ಹಿಮಾಚಲದಲ್ಲಿ ಟ್ರೆಕ್ಕಿಂಗ್‌ ವೇಳೆ ನಾಪತ್ತೆ ಆಗಿದ್ದ ಬೆಂಗ್ಳೂರಿನ ವ್ಯಕ್ತಿ ಶವವಾಗಿ ಪತ್ತೆ!

By Kannadaprabha NewsFirst Published Aug 25, 2022, 9:51 AM IST
Highlights

ಹಿಮಾಚಲ ಪ್ರದೇಶಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟ್ರೆಕ್ಕರ್‌ ವೇದವ್ಯಾಸ ಅವರ ಶವ, 2 ತಿಂಗಳ ಬಳಿಕ ಲಭಿಸಿದೆ. ಅವರ ದೇಹ ಸುಮಾರು 2 ತಿಂಗಳ ಬಳಿಕ ಹಿಮಾಚಲ ಪ್ರದೇಶದ ಲಾಹೌಲ್‌ನಲ್ಲಿರುವ 5300 ಅಡಿ ಎತ್ತರದಲ್ಲಿರುವ ಢಾಕಾ ಹಿಮನದಿಯ ಆಳವಾದ ಬಿರುಕಿನಲ್ಲಿ ಮಂಗಳವಾರ ಪತ್ತೆಯಾಗಿದೆ.

ಮಂಡಿ (ಹಿಮಾಚಲ ಪ್ರದೇಶ) (ಆ.25) : ಹಿಮಾಚಲ ಪ್ರದೇಶಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ಟ್ರೆಕ್ಕರ್‌ ವೇದವ್ಯಾಸ ಅವರ ಶವ, 2 ತಿಂಗಳ ಬಳಿಕ ಲಭಿಸಿದೆ. ಅವರ ದೇಹ ಸುಮಾರು 2 ತಿಂಗಳ ಬಳಿಕ ಹಿಮಾಚಲ ಪ್ರದೇಶದ ಲಾಹೌಲ್‌ನಲ್ಲಿರುವ 5300 ಅಡಿ ಎತ್ತರದಲ್ಲಿರುವ ಢಾಕಾ ಹಿಮನದಿಯ ಆಳವಾದ ಬಿರುಕಿನಲ್ಲಿ ಮಂಗಳವಾರ ಪತ್ತೆಯಾಗಿದೆ.

ಭಾರತಕ್ಕೆ ಮತ್ತೆ ಕಾಡಿದ ಮೇಘಸ್ಫೋಟ, ಹಿಮಾಚಲ ಪ್ರದೇಶ ಪ್ರವಾಹಕ್ಕೆ 15 ಸಾವು, 8 ಮಂದಿ ನಾಪತ್ತೆ!

ಅಟಲ್‌ ಬಿಹಾರಿ ವಾಜಪೇಯಿ ಪರ್ವತಾರೋಹಣ ಸಂಸ್ಥೆ(Atal Bihari Vajpayee Mountaineering Institute)ಯ 11 ಸದಸ್ಯರ ತಂಡವು 5300 ಅಡಿ ಎತ್ತರದಲ್ಲಿರುವ ಹಿಮನದಿಯ ಬಿರುಕಿನಲ್ಲಿದ್ದ ಬೆಂಗಳೂರಿನ ಟ್ರೆಕ್ಕರ್‌) ವೇದವ್ಯಾಸ ಅವರ ದೇಹವನ್ನು ಪತ್ತೆ ಮಾಡಿದೆ. ಆಳ ಹಾಗೂ ಕಿರಿದಾದ ಹಿಮನದಿಯ ಬಿರುಕಿನಿಂದ ಮೃತ ದೇಹವನ್ನು ಹೊರತೆಗೆಯಲು 8 ದಿನ ಕಾರ್ಯಾಚರಣೆ ನಡೆಸಲಾಗಿದೆ. ಲಾಹೌಲ್‌ನಲ್ಲಿರುವ ಕೀಲಾಂಗ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ದೇಹವನ್ನು ಸಾಗಿಸಲಾಗಿದ್ದು, ಬಳಿಕ ದೇಹವನ್ನು ಕುಟುಂಬದವರಿಗೆ ರವಾನಿಸಲಾಗುವುದು ಎಂದು ಪರ್ವತಾರೋಹಣ ಸಂಸ್ಥೆ ನಿರ್ದೇಶಕ ಅವಿನಾಶ್‌ ನೇಗಿ ಹೇಳಿದ್ದಾರೆ.

ಆಗಿದ್ದೇನು?:

ಜೂ.16ರಂದು ವೇದವ್ಯಾಸ ಇತರೆ ಮೂವರು ಪರ್ವತಾರೋಹಿಗಳ ಜೊತೆಯಲ್ಲಿ ಲಾಹೌಲ್‌ ಹಾಗೂ ಸ್ಪಿಟಿಯಲ್ಲಿರುವ ಹಿಮನದಿಗೆ ಟ್ರೆಕ್ಕಿಂಗ್‌ಗಾಗಿ ತೆರಳಿದ್ದರು. ಜೂ.26ರಂದು ಟ್ರೆಕ್ಕಿಂಗ್‌ ನಡೆಸುವಾಗ ಆಕಸ್ಮಿಕವಾಗಿ ಜಾರಿ ಹಿಮನದಿಯ ಆಳವಾದ ಬಿರುಕಿನಲ್ಲಿ ಬಿದ್ದಿದ್ದರು. ಅವರೊಂದಿಗೆ ಟ್ರೆಕ್ಕಿಂಗ್‌ ನಡೆಸುತ್ತಿದ್ದ ಬೆಂಗಳೂರಿನ ಪ್ರಸನ್ನ, ಜೈಪುರದ ರವಿ ಹಾಗೂ ಶಿಮ್ಲಾದ ಕುಶಾಲ್‌ ಬಿರುಕಿನಲ್ಲಿ ವೇದವ್ಯಾಸ ಬಳಸುತ್ತಿದ್ದ ಹಗ್ಗ ಇದ್ದದ್ದನ್ನು ಕಂಡರು. ಆದರೆ, ಅವರಿದ್ದ ಸ್ಥಳವನ್ನು ತಲುಪಲು ಸಫಲವಾಗಲಿಲ್ಲ. ಬಳಿಕ ಮೂವರು ಆರೋಗ್ಯ ಸಮಸ್ಯೆ ಹಾಗೂ ವಿಪರೀತ ಹವಾಮಾನದ ಕಾರಣ ಟ್ರೆಕ್‌ ಮುಂದುವರೆಸಲಾಗದೇ ಮರಳಿದ್ದರು. ಈ ಬಗ್ಗೆ ಸೇನೆಯ ಡೋಗ್ರಾ ಸ್ಕೌಟ್ಸ್‌ ರಕ್ಷಣಾ ಪಡೆಗಳಿಗೆ ತಿಳಿಸಿದರೂ ಅವರಿಗೆ ವೇದವ್ಯಾಸನಿರುವ ಸ್ಥಳಕ್ಕೆ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ತಲುಪಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಅವರ ಶವ ಸಿಕ್ಕಿದೆ.

ಹಿಮಾಚಲ, ಪಂಜಾಬ್‌ನಲ್ಲಿ ಭಾರಿ ಮಳೆ, 93 ವರ್ಷದ ಹಿಂದೆ ನಿರ್ಮಿಸಿದ್ದ ರೈಲೈ ಸೇತುವೆ ಕಟ್‌!

ಎಲ್ಲಿದೆ?: ಚಂದ್ರಭಾಗಾ ಪರ್ವತ ಶ್ರೇಣಿಯ ಸ್ಪಿಟಿ ಕಣಿವೆಯಲ್ಲಿ ಢಾಕಾ ಹಿಮನದಿ ಇದೆ. 1968ರಲ್ಲಿ ವಾಯುಪಡೆಯ ವಿಮಾನ ಇಲ್ಲಿ ಪತನ ಹೊಂದಿದ್ದು, 98 ಯೋಧರು ಹಾಗೂ 4 ವಿಮಾನ ಸಿಬ್ಬಂದಿ ಕೂಡಾ ಇಲ್ಲಿ ಮೃತಪಟ್ಟಿದ್ದರು.

click me!