ಅದ್ಧೂರಿ ವಿವಾಹ ಬದಲು ಮಂತ್ರಮಾಂಗಲ್ಯಕ್ಕೆ ಮುಂದಾದ ಸರ್ಕಾರಿ ಅಧಿಕಾರಿ!

By Kannadaprabha News  |  First Published Nov 25, 2023, 4:23 AM IST

ಮದುವೆ ಎಂದರೆ ಅಬ್ಬರ, ಆಡಂಬರ.‌ ಇನ್ನು, ರಾಜಕಾರಣಿಗಳು, ಅಧಿಕಾರಿಗಳ ಮದುವೆ ಎಂದರೇ ಸ್ವರ್ಗವೇ ಧರೆಗೆ ಇಳಿದುಬಂದಂತೆ ಆದ್ಧೂರಿತನ ಪ್ರದರ್ಶನ. ಆದರೆ, ಇದಕ್ಕೆಲ್ಲಾ ಹೊರತಾಗಿದ್ದಾರೆ ಈ ಮಹಿಳಾ ಅಧಿಕಾರಿ. 


ದೇವರಾಜು ಕಪ್ಪಸೋಗೆ

ಚಾಮರಾಜನಗರ (ನ.25): ಮದುವೆ ಎಂದರೆ ಅಬ್ಬರ, ಆಡಂಬರ.‌ ಇನ್ನು, ರಾಜಕಾರಣಿಗಳು, ಅಧಿಕಾರಿಗಳ ಮದುವೆ ಎಂದರೇ ಸ್ವರ್ಗವೇ ಧರೆಗೆ ಇಳಿದುಬಂದಂತೆ ಆದ್ಧೂರಿತನ ಪ್ರದರ್ಶನ. ಆದರೆ, ಇದಕ್ಕೆಲ್ಲಾ ಹೊರತಾಗಿದ್ದಾರೆ ಈ ಮಹಿಳಾ ಅಧಿಕಾರಿ. ಚಾಮರಾಜನಗರದ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ) ಆಗಿರುವ ಗೀತಾ ಹುಡೇದ ಅವರು ನ. 26ರಂದು ಮೈಸೂರಿನಲ್ಲಿ ಸಂವಿಧಾನ ದಿನವೇ ಮಂತ್ರಮಾಂಗಲ್ಯದ ಮೂಲಕ ನವ ಜೀವನಕ್ಕೆ ಕಾಲಿಡುತ್ತಿದ್ದು ಉನ್ನತ ಅಧಿಕಾರಿಯಾಗಿ ಇತರರಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

Tap to resize

Latest Videos

undefined

ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಎಂ.ಆರ್‌. ಹರೀಶ್ ಕುಮಾರ್ ಎಂಬವರೊಟ್ಟಿಗೆ ಮೈಸೂರಿನಲ್ಲಿ ಕುವೆಂಪು ಅವರ ಆಶಯದಂತೆ ಮಂತ್ರಮಾಂಗಲ್ಯದ ಮೂಲದ ನವಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ವಿವಾಹ ಆಮಂತ್ರಣದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹಾಗೂ ಕುವೆಂಪು ಚಿತ್ರಗಳನ್ನು ಹಾಕಿಸಿ ವೈಚಾರಿಕತೆಯ ಮನೋಭಾವ ಮೆರೆದಿದ್ದಾರೆ.

ಡಿಕೆಶಿ ಸಿಬಿಐ ಕೇಸ್ ವಾಪಸ್, ಇವರೆಲ್ಲಾ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ?: ಎಚ್‌ಡಿಕೆ

ಗೀತಾ ಹುಡೇದ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿ, ನಂತರ ಕೆಎಎಸ್‌ ಅಧಿಕಾರಿಯಾಗಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಹಸೀಲ್ದಾರ್‌, ಕೊಳ್ಳೇಗಾಲ ಉಪವಿಭಾಗಧಿಕಾರಿ, ಮಲೆ ಮಹದೇಶ್ವರ ಬೆಟ್ಟದ ಕಾರ್ಯದರ್ಶಿ, ಗೃಹ ಮಂಡಳಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು ಇದೀಗ ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮಂತ್ರಮಾಂಗಲ್ಯ ಬೋಧಿಸಲಿರುವ ಕುಂವೀ: ಕನ್ನಡದ ಖ್ಯಾತ ಸಾಹಿತಿ, ಬುದ್ಧಿಜೀವಿ ಹಾಗೂ ವೈಜಾರಿಕ ಪ್ರಜ್ಞೆ ಲೇಖಕ ಕುಂ.ವೀರಭದ್ರಪ್ಪ ಇವರ ವಿವಾಹದಲ್ಲಿ ಮಂತ್ರ ಮಾಂಗಲ್ಯವನ್ನು ಬೋಧನೆ ಮಾಡಲಿದ್ದು ಗೀತಾ ಹುಡೇದ ಹಾಗೂ ಹರೀಶ್ ಕುಮಾರ್‌ ಸರಳವಾಗಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ.

ಕೇಡಿ ಸಿದ್ದರಾಮಯ್ಯ ಸಚಿವ ಸಂಪುಟ, ಕಳ್ಳರ ಗುಂಪು: ಕೆ.ಎಸ್.ಈಶ್ವರಪ್ಪ ಆಕ್ರೋಶ

ಮದುವೆ ಎಂಬುದು ಇತ್ತೀಚಿನ ದಿನಗಳಲ್ಲಿ ತೀರಾ ಅದ್ಧೂರಿಗುತ್ತಿದ್ದು, ಇಂತಹ ಮದುವೆಯ ಮೂಲಕ ಕೆಲ ಪೋಷಕರು ಮನೆ-ಮಠ, ಅಸ್ತಿ ಕಳೆದುಕೊಳ್ಳುತ್ತಿದ್ದಾರೆ. ಮದುವೆಗಳು ಹೆಣ್ಣು ಹೆತ್ತವರಿಗೆ ಹೊರೆಯಾಗಬಾರದು. ನಾವು ಸರಳವಾಗಿ ಸಂವಿಧಾನದ ದಿನದಂದು ಕುವೆಂಪು ಅವರ ಮಂತ್ರಮಾಂಗಲ್ಯದ ಆಶಯದಂತೆ ವಿವಾಹವಾಗುತ್ತಿದ್ದೇವೆ.
-ಗೀತಾ ಹುಡೇದ, ಹೆಚ್ಚುವರಿ ಜಿಲ್ಲಾಧಿಕಾರಿ, ಚಾಮರಾಜನಗರ.

click me!