ಕರ್ನಾಟಕದಲ್ಲಿ ಶೇ.80ರಷ್ಟು ಕೈಮಗ್ಗಗಳು ಕಣ್ಮರೆ: ಮೈಸೂರು ವಿವಿ ವರದಿ

Published : Jan 31, 2025, 08:08 AM IST
ಕರ್ನಾಟಕದಲ್ಲಿ ಶೇ.80ರಷ್ಟು ಕೈಮಗ್ಗಗಳು ಕಣ್ಮರೆ: ಮೈಸೂರು ವಿವಿ ವರದಿ

ಸಾರಾಂಶ

ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ (ಸಿಎಸ್ ಎಸ್‌ಐ) ನಡೆಸಿದ ದೇವರಾಜು ಅರಸು ಸಂಶೋಧನಾ ಸಂಸ್ಥೆ ಪ್ರಾಯೋಜಿತ ದೇವಾಂಗ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನದ ಕರಡು ವರದಿ ಮುಕ್ತಾಯವಾಗಿದ್ದು, ನೇಕಾರಿಕೆಯನ್ನೇ ಹೆಚ್ಚಾಗಿ ಅವಲಂಬಿಸಿರುವ ದೇವಾಂಗ ಸಮುದಾಯದ ಕುರಿತು ಹೊಸ ಬೆಳಕು ಚೆಲ್ಲಿದೆ.

ಬಿ. ಶೇಖರ್ ಗೋಪಿನಾಥಂ 

ಮೈಸೂರು(ಜ.31):  ದೇವಾಂಗ ಸಮುದಾಯದ ಶೇ.80 ಹೆಚ್ಚಿನ ಜನರು ಇಂದಿಗೂ ನೇಕಾರಿಕೆಯನ್ನೇ ಅವಲಂಬಿ ಸಿದ್ದಾರೆ. ಕೊರೋನಾ ಬಳಿಕ ಇವರ ನೇಕಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚಿದ್ದು, ಶೇ.80 ರಷ್ಟು ಕೈಮಗ್ಗಗಳು ಕಣ್ಮರೆ-ಅಳಿವಿನಂಚಿನಲ್ಲಿವೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಮೈಸೂರು ವಿಶ್ವವಿದ್ಯಾನಿಲಯದ ಸಾಮಾಜಿಕ ಒಳಗೊಳ್ಳುವಿಕೆ ಅಧ್ಯಯನ ಕೇಂದ್ರ (ಸಿಎಸ್ ಎಸ್‌ಐ) ನಡೆಸಿದ ದೇವರಾಜು ಅರಸು ಸಂಶೋಧನಾ ಸಂಸ್ಥೆ ಪ್ರಾಯೋಜಿತ ದೇವಾಂಗ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನದ ಕರಡು ವರದಿ ಮುಕ್ತಾಯವಾಗಿದ್ದು, ನೇಕಾರಿಕೆಯನ್ನೇ ಹೆಚ್ಚಾಗಿ ಅವಲಂಬಿಸಿರುವ ದೇವಾಂಗ ಸಮುದಾಯದ ಕುರಿತು ಹೊಸ ಬೆಳಕು ಚೆಲ್ಲಿದೆ.

ಭಾರತದ 7 ಪ್ರಸಿದ್ಧ ಕೈಮಗ್ಗ ಸೀರೆಗಳು, ಕರ್ನಾಟಕಕ್ಕೂ ಹೆಮ್ಮೆ ಇದು!

ಗುಣಾತ್ಮಕ ಜವಳಿಗಳಿಗೆ ಕಡ್ಡಾಯ ಬೆಂಬಲ

ಬೆಲೆಯನ್ನು ಜಾರಿಗೊಳಿಸುವುದು ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗುವಂತಾಗಲು ಮತ್ತು ಮಾರುಕಟ್ಟೆ ಶೋಷಣೆಯಿಂದ ರಕ್ಷಿಸಲು ಎಸ್ ಓಪಿ ಸ್ಥಾಪನೆ ಒಳಗೊಂಡ ಹೊಸ ಜವಳಿ ನೀತಿ- 2025 ರೂಪಿಸುವಂತೆ ವರದಿಯಲ್ಲಿ ಬಲವಾಗಿ ಶಿಫಾರಸು ಮಾಡಲಾಗಿದೆ. ಗುಜರಾತ್, ತಮಿಳುನಾಡು ಮಾದರಿ ಅಳವಡಿಸಿ ಕೊಳ್ಳಲು ಸಲಹೆ ನೀಡಲಾಗಿದೆ.

ಸಿಎಸ್‌ಎಸ್‌ಐ ಕೇಂದ್ರದ ಸಹ ಪ್ರಾಧ್ಯಾಪಕ ನಂಜುಂಡ ಅವರ ತಂಡವು ಈ ಅಧ್ಯಯನ ನಡೆಸಿದ್ದು, ಇದಕ್ಕೆ ಡಿ. ದೇವರಾಜು ಅರಸು ಸಂಶೋಧನಾ ಸಂಸ್ಥೆ ₹6.25 ಲಕ್ಷ ಅನುದಾನ ನೀಡಿತ್ತು. ಕರಡು ವರದಿಯನ್ನು ಈಗಾಗಲೇ ಸಂಸ್ಥೆಗೆ ಸಲ್ಲಿಸಲಾಗಿದೆ. ಅಂತಿಮ ವರದಿ ಮುದ್ರಣದಲ್ಲಿದೆ.

ದೇವಾಂಗ ಸಮುದಾಯದ ಶೇ.80 ಹೆಚ್ಚಿನ ಜನರು ಇಂದಿಗೂ ನೇಕಾರಿಕೆಯನ್ನೇ ಅವಲಂಭಿಸಿದ್ದಾರೆ. ಕೊರೋನಾ ಬಳಿಕ ಇವರ ನೇಕಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚಿದೆ. ಗ್ರಾಮೀಣ ದೇವಾಂಗ ನೇಕಾರರು ಗುಳೇ ಹೊರಡುತ್ತಿದ್ದಾರೆ. ಕೆಲವರು ಆತ್ಮಹತ್ಯೆಯ ಹಾದಿ ಸಹ ಹಿಡಿದಿದ್ದಾರೆ. ಪವರ್‌ಲೂಮ್ಸ್ ಮತ್ತು ಹ್ಯಾಂಡ್ ಲೂಮ್ಸ್ ನಡುವಿನ ಸಂಘರ್ಷ, ಸಹಕಾರ ಸಂಘಗಳ ವೈಫಲ್ಯಗಳು, ಯುವಕರಲ್ಲಿ ಆಸಕ್ತಿಯ ಕೊರತೆ, ಉದ್ಯೋಗ ಬದಲಾವಣೆ, ಹೊಸವಿನ್ಯಾಸಗಳ ಜಾರಿಯಲ್ಲಿ ನಿಧಾನತೆ, ಮಜೂರಿ ಸಮಸ್ಯೆ, ಜವಳಿಯಲ್ಲಿ ಆಧುನಿಕ ತಂತ್ರಜ್ಞಾನದ ಕೊರತೆ, ಮಾರು ಕಟ್ಟೆಯ ಸಮಸ್ಯೆ, ಮಧ್ಯವರ್ತಿಗಳ ಹಾವಳಿ, ಜಾಹೀರಾತು ಮತ್ತು ಪ್ರಚಾರದ ಕೊರತೆ, ಗಾರ್ಮೆಂಟ್ ಕ್ಷೇತ್ರದಿಂದ ಸ್ಪರ್ಧೆ, ಕಚ್ಚಾ ವಸ್ತುಗಳ ಬೆಲೆ ಏರಿಕೆ, ಡಿಜಿಟಲ್ ತಂತ್ರ ಜ್ಞಾನದಲ್ಲಿ ಹಿಂದುಳಿದಿರುವುದು ಇಂತಹ ಸಮಸ್ಯೆಗಳನ್ನು ನೇಕಾರರು ಅನುಭವಿಸುತ್ತಿ ದ್ದಾರೆ. ಹೆಚ್ಚಿನ ದೇವಾಂಗ ನೇಕಾರರು ಅಸಂ ಘಟಿತ ವಲಯದಲ್ಲಿ ಇದ್ದಾರೆ. ಅಧ್ಯ ಯನ ತಂಡದಲ್ಲಿ ಡಾ. ಮಹದೇವಯ್ಯ ಮತ್ತು ಡಾ. ಮಹಮ್ಮದ್ ಮುಸ್ತಾಫ ಇದ್ದರು.

ಉಡುಪಿ ಸೀರೆಗಳಿಗೆ ಅಡಕೆ ಚೊಗರಿನ ನೈಸರ್ಗಿಕ ಬಣ್ಣ ನೀಡುವ ಪ್ರಯೋಗ ಯಶಸ್ಸು

ವಿಂಕಾರ, ಜುಲಹಾ ಸಮುದಾಯಗಳು ರಾಜ್ಯದಲ್ಲಿ ಇಲ್ಲ?

ದೇವಾಂಗ ಸಮುದಾಯದ ಉಪ ಜಾತಿಗಳಾದ ವಿಂಕಾರ ಮತ್ತು ಜುಲಹಾ ಸಮುದಾಯಗಳು ಕರ್ನಾಟಕ ರಾಜ್ಯ ದಲ್ಲಿ ಇಲ್ಲದಿರುವ ಬಗ್ಗೆ ವರದಿಯಲ್ಲಿ ನಮೂದಿಸಲಾಗಿದೆ. ವಿಂಕಾರ ಎಂದರೆ ಮರಾಠಿಯಲ್ಲಿ ನೇಕಾರ ಎಂದರ್ಥ. ಇವರು ಮಹಾರಾಷ್ಟ್ರದಲ್ಲಿ ಮಾತ್ರ ಕಂಡು ಬರುತ್ತಾರೆ. ಹಿಂದು ಜುಲಾಹ ಸಮುದಾಯದವರು ರಾಜ್ಯದಲ್ಲಿ ಎಲ್ಲಿಯೂ ಕಂಡು ಬರದಿರುವುದರಿಂದ ಪಟ್ಟಿಯಿಂದ 2 ಸಮುದಾಯಗಳನ್ನು ಕೈ ಬಿಡುವುದರ ಕುರಿತ ವರದಿಯಲ್ಲಿ ಚರ್ಚಿಸಲಾಗಿದೆ.

ಪ್ರಮುಖ ಶಿಫಾರಸುಗಳು

• ನೇಕಾರ ಅಭಿವೃದ್ಧಿ ನಿಗಮಕ್ಕೆ ಕನಿಷ್ಟ 1000 ಕೋಟಿ ಅನುದಾನ ಅಗತ್ಯ
• ಡೈಯಿಂಗ್ ನಂತಹ ಕಚ್ಚಾ ಪದಾರ್ಥ ಗಳು ಸುಲಭವಾಗಿ ಸಿಗಬೇಕು
• ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾದ ಅಳವಡಿಕೆ ಆಗಬೇಕು
• ನೇಕಾರರಿಗೆ ನಿರಂತರ ತರಬೇತಿ ಮತ್ತು ಮಾರುಕಟ್ಟೆ ವ್ಯವಸ್ಥೆ
• ಸರ್ಕಾರಿ ಕಚೇರಿಗಳಿಗೆ ನೇಕಾರ ಅಭಿ ವೃದ್ಧಿ ನಿಗಮದಿಂದ ಬಟ್ಟೆ ಖರೀದಿ
• ಕಾರ್ಯುಕ್ರಮಗಳ ನಿರಂತರ ಮೇಲ್ವಿಚಾರಣೆ, ಮೌಲ್ಯಮಾಪನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್