ಕೊಡಗಿನ 9 ವರ್ಷದ ಆಜ್ಞಾ ಇಂಡೋನೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದು ವಿಶ್ವ ಚಾಂಪಿಯನ್ ಆಗಿದ್ದಾಳೆ. ತಂದೆಯಿಂದ ತರಬೇತಿ ಪಡೆದ ಆಕೆ, ಚಿಕ್ಕ ವಯಸ್ಸಿನಿಂದಲೇ ಹಲವು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ್ದಾಳೆ.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಡಿ.17) : ಸಾಧಿಸುವ ಛಲವೊಂದಿದ್ದರೆ ವಯಸ್ಸಿನ ಹಂಗಿಲ್ಲ ಎನ್ನುವ ಮಾತಿದೆ ಅಲ್ವಾ.? ಆ ಮಾತನ್ನು 9 ವರ್ಷದ ಪೋರಿ ಸಾಬೀತು ಪಡಿಸಿದ್ದಾಳೆ. ಆಟವಾಡಿಕೊಂಡು ಇರಬೇಕಾದ ವಯಸ್ಸಿನಲ್ಲೇ ಫೈಟ್ ಮಾಡುತ್ತಾ ವಿಶ್ವ ಚಾಂಪಿಯನ್ ಆಗಿದ್ದಾಳೆ ಕೊಡಗಿನ 9 ವರ್ಷದ ಪೋರಿ.
undefined
ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದ ಅಮಿತ್ ಮತ್ತು ದಿವ್ಯಾ ದಂಪತಿಯ ಪುತ್ರಿ ಆಜ್ಞಾ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತ ಸಾಧನೆ ಮಾಡಿರುವ ಬಾಲಕಿ. ಇಂಡೋನೇಷ್ಯಾದಲ್ಲಿ ನಡೆದ 10 ವರ್ಷದ ಒಳಗಿನವರ ಅಂತಾರಾಷ್ಟ್ರೀಯ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಸ್ಪರ್ಧಿಸಿ ವಿಶ್ವ ಚಾಂಪಿಯನ್ ಆಗಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾಳೆ. ಆ ಮೂಲಕ ದೇಶದ ಅತ್ಯಂತ ಕಿರಿಯ ವಯಸ್ಸಿನ ವಿಶ್ವ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾಳೆ.
ಎತ್ತರದ ಭಯ ಗೆಲ್ಲಲು ಬಂಜಿ ಜಂಪ್ ಮಾಡಿದ ಡಿ ಗುಕೇಶ್; ಚೆಸ್ ಚಾಂಪಿಯನ್‌ನಿಂದ ಹೊಸ ಸಾಹಸ!
ತಾನು ನಾಲ್ಕನೇ ವಯಸ್ಸಿನಲ್ಲಿ ಇರುವಾಗಲೇ ತಂದೆಯೊಂದಿಗೆ ಬಾಕ್ಸಿಂಗ್ ಕಲಿಯಲು ಆರಂಭಿಸಿದ್ದ ಈ ಪೋರಿ ಆಜ್ಞಾ ಎಂಎಂಎ ಸಾಧಿಸಿದ್ದೇ ರೋಚಕ. ತಂದೆ ಅಮಿತ್ ಅವರು ಎಂಬಿಎ ಪದವಿ ಮುಗಿಸಿಕೊಂಡು ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಕಂಪನಿಯಿಂದ ಮಲೇಷ್ಯಾ ದೇಶಕ್ಕೆ ಉದ್ಯೋಗಕ್ಕೆ ಹೋಗಬೇಕಾದವರು, ಬ್ಯಾಕಿಂಗ್ಸ್ ಗೆ ಮನಸೋತು ಬಾಕ್ಸಿಂಗ್ ಕಲಿಯಲು ಆರಂಭಿಸಿದ್ದರು. ನಂತರ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕಲಿತು ಹಲವು ನ್ಯಾಷನಲ್ಸ್ ಹಾಗೂ ಇಂಟರ್ನ್ಯಾಷನಲ್ ಬ್ಯಾಚ್ ಆಡಿದ್ದವರು. ಹೀಗಾಗಿ ಚಿಕ್ಕ ವಯಸ್ಸಿನಿಂದಲೇ ತನ್ನ ತಂದೆಯ ಸ್ಪರ್ಧೆ ಹಾಗೂ ಅವರ ತರಬೇತಿಯನ್ನು ಗಮನಿಸುತ್ತಿದ್ದ ಆಜ್ಞಾ ಕೂಡ ಕಿಕ್ ಬ್ಯಾಕ್ಸಿಂಗ್ ಆಡಲು ಶುರು ಮಾಡಿದ್ದಳು. ನಂತರ ಮಗಳ ಉತ್ಸಾಹ, ಛಲ ಎಲ್ಲವನ್ನು ನೋಡಿ ಮಗಳಿಗೆ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕಲಿಸಲು ಆರಂಭಿಸಿದ್ದರು. ತಂದೆಯ ಗರಡಿಯಲ್ಲೇ ಪಳಗಲು ಆರಂಭಿಸಿದ ಆಜ್ಞಾ 9 ವರ್ಷಕ್ಕೆ ಬರುವಷ್ಟರಲ್ಲೇ ಹಲವು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ವಿಜಯ ಸಾಧಿಸಿ ಇಂಡೋನೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಗೂ ಅವಕಾಶ ಗಿಟ್ಟಿಸಿಕೊಂಡಿದ್ದಳು. ಸ್ಪರ್ಧೆಯಲ್ಲಿ ತನ್ನ ಎದುರಾಳಿ ತನಗಿಂತ ಬಲಿಷ್ಠಳಾಗಿದ್ದರೂ ಆಟದ ತಂತ್ರಗಳನ್ನು ಕಿಂಚಿತ್ತೂ ವ್ಯತ್ಯಾಸ ಮಾಡಿಕೊಳ್ಳದೆ ಗೆಲುವು ಸಾಧಿಸುವಲ್ಲಿ ಆಜ್ಞಾ ಯಶಸ್ವಿಯಾಗಿದ್ದಾಳೆ.
ಡಿ ಗುಕೇಶ್ ಚೆಸ್ ಚಾಂಪಿಯನ್; ಕುಟುಂಬದ ತ್ಯಾಗಕ್ಕೆ ನಿಮ್ಮದೊಂದು ಮೆಚ್ಚುಗೆ ಇರಲಿ
ಆ ಮೂಲಕ ಅತ್ಯಂತ ಕಿರಿಯ ವಯಸ್ಸಿನಲ್ಲೇ ವಿಶ್ವ ಚಾಂಪಿಯನ್ ಪಟ್ಟ ಗಿಟ್ಟಿಸಿಕೊಂಡಿದ್ದಾಳೆ. ನಾನು ವಿಶ್ವ ಚಾಂಪಿಯನ್ ಆಗುವುದಕ್ಕೆ ತುಂಬಾ ಪರಿಶ್ರಮಪಟ್ಟಿದ್ದೇನೆ. ಆದರೆ ಇದೇ ಅಂತಿಮವಲ್ಲ, ನನ್ನ ಮುಂದೆ ದೊಡ್ಡ ದೊಡ್ಡ ಗುರಿಗಳೇ ಇವೆ. ನಾನು ಯುಎಫ್ಸಿ ನಂಬರ್ ಒನ್ ವರ್ಲ್ಡ್ ಚಾಂಪಿಯನ್ ಆಗಬೇಕೆಂಬ ಕನಸು ಇದೆ. ಅದಕ್ಕಾಗಿ ನಾನು ಈಗಿನಿಂದಲೇ ಕಠಿಣ ಪರಿಶ್ರಮ ಹಾಕಲು ಆರಂಭಿಸಿದ್ದೇನೆ. ಅದನ್ನು ಒಂದಲ್ಲಾ ಒಂದು ದಿನ ಸಾಧಿಸಿಯೇ ತೀರುತ್ತೇನೆ ಎನ್ನುತ್ತಿದ್ದಾಳೆ ಆಜ್ಞಾ. ಮಗಳ ಈ ಸಾಧನೆಗೆ ಅತೀವ ಸಂತಸಪಟ್ಟಿರುವ ಸ್ವತಃ ತಾನೇ ತರಬೇತುದಾರರಾಗಿರುವ ಆಜ್ಞಾ ತಂದೆ ಅಮಿತ್ ಅವರು ನನಗೂ ಮಾರ್ಷಲ್ ಆರ್ಟ್ಸ್ ಕಲಿಯಬೇಕೆಂದು ದೊಡ್ಡ ಆಸೆಯಿತ್ತು. ಮನೆಯವರು ಅದಕ್ಕೆ ಪ್ರೋತ್ಸಾಹ ನೀಡುತ್ತಿರಲಿಲ್ಲ. ಆದರೂ ಅದನ್ನು ಫ್ಯಾಷನ್ ಆಗಿ ತೆಗೆದುಕೊಂಡು ಕಲಿತು ಕೊನೆಗೆ ಹಲವು ರಾಷ್ಟ್ರೀಯ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದೆ. ಇದೀಗ ಮಗಳ ಸಾಧನೆ ನನ್ನಲ್ಲಿ ಇನ್ನಷ್ಟು ಹುಮ್ಮಸ್ಸು ತಂದಿದೆ. ಮುಂದೆ ಯು ಎಫ್ ಸಿ ಚಾಂಪಿಯನ್ಸ್ ಆಗುವ ಹಂತ ತಲುಪುತ್ತಾಳೆ ಎನ್ನುವ ಭರವಸೆ ಇದೆ. ಅದಕ್ಕಾಗಿ ನಾವು ಎಲ್ಲಾ ರೀತಿಯ ಸಪೋರ್ಟ್ ನೀಡುತ್ತಿದ್ದೇವೆ ಎಂದಿದ್ದಾರೆ.