ಮಕ್ಕಳ ಕೈಯಲ್ಲಿ ಕಮಲದ ಹೂ ಕಂಡು ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ; ಶಿಕ್ಷಕಿ ವಿರುದ್ಧ ಏಕವಚನದಲ್ಲೇ ಮಾತು!

By Ravi Janekal  |  First Published Jan 26, 2024, 4:02 PM IST

ಹಾಸನದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ವೇಳೆ ಮಕ್ಕಳ ಕೈಯಲ್ಲಿ ಶಿಕ್ಷಕಿ ಕಮಲದ ಹೂ ನೀಡಿದ್ದಕ್ಕೆ ಕಾಂಗ್ರೆಸ್ ಪಕ್ಷದ ಅರಸೀಕೆರೆ ‌ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.


ಹಾಸನ (ಜ.26) : ಹಾಸನದಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ವೇಳೆ ಮಕ್ಕಳ ಕೈಯಲ್ಲಿ ಶಿಕ್ಷಕಿ ಕಮಲದ ಹೂ ನೀಡಿದ್ದಕ್ಕೆ ಕಾಂಗ್ರೆಸ್ ಪಕ್ಷದ ಅರಸೀಕೆರೆ ‌ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಗಣರಾಜ್ಯೋತ್ಸವ ನಿಮಿತ್ತ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ಮಕ್ಕಳಿಗೆ ದೇಶದ ಎಲ್ಲ ರಾಷ್ಟ್ರೀಯ ಚಿಹ್ನೆಗಳನ್ನು ಹಾಕಿ ಮಕ್ಕಳಿಂದ ನೃತ್ಯ ಮಾಡಿಸುತ್ತಿದ್ದ ಶಿಕ್ಷಕರು. ಚಿಹ್ನೆಗಳ ಸಮುಚ್ಚಯದಲ್ಲಿ ಕಮಲದ ಹೂ ಇರುವುದು ಗಮನಿಸಿದ ಶಾಸಕ ಶಿವಲಿಂಗೇಗೌಡ, ಕಮಲ ರಾಷ್ಟ್ರೀಯ  ಹೂ ಅನ್ನುವುದನ್ನೂ ಮರೆತು ಅದು ಬಿಜೆಪಿ ಪಕ್ಷದ ಚಿಹ್ನೆ ಎಂದು ತಪ್ಪಾಗಿ ಗ್ರಹಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಹೋಗೋದಾದ್ರೆ ಮೊದಲೇ ಕಾಂಗ್ರೆಸ್‌ಗೆ ಬರಬಾರದಿತ್ತು:ಜಗದೀಶ್ ಶೆಟ್ಟರ್ ವಿರುದ್ಧ ರಾಯರೆಡ್ಡಿ ಕಿಡಿ!

ಶಾಸಕ-ಶಿಕ್ಷಕಿ ಮಧ್ಯೆ ಮಾತಿನ ಚಕಮಕಿ:

 'ಯಾಕೆ ಕಮಲದ ಹೂ ಹಾಕಿದ್ದೀರಿ? ತೆಗೆಯಿರಿ ಎಂದು ಶಿಕ್ಷಕಿ ವಿರುದ್ಧ ರೊಚ್ಚಿಗೆದ್ದ ಶಾಸಕ ಶಿವಲಿಂಗೇಗೌಡ. ಅದು ರಾಷ್ಟ್ರೀಯ ಹೂ ಸರ್ ಅದಕ್ಕೆ ಹಾಕಿದ್ದೇವೆ. ಅದರ ಜೊತೆಗೆ ಎಲ್ಲ ರಾಷ್ಟ್ರೀಯ ಚಿಹ್ನೆಗಳಿವೆ ಎಂದಿರುವ ಶಿಕ್ಷಕಿ. ಇದರಿಂದ ಮತ್ತಷ್ಟು ಕೆರಳಿದ ಶಾಸಕ ಶಿವಲಿಂಗೇಗೌಡ, 'ಏಯ್ ನಿಂಗೆ ಏನ್ ಗೊತ್ತು? ಇನ್ನೇನ್ ಉದ್ದಾರ ಮಾಡ್ತೀರ ಮಕ್ಕಳನ್ನ' ಎಂದು ಏಕವಚನದಲ್ಲಿ ನಿಂದಿಸಿದ್ದಾರೆ. ಇದರಿಂದ ಶಿಕ್ಷಕಿ ಸಹ 'ಈ ರೀತಿ ಮಾತಾಡೋದು ಸರಿಹೋಗಲ್ಲ ಸರ್' ಎಂದು ಶಿಕ್ಷಕಿ ಸಹ ಶಾಸಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ನನಗೆ ಎದುರು ಮಾತಾಡ್ತಿಯಾ ನಿನಗೆ ನೋಟಿಸ್ ನೀಡಬೇಕಾಗುತ್ತೆ ಎಂದು ಶಿಕ್ಷಕಿಗೆ ವಾರ್ನಿಂಗ್ ನೀಡಿದ ಶಾಸಕ. ಶಾಸಕ ಶಿಕ್ಷಕಿ ನಡುವೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಸ್ಥಳೀಯ ಮುಖಂಡರ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದೆಲ್ಲ ಕಣ್ಮುಂದೆ ನಡೆದರೂ ಸುಮ್ಮನೆ ಕುಳಿತಿದ್ದ ತಹಸೀಲ್ದಾರ್ ಸಂತೋಷ್ ಕುಮಾರ.

ಜಗದೀಶ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆ ಹಿಂದೆ ಐಟಿ, ಇಡಿ ಕೈವಾಡ! ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

click me!