ಕರ್ನಾಟಕದಲ್ಲಿ ವಾಡಿಕೆಗಿಂತ ಈ ಬಾರಿ 1.5 ಪಟ್ಟು ಹೆಚ್ಚು ಬಿತ್ತನೆ..!

By Kannadaprabha NewsFirst Published Jul 9, 2024, 10:28 AM IST
Highlights

2024-25ನೇ ಸಾಲಿನಲ್ಲಿ ಒಟ್ಟಾರೆ 114.49 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಇಲಾಖೆಯು ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ ಮುಂಗಾರು ಹಂಗಾಮಿನಿನಲ್ಲಿ ಉದ್ದು, ಸೋಯಾ ಅವರೆ, ಅಲಸಂದೆ ನಿರೀಕ್ಷೆ ಮೀರಿ ಬಿತ್ತನೆ . ರಾಗಿ, ಹುರುಳಿ, ಸಾಸಿವೆ ಬಿತ್ತನೆ ಇಳಿಕೆ, 82.48 ಲಕ್ಷ ಹೆಕ್ಟೇರ್ ಬಿತ್ತನೆಯಾಗಬೇಕಿದೆ. ಈ ಪೈಕಿ ಜು.5 ರವರೆಗೂ 87 ಸಾವಿರ ಹೆಕ್ಟೇರ್‌ನಲ್ಲಿ ಉದ್ದು, 57 ಸಾವಿರ ಹಕ್ಟೇರ್‌ನಲ್ಲಿ ಅಲಸಂದೆ,4.19 ಲಕ್ಷ ಹೆಕ್ಟೇರ್‌ನಲ್ಲಿ ಸೋಯಾ ಅವರೆ ಬಿತ್ತನೆಯಾಗಿದ್ದು ನಿರೀಕ್ಷೆಗಿಂ ತಲೂ ಅಧಿಕ ಸಾಧನೆಯಾಗಿದೆ. 

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು(ಜು.09): ರಾಜ್ಯದ ಹಲವೆಡೆ, ಋತ್ಯ ಮುಂಗಾರು ಚುರುಕಾಗಿದ್ದು ಬಿತ್ತನೆ ಬಿರುಸುಗೊಂಡಿದೆ. ಮುಂಗಾರು ಹಂಗಾಮಿನಲ್ಲಿ ಕೃಷಿ ಇಲಾಖೆಯು 12.48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದು, ಈಗಾಗಲೇ 50.91 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.62 ರಷ್ಟು ಸಾಧನೆಯಾಗಿದೆ. 

Latest Videos

ಜೂ.1ರಿಂದ ಜು.5ರವರೆಗೂ ಸಾಮಾನ್ಯವಾಗಿ ಮುಂಗಾರಿನಲ್ಲಿ 241 ಮಿ.ಮೀ. ಮಳೆಯಾಗುತ್ತಿತ್ತು. ಆದರೆ ಈ ಬಾರಿ 253 ಮಿ.ಮೀ. ಮಳೆಯಾಗಿರುವುದು ಬಿತ್ತನೆ ಚುರುಕಾಗಲು ಕಾರಣವಾಗಿದೆ. ಮತ್ತೊಂದೆಡೆ, ಕಳೆದ ಐದು ವರ್ಷದ ವಾಡಿಕೆ ಬಿತ್ತನೆಗೆ ಹೋಲಿಸಿದರೆ ಆಶಾಭಾವನೆ ಮೂಡಿಸಿದೆ.

ರಾಜ್ಯಾದ್ಯಂತ ತಗ್ಗಿದ ವರುಣಾರ್ಭಟ, ಬಿತ್ತನೆ ಕಾರ್ಯಕ್ಕಿದು ಸಕಾಲ; ಕರಾವಳಿಯಲ್ಲಿ ಹಗುರ ಮಳೆ ಮುನ್ಸೂಚನೆ!

2024-25ನೇ ಸಾಲಿನಲ್ಲಿ ಒಟ್ಟಾರೆ 114.49 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಇಲಾಖೆಯು ಬಿತ್ತನೆ ಗುರಿ ಹೊಂದಿದ್ದು, ಇದರಲ್ಲಿ ಮುಂಗಾರು ಹಂಗಾಮಿನಿನಲ್ಲಿ ಉದ್ದು, ಸೋಯಾ ಅವರೆ, ಅಲಸಂದೆ ನಿರೀಕ್ಷೆ ಮೀರಿ ಬಿತ್ತನೆ . ರಾಗಿ, ಹುರುಳಿ, ಸಾಸಿವೆ ಬಿತ್ತನೆ ಇಳಿಕೆ, 82.48 ಲಕ್ಷ ಹೆಕ್ಟೇರ್ ಬಿತ್ತನೆಯಾಗಬೇಕಿದೆ. ಈ ಪೈಕಿ ಜು.5 ರವರೆಗೂ 87 ಸಾವಿರ ಹೆಕ್ಟೇರ್‌ನಲ್ಲಿ ಉದ್ದು, 57 ಸಾವಿರ ಹಕ್ಟೇರ್‌ನಲ್ಲಿ ಅಲಸಂದೆ,4.19 ಲಕ್ಷ ಹೆಕ್ಟೇರ್‌ನಲ್ಲಿ ಸೋಯಾ ಅವರೆ ಬಿತ್ತನೆಯಾಗಿದ್ದು ನಿರೀಕ್ಷೆಗಿಂ ತಲೂ ಅಧಿಕ ಸಾಧನೆಯಾಗಿದೆ. 

ಮೆಕ್ಕೆಜೋಳ (12.21 ಲಕ್ಷ ಹೆಕ್ಟೇ‌ರ್), ಕಬ್ಬು 5.42 ಲಕ್ಷ ಹೆಕ್ಟೇರ್),ತೊಗರಿ (12.50 ಲಕ್ಷ ಹೆಕ್ಟೇರ್) ಬಿತ್ತನೆ ಪ್ರಮಾಣವೂ ಪರವಾಗಿಲ್ಲ. ಎರಡಂಕಿ ದಾಟದ ರಾಗಿ, ಹುರುಳಿ: ರಾಗಿ, ಹುರುಳಿ, ಸಾಸಿವೆಬಿತ್ತನೆ ಪ್ರಮಾಣರಾಜ್ಯದಲ್ಲಿ ಎರಡಂಕಿದಾಟಿಲ್ಲ. ಭತ್ತ (ಶೇ.10), ಆವರೆ (ಶೇ.12), ಸೂರ್ಯಕಾಂತಿ (ಶೇ.11). ಶೇಂಗಾ (ಶೇ.36) ಬಿತ್ತನೆಯೂ ಕಡಿಮೆ ಯಾಗಿದೆ. ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ, ಶೇ.99 (2.69 ಲಕ್ಷ ಹೆಕ್ಟೇ‌ರ್) ರಷ್ಟು ಬಿತ್ತನೆ ಯಾಗಿದೆ. ಬೀದರ್‌ನಲ್ಲಿ ಶೇ. 98 (4.08 ಲಕ್ಷ ಹೆಕ್ಟೇರ್) ಗದಗದಲ್ಲಿ ಶೇ.95 (2.88 ಲಕ್ಷ ಹೆಕ್ಟೇರ್), ಬಾಗಲಕೋಟೆಯಲ್ಲಿ ಶೇ.94 (2.67 ಲಕ್ಷ ಹೆಕ್ಟೇ‌ರ್), ಬೆಳಗಾವಿ ಜಿಲ್ಲೆಯಲ್ಲಿ ಶೇ.87 ರಷ್ಟು ಅಂದರೆ 6.45 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಆದರೆ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಮಗಳೂರು, ಕೋಲಾರ, ಮಂಡ್ಯ, ತುಮಕೂರುಮತ್ತಿತರಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಬಿತ್ತನೆ ಕುಂಠಿತವಾಗಿದೆ.

ಭಾರೀ ಮಳೆಯಾದರೂ ಕರ್ನಾಟಕದಲ್ಲಿ ಬಿತ್ತನೆ 20% ಕುಂಠಿತ..!

ಮಳೆಯಿಲ್ಲದೇಸೊರಗುತ್ತಿವೆ ಪೈರು: 

ಪ್ರಸಕ್ತ ಕರಾವಳಿಯಲ್ಲಿ ಉತ್ತಮವಾಗಿ ಮಳೆ ಆಗುತ್ತಿರುವುದರಿಂದ ಆ ಭಾಗದಲ್ಲಿ ಬಿತ್ತನೆ ಬಿರುಸಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಮತ್ತಿತರ ಜಿಲ್ಲೆಗಳಲ್ಲಿ ಬಿತ್ತನೆಯಾಗಿರುವ ರಾಗಿ, ಶೇಂಗಾ, ತೊಗರಿ ಮತ್ತಿತರ ಪೈರುಗಳು ಮಳೆಯಿಲ್ಲದೇ ಸೊರಗುತ್ತಿವೆ. ಈ ಭಾಗದಲ್ಲಿ ಜೂನ್ ಮೊದಲ ಮತ್ತು ಎರಡನೇ ವಾರದಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿದಿತ್ತು. ರೈತರು ಭೂಮಿ ಹಸನು ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯನ್ನೂ ಮಾಡಿದ್ದರು. ಪೈರು ಚೆನ್ನಾಗಿ ಮೊಳಕೆಯೂ ಬಂದಿದ್ದವು. ಆದರೆ ಕಳೆದ 20 ದಿನಗಳಿಂದ ಮಳೆಯ ಅಭಾವದಿಂದ ಪೈರುಗಳು ಸೊರಗುತ್ತಿವೆ. ಅಗತ್ಯ ಬಿತ್ತನೆ ಬೀಜ ದಾಸ್ತಾನು ಮುಂಗಾರು మిగో 5.52 ಲಕ್ಷ ಕ್ವಿಂಟಲ್‌ ಪ್ರಮಾಣಿತ ಬಿತ್ತನೆ ಬೀಜಗಳಬೇಡಿಕೆ ಇದ್ದುಈಗಾಗಲೇ2.99 ಲಕ್ಷಕ್ವಿಂಟಲ್ ವಿತರಣೆ ಮಾಡಲಾ ಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ 80 ಸಾವಿರ ಕ್ವಿಂಟಲ್‌ ದಾಸ್ತಾನಿದೆ. ಇನ್ನುಳಿದ ಲಭ್ಯವಿದ್ದು ಬಿತ್ತನೆ ಬೀಜಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಕೃಷಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.

ಇದೀಗ ಮಳೆ ಬರುತ್ತಿದೆ. ರಾಜ್ಯದಲ್ಲಿ ಬಿತ್ತನೆಗೆ ಇನ್ನೂ ಕಾಲಾವಕಾಶವಿದ್ದು ನಿರೀಕ್ಷಿತ ಗುರಿಗಿಂತ ಅಧಿಕ ಪ್ರಮಾಣದ ಬಿತ್ತನೆಯಾಗಲಿದೆ. ಈ ಬಾರಿ ಉತ್ಪಾದನೆಯೂ ಅಧಿಕವಾಗುವ ಆಶಾಭಾವನೆ ಇದೆ ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದ್ದಾರೆ. 

click me!