಚ್ಚು ವಾಹನ ಓಡಾಡದ ಕಾರಣ ಮಧ್ಯಾಹ್ನದ ವರೆಗೂ ಕೆಲವು ಪ್ರಯಾಣಿಕರು ರಸ್ತೆಯಲ್ಲೇ ನಿಲ್ಲುವಂತಾಯಿತು.

ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ 14 ಅಪಘಾತ: ನಾಲ್ವರ ಸಾವು, 15 ಮಂದಿಗೆ ಗಾಯ

ಲಾರಿ ಉರುಳಿಬಿದ್ದು ಚಾಲಕ ಸಾವು

ಬೆಳಗಾವಿ: ನಿಪ್ಪಾಣಿಯ ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ತೌವಂದಿ ಘಾಟ್‌ನ ಇಳಿಜಾರಿನಲ್ಲಿ ಸ್ಟೀಲ್‌ ಪೈಪ್‌ ಸಾಗಿಸುತ್ತಿದ್ದ ಲಾರಿ ಉರುಳಿಬಿದ್ದು ಚಾಲಕ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪ್ರದೀಪ (50) ಮೃತಪಟ್ಟಲಾರಿ ಚಾಲಕ. ಕ್ಲೀನರ್‌ ರಂಗನಾಥನ್‌ (20) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿಯು ಬೆಂಗಳೂರಿನಿಂದ ಮುಂಬೈ ಕಡೆಗೆ ತೆರಳುತ್ತಿತ್ತು. ಅಪಾಯಕಾರಿ ತಿರುವಿನಲ್ಲೇ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿ ಬಿದ್ದಿದ್ದರಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಲಾರಿ ರಾಷ್ಟ್ರೀಯ ಹೆದ್ದಾರಿ ಮೇಲೆ ಡಿವೈಡರ್‌ ಮೇಲೆಯೇ ಉರುಳಿ ಬಿದ್ದಿದೆ. ಕಬ್ಬಿಣ ಸರಳಿಗಳೆಲ್ಲವೂ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಬಿ.ಎಸ್‌.ತಳವಾರ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಸಿಲಿಕಾನ್ ಸಿಟಿಯಲ್ಲಿ ಸರಣಿ ಅಪಘಾತ; ಓರ್ವ ಸ್ಥಳದಲ್ಲೇ ಸಾವು!

click me!