ಕಿಡ್ನಿ ರೋಗಿಗಳಿಗೆ 800 ಉಚಿತ ಡಯಾಲಿಸಿಸ್‌ ಯಂತ್ರ ಭಾಗ್ಯ..!

By Kannadaprabha NewsFirst Published Jan 28, 2024, 7:59 AM IST
Highlights

ಬೆಂಗಳೂರಿನ ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕಬಳಕೆಯ ಡಯಾಲೈಸರ್‌ ಅಳವಡಿಸಿರುವ ಡಯಾಲಿ ಸಿಸ್ ಯಂತ್ರಗಳನ್ನು ಸೇವೆಗೆ ಸಮರ್ಪಿಸಲಾಯಿತು. ರಾಜ್ಯದ 6 ಸಾವಿರ ರೋಗಿಗಳಿಗೆ ಉಚಿತ ಸೇವೆ ಸಿಗಲಿದೆ.

ಬೆಂಗಳೂರು(ಜ.28):  ಜಿಲ್ಲಾಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆ ಸೇರಿದಂತೆ ರಾಜ್ಯದ ಒಟ್ಟು 219 ಡಯಾಲಿಸಿಸ್ ಕೇಂದ್ರಗಳಲ್ಲಿ ಬಡ ರೋಗಿಗಳಿಗೆ ಉಚಿತ ಸೇವೆ ನೀಡಲು 800 ಡಯಾಲಿಸಿಸ್ ಯಂತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಸೇವೆಗೆ ಸಮರ್ಪಿಸಿದರು.

ನಗರದ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಕಬಳಕೆಯ ಡಯಾಲೈಸರ್‌ ಅಳವಡಿಸಿರುವ ಡಯಾಲಿ ಸಿಸ್ ಯಂತ್ರಗಳನ್ನು ಸೇವೆಗೆ ಸಮರ್ಪಿಸಲಾಯಿತು. ರಾಜ್ಯದ 6 ಸಾವಿರ ರೋಗಿಗಳಿಗೆ ಉಚಿತ ಸೇವೆ ಸಿಗಲಿದೆ.

ಡಯಾಲಿಸಿಸ್‌ ಸಿಬ್ಬಂದಿ ಮುಷ್ಕರ: ಚಿಕಿತ್ಸೆ ಸಿಗದೆ ರೋಗಿ ಸಾವು

ವಾರ್ಷಿಕ 108 ಕೋಟಿ ರು. ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರ ಶೇ.60ರಷ್ಟು ಅನುದಾನ ಹಾಗೂ ಕೇಂದ್ರ ಸರ್ಕಾರ ಶೇ.40 ರಷ್ಟು ಅನುದಾನ ನೀಡುತ್ತದೆ. ಕಿಡ್ನಿ ವೈಫಲ್ಯ ಸಮಸ್ಯೆಗೆ ಡಯಾಲಿಸಿಸ್ ಒಂದೇ ಪರಿಹಾರ. ಆದರೆ, ವಾರಕ್ಕೆ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಸುಮಾರು ₹5 ಸಾವಿರ ಖರ್ಚಾಗುತ್ತದೆ. ಅಷ್ಟು ಹಣ ಭರಿಸಲು ಬಡವರಿಗೆ ಕಷ್ಟವಾಗುತ್ತದೆ. ಹೀಗಾಗಿ, ಉಚಿತ ಸೇವೆ ನೀಡಲಾಗುತ್ತಿದೆ. ಸೋಂಕು ಉಂಟಾಗಿ ರೋಗಿಗಳಿಗೆ ತೊಂದರೆಯಾಗಬಾರದು ಎಂದು ಏಕ ಬಳಕೆಯ ಡಯಾಲೈಸರ್ ಯಂತ್ರಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಉಚಿತ ಡಯಾಲಿಸಿಸ್ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಮುಖ್ಯಮಂತ್ರಿ ತಿಳಿಸಿದರು.

click me!