ಕರ್ನಾಟಕದಲ್ಲಿ ಮತ್ತಷ್ಟು ಇಳಿಕೆ ಕಂಡ ಕೊರೋನಾ ಪಾಸಿಟಿವಿಟಿ ಪ್ರಮಾಣ

By Suvarna NewsFirst Published Jun 13, 2021, 9:58 PM IST
Highlights

* ರಾಜ್ಯದಲ್ಲಿ ಕೊರೋನಾ 2ನೇ ಅಲೆ ಕ್ರಮೇಣ ಕಡಿಮೆ
* ಕೊರೋನಾ ಪಾಸಿಟಿವಿಟಿ ಪ್ರಮಾಣದಲ್ಲೂ ಇಳಿಕೆ 
* 7810 ಹೊಸ ಕೇಸ್, 125 ಜನ ಸಾವು

ಬೆಂಗಳೂರು, (ಜೂನ್.13) : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಕ್ರಮೇಣವಾಗಿ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸದ್ಯ ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ಪ್ರಮಾಣ ಶೇ. 6.02ಕ್ಕೆ ಇಳಿಕೆಯಾಗಿದೆ.

 ರಾಜ್ಯದಾದ್ಯಂತ ಇಂದು (ಭಾನುವಾರ) 7810 ಹೊಸ ಕೇಸ್ ಪತ್ತೆಯಾಗಿದ್ದು, 125 ಪ್ರಾಣ ಕಳೆದುಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2765134ಕ್ಕೆ ಏರಿದ್ರೆ, ಸಾವಿನ ಸಂಖ್ಯೆ 32913.

ರಾಜ್ಯದಲ್ಲಿ ವೇಗವಾಗಿ ವ್ಯಾಕ್ಸಿನ್ ಹಂಚಿಕೆ, 6ನೇ ಸ್ಥಾನದಲ್ಲಿ ಕರ್ನಾಟಕ

ಕಳೆದ 24 ಗಂಟೆಯಲ್ಲಿ  18648 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಈವರೆಗೆ ಒಟ್ಟು 2551365 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. 

ಇನ್ನು ಭಾನುವಾರ ಬೆಂಗಳೂರಿನಲ್ಲಿ 1348 ಜನರಿಗೆ ಕೊರೋನಾ ತಗುಲಿದ್ದು, 23 ಮಂದಿ ಮೃತಪಟ್ಟಿದ್ದಾರೆ.  ಈವರೆಗೆ  ಸಿಲಿಕಾನ್ ಸಿಟಿಯಲ್ಲಿ 1196688 ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ ಒಟ್ಟು 15307 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ.

click me!