* ಕರ್ನಾಟಕದಲ್ಲಿ ಕೊರೋನಾ ಹೆಚ್ಚಳ
* ಪಾಸಿಟಿವ್ ಕೇಸ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ
* ಜನರಲ್ಲಿ ಶುರುವಾಯ್ತು ಆತಂಕ
ಬೆಂಗಳೂರು, (ಜೂನ್.11): ಕರ್ನಾಟಕದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರಿಂದ ಆತಂಕ ಶುರುವಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದದು, ಕಳೆದ 24 ಗಂಟೆಯಲ್ಲಿ 562 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3,955,871ಕ್ಕೆ ಏರಿಕೆಯಾಗಿದೆ. ಇನ್ನೂ ರಾಜ್ಯದಲ್ಲಿ ಮಹಾಮಾರಿ ಕೊರೋನಾದಿಂದ ಇಂದು(ಶನಿವಾರ) ಯಾವುದೇ ಸಾವು ವರದಿಯಾಗಿಲ್ಲ. ಹೀಗಾಗಿ ಸಾವಿನ ಸಂಖ್ಯೆ 40,066 ಇದೆ. ಇನ್ನು 352 ಸೇರಿದಂತೆ ಇದುವರೆಗೆ 3912376 ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಈಗ 3387 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದೆ.
undefined
ಹೆಚ್ಚುತ್ತಿರುವ ಕೊರೋನಾ: ಮತ್ತೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್, ಲಸಿಕೆ ಪತ್ರ ಕಡ್ಡಾಯ..!
ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾಸನ, ತುಮಕೂರು, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲಾ ಒಬ್ಬರಿಗೆ, ಚಿತ್ರದುರ್ಗ 02, ದಕ್ಷಿಣ ಕನ್ನಡ 03 ಮತ್ತು ಮೈಸೂರಿನಲ್ಲಿ ನಾಲ್ವರಿಗೆ ಇಂದು ಕೊರೋನಾ ಪಾಸಿಟಿವ್ ( Corona Positive ) ದೃಢಪಟ್ಟಿದೆ.
ರಾಜ್ಯದ ಇಂದಿನ ಪಾಸಿಟಿವಿಟಿ ರೇಟ್ ಶೇ. 2.07 ಏರಿಕೆ ಕಂಡಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 39,55,871 ಮಂದಿಗೆ ಕೊರೊನಾ ಬಂದಿದೆ. ಒಟ್ಟು 39,12,376 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 48,604 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 27,123 ಸ್ಯಾಂಪಲ್ (ಆರ್‌ಟಿಪಿಸಿಆರ್ 20,659 + 6,464 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
Covid numbers in Karnataka:
▪️New cases in State: 562
▪️New cases in B'lore: 545
▪️Positivity rate: 2.07%
▪️Discharges: 352 (B'lore-343)
▪️Deaths: 0
▪️Active cases in State: 3,387
▪️Active cases in B'lore: 3,263
▪️Tests: 27,123
ಮಾಸ್ಕ್ ಕಡ್ಡಾಯ
ದೇಶದಲ್ಲಿ ಮಾತ್ರವಲ್ಲದೇ ಕರ್ನಾಟಕದಲ್ಲೂ ಸಹ ಕೊರೋನಾ ಸೊಂಕಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಬಸ್ ಹಾಗೂ ರೈಲು ಪ್ರಯಾಣಿಸುವ ಸಂದರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಮಾರ್ಗಸೂಚಿಯಲ್ಲಿ ತಿಳಿಸಿದೆ.
ILI & SARI ಲಕ್ಷಣಗಳನ್ನು ಹೊಂದಿದವರು, ಹೈರಿಸ್ಟ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಆದ್ಯತೆಯ ಮೇಲೆ ಪರೀಕ್ಷೆಗೆ ಒಳಪಡುವುದು ಹಾಗೂ ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು.ಕಡ್ಡಾಯ ಎಂದು ಮಾರ್ಗಸೂಚಿಯಲ್ಲಿದೆ.
ಮಾರ್ಗಸೂಚಿ ಇಂತಿದೆ.
* ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯ ಧರಿಸುವುದನ್ನು ಉಲ್ಲೇಖ(3) ರ ಅನ್ವಯ ಕಡ್ಡಾಯಗೊಳಿಸಿದ್ದು, ಈ ಕ್ರಮಗಳನ್ನು ಜಾರಿಗೊಳಿಸಲು ಮಾರ್ಷಲ್ ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಾಯವನ್ನು ಪಡೆಯುವುದು.
* ಮಚ್ಚಿದ ಸಂರಚನೆಯನ್ನು (Closed Areas) ಹೊಂದಿದ ಸ್ಥಳಗಳಾದ ಶಾಪಿಂಗ್ ಮಾಲ್‌ಗಳು, ರೆಸ್ಟೊರೆಂಟ್‌ಗಳು, ಪಬ್‌ಗಳು, ಕೆಫೆಟೀರಿಯಾ, ಹೋಟೆಲ್‌ಗಳು, ಶೈಕ್ಷಣಿಕ ಸಂಸ್ಥೆಗಳು, ಹಾಸ್ಟೆಲ್‌ಗಳು, ಕಚೇರಿಗಳು, ಕಾರ್ಖಾನೆ ಸೇರಿದಂತೆ ಇತರೆ ಪ್ರದೇಶಗಳಲ್ಲಿ ಸಿಬ್ಬಂದಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗುವುದು ಹಾಗೂ ಮಾಸ್ಕ್ ಧರಿಸಿ ಬರುವವರಿಗೆ ಮಾತ್ರವೇ ಪ್ರವೇಶ ನೀಡುವುದನ್ನು ಖಚಿತಪಡಿಸಿಕೊಳ್ಳಲು ಆಯಾ ಸಂಸ್ಥೆಯ ಮಾಲೀಕರ/ ಆಡಳಿತಗಳ ಜವಾಬ್ದಾರಿಯಾಗಿರುತ್ತದೆ.
* ಸ್ವಂತ ವಾಹನಗಳು ಹಾಗೂ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ (ಬಸ್ ಹಾಗೂ ರೈಲು ಪ್ರಯಾಣಿಸುವ ಸಂದರರ್ಭದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.
* ILI & SARI ಲಕ್ಷಣಗಳನ್ನು ಹೊಂದಿದವರು, ಹೈರಿಸ್ಟ್ ಗುಂಪಿನವರು ಹಾಗೂ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರನ್ನು ಆದ್ಯತೆಯ ಮೇಲೆ ಪರೀಕ್ಷೆಗೆ ಒಳಪಡುವುದು ಹಾಗೂ ಫಲಿತಾಂಶ ಲಭ್ಯವಾಗುವವರೆಗೂ ಮನೆಯಲ್ಲಿಯೇ ಪ್ರತ್ಯೇಕವಾಗಿರುವುದು.
* ಅರ್ಜಿ ಜನರೆಲ್ಲರೂ Precautionary Dose ಸೇರಿದಂತೆ ಕೋವಿಡ್ 19 ಲಸಿಕೆನ್ನು ಪಡೆಯುವುದು ಕೋವಿಡ್19 ಮುಂಜಾಗ್ರತಾ ಕ್ರಮವಾಗಿ ಮೇಲೆ ತಿಳಿಸಿದ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದೆ.