ಬ್ರಿಟನ್‌ ರಿಟರ್ನ್ಡ್ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 53 ಮಂದಿಗೆ ಪರೀಕ್ಷೆ

By Kannadaprabha News  |  First Published Jan 3, 2021, 7:56 AM IST

ಬ್ರಿಟನ್‌ ರಿಟನ್ಸ್‌ರ್‍ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದ 53 ಮಂದಿಗೆ ಪರೀಕ್ಷೆ | ಅಷ್ಟೂಜನರಿಗೆ ಸಾಂಸ್ಥಿಕ ಕ್ವಾರಂಟೈನ್‌ | ಸೋಂಕಿತ ಮನೆ ಸುತ್ತ ಸ್ಯಾನಿಟೈಸ್‌


ಬೆಂಗಳೂರು(ಜ.03): ನಗರದಲ್ಲಿ ಶುಕ್ರವಾರ ಪತ್ತೆಯಾದ ಆರಂಭದ ಮೂವರು ರೂಪಾಂತರಿ ಕೋವಿಡ್‌ ಸೋಂಕಿತರು ಒಟ್ಟು 53 ಮಂದಿಯೊಂದಿಗೆ ಪ್ರಾಥಮಿಕ ಹಾಗೂ ಪರೋಕ್ಷ ಸಂಪರ್ಕ ಹೊಂದಿದ್ದು, ಅಷ್ಟೂಜನರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬ್ರಿಟನ್‌ನಿಂದ ಬೊಮ್ಮನಹಳ್ಳಿಗೆ ಆಗಮಿಸಿದ್ದ ಒಬ್ಬ ಸೋಂಕಿತ ವ್ಯಕ್ತಿಯೊಂದಿಗೆ ಕುಟುಂಬದ ಇಬ್ಬರು ಸದಸ್ಯರು ಪ್ರಾಥಮಿಕ ಸಂಪರ್ಕ ಹೊಂದಿದ್ದು, 35 ಮಂದಿಯೊಂದಿಗೆ ಪರೋಕ್ಷ ಸಂಪರ್ಕ ಹೊಂದಿದ್ದಾರೆ. ಬ್ರಿಟನ್‌ನಿಂದ ರಾಜಾಜಿ ನಗರಕ್ಕೆ ಆಗಮಿಸಿ ಈಗಾಗಲೇ ರೂಪಾಂತರ ಸೋಂಕು ಕಾಣಿಸಿಕೊಂಡ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ತಾಯಿ ಹಾಗೂ ಅಕೆಯ ಮಗಳಿಗೂ ಶುಕ್ರವಾರ ರೂಪಾಂತರ ಸೋಂಕು ಕಾಣಿಸಿಕೊಂಡಿದೆ. ಈ ತಾಯಿ- ಮಗಳು ಆರು ಪ್ರಾಥಮಿಕ ಸಂಪರ್ಕ ಹೊಂದಿದ್ದು, 10 ಮಂದಿ ಪರೋಕ್ಷ ಸಂಪರ್ಕ ಹೊಂದಿದ್ದಾರೆ ಎಂದು ಗುರುತಿಸಲಾಗಿದೆ.

Tap to resize

Latest Videos

undefined

ಕಳೆದ ಸಾಲಿನ ಪಾಸ್‌ ತೋರಿಸಿ ಬಸ್‌ಗಳಲ್ಲಿ ಪ್ರಯಾಣಿಸಿ

ಸಂಪರ್ಕಿತರನ್ನು ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿದೆ. ರೂಪಾಂತರ ಸೋಂಕು ಕಾಣಿಸಿಕೊಂಡ ಸೋಂಕಿತರ ಮನೆ ಸುತ್ತಮುತ್ತ ಪ್ರದೇಶದಲ್ಲಿ ಶನಿವಾರ ಬಿಬಿಎಂಪಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

7 ದಿನ ಅಂಗಡಿ ಬಂದ್‌ ಮಾಡಿದ ಪೊಲೀಸರು

ಬೆಂಗಳೂರು: ರಾಜಾಜಿನಗರದ ಮೊದಲ ಬ್ಲಾಕ್‌ನಲ್ಲಿ ತಾಯಿ ಹಾಗೂ ಮಗಳಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸೋಂಕಿತರ ಮನೆಯ ಸುತ್ತಮುತ್ತಲಿನ ಅಂಗಡಿ ಮಳಿಗೆಗಳನ್ನು ಶನಿವಾರ ಬಂದ್‌ ಮಾಡಿದ್ದಾರೆ. ಅಲ್ಲದೇ ಮುಂದಿನ ಏಳು ದಿನ ಅಂಗಡಿ ತೆರೆಯದಂತೆ ಸೂಚನೆ ನೀಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳೀಯರಿಂದ ಆಕ್ರೋಶ:

ರಾಜಾಜಿನಗರದಲ್ಲಿ ತಾಯಿ ಮಗಳಿಗೆ ರೂಪಾಂತರ ಕೋವಿಡ್‌ ವೈರಾಣು ಕಾಣಿಸಿಕೊಂಡರೂ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಸ್ಥಳೀಯರಿಗೆ ಮಾಹಿತಿ ನೀಡಿಲ್ಲ. ಜತೆಗೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆಯೂ ಜಾಗೃತಿ ಮೂಡಿಲ್ಲ ಎಂದು ರಾಜಾಜಿನಗರ 1ನೇ ಬ್ಲಾಕ್‌ನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

click me!