
ಬೆಂಗಳೂರು(ಏ.04): ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೆ ಚಾಲಕರ ಮೇಲಿನ ಕಾರ್ಯದೊತ್ತಡವೂ ಕಾರಣ ಎಂದು ಮನಗಂಡಿರುವ ನಿಗಮದ ಆಡಳಿತ ಮಂಡಳಿ, ಅದಕ್ಕಾಗಿ ಚಾಲಕರನ್ನು ರಾತ್ರಿ ಸೇವೆ ಮತ್ತು ದೂರದ ಮಾರ್ಗಗಳಿಗೆ ಕರ್ತವ್ಯಕ್ಕೆ ಕಳುಹಿಸುವುದಕ್ಕೂ ಮುಂಚೆ ಕನಿಷ್ಠ 9 ಗಂಟೆಗಳ ಕಾಲ ವಿಶ್ರಾಂತಿ ನೀಡುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದೆ.
ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಉಂಟಾಗಿರುವ ಅಪಘಾತ ಪ್ರಕರಣ ವಿಶ್ಲೇಷಣಾ ಸಭೆಯಲ್ಲಿ ಚಾಲಕರ ಮೇಲಾಗುತ್ತಿರುವ ಕಾರ್ಯದೊತ್ತಡದ ಕುರಿತು ಚರ್ಚಿಸಲಾಗಿದೆ.
ಕೆಎಸ್ಸಾರ್ಟಿಸಿಯ ಕುಡುಕ ಡ್ರೈವರ್‌ಗಳಿಗೆ ಕಾದಿದೆ ಆಪತ್ತು!
ಈ ವೇಳೆ ಚಾಲಕರಿಗೆ ವಿಶ್ರಾಂತಿ ಇಲ್ಲದೆ ಮೇಲಿಂದ ಮೇಲೆ ಕರ್ತವ್ಯಕ್ಕೆ ನಿಯೋಜಿಸುವುದರಿಂದ ಚಾಲಕರಿಗೆ ಸುಸ್ತಾಗುತ್ತಿದ್ದು, ಅದು ಅಪಘಾತಗಳಿಗೆ ಕಾರಣವಾಗುತ್ತಿದೆ. ಹೀಗಾಗಿ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ 1961ರಲ್ಲಿ ಇರುವಂತೆ ಚಾಲಕರಿಗೆ ನಿಯಮಿತವಾಗಿ ವಿಶ್ರಾಂತಿ ನೀಡಲು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ