ಮೈಸೂರಿನ ಕೇಶವ ಕೌಂಡಿನ್ಯ ಬಾಲಕ ಚಿಕ್ಕ ವಯಸ್ಸಿನಿಂದಲೂ ಓದು, ಅಭ್ಯಾಸದ ಜತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಬಾಹ್ಯಾಕಾಶದ ಹತ್ತಾರು ಮಾಹಿತಿಗಳನ್ನು ಹೇಳುತ್ತಾನೆ. ಬಾಲಕನ ಜ್ಞಾನ ಗುರುತಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಆಗಸ್ಟ್ 19 ರಂದು ‘ಪ್ರಶಂಸನೀಯ ಪತ್ರ’ ನೀಡಿ ಪ್ರೋತ್ಸಾಹಿಸಿದೆ.
ಬೆಂಗಳೂರು [ಜ.05]: ಬಾಹ್ಯಾಕಾಶದ ಕುರಿತು ವಿಶೇಷ ಆಸಕ್ತಿ, ಜ್ಞಾನ ಹೊಂದಿರುವ ಆರು ವರ್ಷದ ಬಾಲಕನ ಹೆಸರು ಇದೀಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ದಾಖಲಾಗಿದೆ.
ಮೈಸೂರಿನ ಕೇಶವ ಕೌಂಡಿನ್ಯ ಬಾಲಕ ಚಿಕ್ಕ ವಯಸ್ಸಿನಿಂದಲೂ ಓದು, ಅಭ್ಯಾಸದ ಜತೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಬಾಹ್ಯಾಕಾಶದ ಹತ್ತಾರು ಮಾಹಿತಿಗಳನ್ನು ಹೇಳುತ್ತಾನೆ. ಬಾಲಕನ ಜ್ಞಾನ ಗುರುತಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ಆಗಸ್ಟ್ 19 ರಂದು ‘ಪ್ರಶಂಸನೀಯ ಪತ್ರ’ ನೀಡಿ ಪ್ರೋತ್ಸಾಹಿಸಿದೆ.
ಬಾಹ್ಯಾಕಾಶದ ಜತೆಗೆ ವಿಶ್ವದ ಖಂಡಗಳು, ಖಂಡದ ದೇಶಗಳು, ದೇಶಗಳ ರಾಜಧಾನಿ, ಗ್ರಹಗಳ ಹೆಸರು, ಸಂಸ್ಕೃತ ಶ್ಲೋಕಗಳು, ಭಾರತದ ರಾಜ್ಯ ಮತ್ತು ಅವುಗಳ ರಾಜಧಾನಿ, ರಷ್ಯನ್ ವರ್ಣಮಾಲೆಗಳ ಬಗ್ಗೆ ಹೇಳುತ್ತಾನೆ. ಆತನ ಆಸಕ್ತಿಗೆ ತಕ್ಕಂತೆ ಪೋಷಕರು ಉತ್ತಮ ವಾತಾವರಣ ಸೃಷ್ಟಿಸಿದ್ದೇವೆ. ಬೆಂಬಲಿಸುತ್ತಿದ್ದೇವೆ ಎಂದು ಬಾಲಕನ ತಾಯಿ ಯಮುನಾ ಕಿರಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಂತರಿಕ್ಷ ಕ್ಷೇತ್ರದ ಪುಸ್ತಕ ಓದುವ, ಯುಟ್ಯೂಬ್ನಲಿ ಈ ಬಗೆಗಿನ ವಿಡಿಯೋ ನೋಡಲು ಇಷ್ಟಪಡುತ್ತಾನೆ. ಭವಿಷ್ಯದಲ್ಲಿ ಕೇಶವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದಲ್ಲಿ (ಇಸ್ರೋ) ಕೆಲಸ ಮಾಡುವ ಗುರಿ ಹೊಂದಿದ್ದಾನೆ ಎಂದರು.