ಲವ್ ಜಿಹಾದ್ ಇಂದಿನ ದೊಡ್ಡ ಪಿಡುಗು ಆಗಿದ್ದು, ಅದು ಕೇವಲ ಮತಾಂತರದ ಅಸ್ತ್ರವಾಗಿ ಉಳಿದಿಲ್ಲ. ಹಿಂದು ಯುವತಿಯರ ಮೇಲೆ ದೌರ್ಜನ್ಯ, ಶೋಷಣೆ, ಅತ್ಯಾಚಾರ ನಡೆಸಲು ವ್ಯವಸ್ಥಿವಾಗಿ ಬಳಕೆಯಾಗುತ್ತಿದೆ. ಹೀಗಾಗಿ ಹಿಂದು ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗದಂತೆ ಜಾಗೃತರಾಗಬೇಕು ಎಂದು ಎಸ್‌ಎಸ್‌ಕೆ ಸಮಾಜದವತಿಯಿಂದ ಯುವತಿಯರಿಗೆ ಲವ್ ಜಿಹಾದ್ ಬಗ್ಗೆ ಅರಿವು ಮೂಡಿಸಲಾಯಿತು.
ಗದಗ (ನ.26): ಲವ್ ಜಿಹಾದ್ ಇಂದಿನ ದೊಡ್ಡ ಪಿಡುಗು ಆಗಿದ್ದು, ಅದು ಕೇವಲ ಮತಾಂತರದ ಅಸ್ತ್ರವಾಗಿ ಉಳಿದಿಲ್ಲ. ಹಿಂದು ಯುವತಿಯರ ಮೇಲೆ ದೌರ್ಜನ್ಯ, ಶೋಷಣೆ, ಅತ್ಯಾಚಾರ ನಡೆಸಲು ವ್ಯವಸ್ಥಿವಾಗಿ ಬಳಕೆಯಾಗುತ್ತಿದೆ. ಹೀಗಾಗಿ ಹಿಂದು ಯುವತಿಯರು ಲವ್ ಜಿಹಾದ್‌ಗೆ ಬಲಿಯಾಗದಂತೆ ಜಾಗೃತರಾಗಬೇಕು ಎಂದು ಎಸ್‌ಎಸ್‌ಕೆ ಸಮಾಜದವತಿಯಿಂದ ಯುವತಿಯರಿಗೆ ಲವ್ ಜಿಹಾದ್ ಬಗ್ಗೆ ಅರಿವು ಮೂಡಿಸಲಾಯಿತು.
ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತೋತ್ಸವದ ಅಂಗವಾಗಿ ಗದಗ ನಗರದ ವಿಠ್ಠಲ ರೂಢಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೋಷಕರಿಂದ ತಮ್ಮ ಮಕ್ಕಳಿಗೆ ಲವ್ ಜಿಹಾದ್ ಗೆ ಬಲಿಯಾಗುವುದಿಲ್ಲ ಎಂಬ ಬಗ್ಗೆ ಆಣೆ ಪ್ರಮಾಣ ಮಾಡಿಸಲಾಯಿತು. ಸುಮಾರು 200 ಯುವತಿಯರು, ಪೋಷಕರು ಪಾಲ್ಗೊಂಡಿದ್ದ ಕಾರ್ಯಕ್ರಮ. ಸಭೆಯಲ್ಲಿ ಅನ್ಯ ಧರ್ಮಿ ಯುವಕನ ಲವ್ ಜಿಹಾದ್ ಬಗ್ಗೆ ಜಾಗೃತಿ ಮೂಡಿಸಲಾಯಿತು. ಬಳಿಕ ದೇವರ ಮೇಲೆ ಆಣೆ ಪ್ರಮಾಣ ಮಾಡಿಸಿದ ಪೋಷಕರು. ಸುಮಾರು 200 ಯುವತಿಯರಿಗೆ ಆಣೆ ಪ್ರಮಾಣ ಮಾಡಿಸಿ ಜಾಗೃತಿ ಮೂಡಿಸಲಾಯಿತು.
undefined
ಕೇರಳ ಸ್ಟೋರಿ ಚಿತ್ರವನ್ನು ಟೀಕಿಸಿ ಮುಸ್ಲಿಂ ವ್ಯಕ್ತಿಯ ಮದುವೆಯಾಗಿದ್ದ ಹಿಂದು ಹುಡುಗಿ ಬದುಕು ನರಕ!
ಪರಸ್ಪರ ಪ್ರೀತಿಸಿ ಮದುವೆಯಾಗುವುದು ಜಾತಿ ಮತ ಪಂಥ ಮೀರಿದ್ದು ನಿಜ. ಆದರೆ ಎಲ್ಲ ಪ್ರೇಮ ವಿವಾಹಗಳು ಒಂದೇ ಆಗಿರುವುದಿಲ್ಲ. ಇಲ್ಲಿ ಪ್ರೀತಿ ಪ್ರೇಮಗಳ ಹೆಸರಿನಲ್ಲಿ ವಂಚನೆಗಳು ನಡೆಯುತ್ತವೆ. ಅದಕ್ಕೆ ಸ್ಪಷ್ಟ ಉದಹಾರಣೆ ಲವ್ ಜಿಹಾದ್. ಹೀಗಾಗಿ ಪ್ರೀತಿ ಪ್ರೇಮ, ಲವ್ ಜಿಹಾದ್ ಎಂದು ಭಾವಿಸುವ ಆಗಿಲ್ಲ. ಧರ್ಮವನ್ನು ಧಿಕ್ಕರಿಸಿ ಲವ್ ಜಿಹಾದ್ ಗೆ ಬಲಿಯಾಗಿ ದುರಂತ ಸಾವು ಕಂಡ ಎಷ್ಟೋ ಉದಾಹರಣೆಗಳು ಕಣ್ಣುಮುಂದಿವೆ.
ಲವ್ ಜಿಹಾದ್‌ಗೆ ಒದ್ದಾಡಿದ ರಾಷ್ಟ್ರೀಯ ಶೂಟರ್‌ಗೆ ಸಿಕ್ಕಿತು ನ್ಯಾಯ, ಪತಿ ರಖೀಬುಲ್‌ಗೆ ಜೀವಾವಧಿ ಶಿಕ್ಷೆ!
ಪ್ರೇಮ ಆಕಸ್ಮಿಕವಾಗಿದ್ದರೆ, ಲವ್ ಜಿಹಾದ್ ಉದ್ದೇಶಪೂರ್ವಕದಿಂದ ಕೂಡಿದೆ. ಹಿಂದು ಯುವತಿಯವರನ್ನು ಮತಾಂತರ ಮಾಡುವ ಉದ್ದೇಶದಿಂದಲೇ ಪ್ರೀತಿ ಪ್ರೇಮ ನಾಟಕವಾಡಿ ಕೊನೆಗೆ ಮಹಿಳೆಯರ ಶೋಷಣೆ ಮಾಡುವ ಉದ್ದೇಶವೇ ಆಗಿದೆ. ಹೀಗಾಗಿ ಹಿಂದು ಯುವತಿಯರು ಲವ್ ಜಿಹಾದ್ ಗೆ ಬಲಿಯಾಗದಂತೆ ಜಾಗೃತಿ ವಹಿಸುವಂತೆ ಹಿಂದು ಸಂಘಟನೆಗಳು ನಿರಂತರವಾಗಿ ಜಾಗೃತಿ ಮೂಡಿಸುತ್ತ ಬಂದಿವೆ.