ಕೈಪಾಳಯದಲ್ಲೇ ಭಿನ್ನ ಚರ್ಚೆ ಹುಟ್ಟು ಹಾಕಿದ ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ತೀರ್ಮಾನ!

Published : Nov 24, 2023, 02:30 PM ISTUpdated : Nov 24, 2023, 05:41 PM IST
ಕೈಪಾಳಯದಲ್ಲೇ ಭಿನ್ನ ಚರ್ಚೆ ಹುಟ್ಟು ಹಾಕಿದ  ಡಿಕೆಶಿ ವಿರುದ್ಧದ ಸಿಬಿಐ ಕೇಸ್ ವಾಪಸ್ ತೀರ್ಮಾನ!

ಸಾರಾಂಶ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ವಿರುದ್ಧ ಸಿಬಿಐ ಕೇಸ್ ರಾಜ್ಯ ಸರ್ಕಾರ ಹಿಂಪಡೆದಿರುವ ಹಿನ್ನೆಲೆ ಕೈ ಪಾಳಯದಲ್ಲಿ ಇದೀಗ ಭಿನ್ನ ಚರ್ಚೆ ಹುಟ್ಟುಹಾಕಿದೆ. 

ಬೆಂಗಳೂರು (ನ.24): ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ ವಿರುದ್ಧ ಸಿಬಿಐ ಕೇಸ್ ರಾಜ್ಯ ಸರ್ಕಾರ ಹಿಂಪಡೆದಿರುವ ಹಿನ್ನೆಲೆ ಕೈ ಪಾಳಯದಲ್ಲಿ ಇದೀಗ ಭಿನ್ನ ಚರ್ಚೆ ಹುಟ್ಟುಹಾಕಿದೆ. 

ಸುಪ್ರೀಂಕೋರ್ಟ್ ಮೆಟ್ಟಿಲೇರಿ ವಾಪಸ್ ಆಗಿರುವ ಪ್ರಕರಣದಲ್ಲಿ ಸರ್ಕಾರದ ಹಸ್ತಕ್ಷೇಪ ಸರಿಯಲ್ಲ. ಈಗಾಗಲೇ ವಿಚಾರಣೆ ಕ್ಲೈಮ್ಯಾಕ್ಸ್  ಹಂತಕ್ಕೆ ಬಂದಿದೆ. ಇಂಥ ಪ್ರಕರಣದಲ್ಲಿ ಈ ತಿರ್ಮಾನ ತೆಗೆದುಕೊಳ್ಳುವ ನಿರ್ಣಯ ಸರಿಯಲ್ಲ. ಸಂಪುಟ ಸಭೆಯಲ್ಲಿ ಡಿಕೆಶಿ ಪರವಾಗಿ ತೀರ್ಮಾನಿಸುವ ಅಗತ್ಯವೂ ಇರಲಿಲ್ಲ ಅಂತಾನೂ ಚರ್ಚೆ ಮಾಡ್ತಿರುವ ಕೈ ನಾಯಕರು. 

ಕಾಂಗ್ರೆಸ್ ಸರ್ಕಾರಕ್ಕೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿ

ಜನಪ್ರತಿನಿಧಿಗಳ ಮೇಲಿನ ಪ್ರಕರಣದಲ್ಲಿ ಕೇಸ್ ವಾಪಸ್ ಪಡೆಯಬಾರದು ಅಂತ ಸುಪ್ರೀಂ ಕೋರ್ಟ್ ತೀರ್ಪಿದೆ. ಹೀಗಿದ್ದೂ ತರಾತುರಿಯಲ್ಲಿ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಬಾರದಿತ್ತು. ಡಿಕೆ ಶಿವಕುಮಾರರ ಹಿತ ಬಯಸುವವರು ಇಂತಹ ವಿಚಾರ ಬಂದಾಗ ಆಕ್ಷೇಪ ವ್ಯಕ್ತಪಡಿಸಬೇಕಿತ್ತು. ಬದಲಾಗಿ ಕಾನೂನು ಪರಿಮಿತಿಯಲ್ಲಿ  ತೊಂದರೆ ಆಗುವ ಸಾಧ್ಯತೆ ಇದ್ರೂ ಯಾಕೆ ನಿರ್ಣಯ ಮಾಡಿದ್ರು? ಇದು ಹಿತಶತ್ರುಗಳ ನಿರ್ಧಾರ ಅಂತಿರುವ ಒಂದು ಬಣ.

ಹಾಗಾದರೆ ಸಚಿವ ಸಂಪುಟದ ತಿರ್ಮಾನ ಹಿತಶತ್ರುಗಳ ತಿರ್ಮಾನವೇ? ಡಿಕೆಶಿ ಗೆ ಅನುಕೂಲ ಆಗೋದಾದ್ರೆ ಆಗಲಿ ಎಂದ ಸಚಿವರುಗಳ ಉದ್ದೇಶವೇನು? ಹತ್ತೇ ನಿಮಿಷಗಳಲ್ಲಿ ತಿರ್ಮಾನ ಕೈಗೊಂಡ ಸಂಪುಟ ಸದಸ್ಯರ ನಿಲುವಿನಲ್ಲೇನಿದೆ? ಸಿಬಿಐ ಕೇಸ್ ಹಿಂಪಡೆದ ನಿರ್ಧಾರದ ಪ್ರಶ್ನಿಸಿ ಸಿಬಿಐ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಇಕ್ಕಟ್ಟಿಗೆ ಸಿಲುಕಿಸುತ್ತದಾ? 

ಡಿಕೆ ಶಿವಕುಮಾರ ಕೇಸ್ ವಾಪಸ್ ಪಡೆದ ಪ್ರಕರಣ; ನಮ್ಮ ನಿರ್ಧಾರ ಸರಿಯಾಗಿದೆ -ರಾಮಲಿಂಗಾರೆಡ್ಡಿ ಸಮರ್ಥನೆ

ಇನ್ನೊಂದು ಕಡೆ ಡಿಕೆಶಿಗೆ ಅನುಕೂಲವೇ ಆಗಿದೆ:

ಸಿಬಿಐ ಪ್ರಕರಣದ ತನಿಖೆ ವಿಚಾರದಲ್ಲಿ ಹೈರಾಣಾಗಿದ್ದ ಡಿಕೆ ಶಿವಕುಮಾರ, ಸರ್ಕಾರ ರಚನೆಯಾದ ಬಳಿಕ ಅನುಕೂಲವೇ ಆಗಿದೆ. ಈ ಹಿಂದಿನ ಸರ್ಕಾರದಲ್ಲಿ ಸರಿಯಾದ ದಾಖಲೆಗಳು ಲಭ್ಯವಿಲ್ಲದೇ  ಭಾರೀ ತೊಂದರೆ ಅನುಭವಿಸಿದ್ದ ಡಿಕೆ ಶಿವಕುಮಾರ. ಎಜೆ ಅಭಿಪ್ರಾಯ, ಸಿಬಿಐ - ಇಡಿ ಹಾಗೂ ರಾಜ್ಯ ಸರ್ಕಾರದ ನಡುವಿನ ಪತ್ರ ವ್ಯವಹಾರಕ್ಕೆ ಸಂಬಂಧಿಸಿ ದಾಖಲೆ ಇಲ್ಲದೇ ಪರದಾಡಿದ್ದರು. ಸಿಬಿಐ ಹೇಳಿದ ಮಾನದಂಡಗಳ ಬಗ್ಗೆಯೂ ಮಾಹಿತಿ ಇಲ್ಲದೇ ತೊಂದರೆ ಅನುಭವಿಸಿದ್ದ ಡಿಕೆಶಿ. 2019 ರ ಅಕ್ಟೋಬರ್ ತಿಂಗಳಿನಿಂದ ನಿರಂತರವಾಗಿ ಎಜಿ ವರದಿಯ ದಾಖಲೆ ಕೇಳಿದ್ದ ಡಿಕೆಶಿ, ಆದರೆ ಅಧಿಕೃತವಾಗಿ ದಾಖಲೆ ನೀಡದೇ  ಸತಾಯಿಸಿದ್ದ ರಾಜ್ಯ ಸರ್ಕಾರ. ರಿಟ್ ಅರ್ಜಿ ಸಲ್ಲಿಕೆ ಹಾಗೂ ರಿಟ್ ಅಪೀಲ್ ವೇಳೆ ಸೂಕ್ತ ದಾಖಲೆಗಳಿಲ್ಲದೇ ಡಿಕೆಶಿಗೆ ಹಿನ್ನಡೆ ಅನುಭವಿಸಿದ್ದರು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ದಾಖಲೆಗಳು ಲಭ್ಯವಾಗಿವೆ. ಹಿಂದಿನ ಎಜಿ ವರದಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದುಕೊಂಡಿರುವ ಡಿಕೆಶಿ ಪರ ವಕೀಲರು. ದಾಖಲೆಗಳು ಲಭ್ಯವಾದ ಬಳಿಕ ರಿಲ್ಯಾಕ್ಸ್ ಆಗಿರುವ ಡಿಕೆ ಶಿವಕುಮಾರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್