ಕರ್ನಾಟಕದಲ್ಲಿ ಹತೋಟಿಗೆ ಬಂದ ಕೊರೋನಾ: ಇಲ್ಲಿದೆ ನೋಡಿ ಜ.31ರ ಅಂಕಿ-ಸಂಖ್ಯೆ..!

Published : Jan 31, 2021, 08:49 PM IST
ಕರ್ನಾಟಕದಲ್ಲಿ ಹತೋಟಿಗೆ ಬಂದ ಕೊರೋನಾ: ಇಲ್ಲಿದೆ ನೋಡಿ ಜ.31ರ ಅಂಕಿ-ಸಂಖ್ಯೆ..!

ಸಾರಾಂಶ

ಕೊರೋನಾ ವೈರಸ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದ ಕರ್ನಾಟಕದಲ್ಲಿ ಇದೀಗ ಸೋಂಕು ಪರಿಸ್ಥಿತಿ ಹತೋಟಿಗೆ ಬಂದಿದ್ದು, ಜನವರಿ 31ರ ಅಂಕಿ-ಸಂಖ್ಯೆ ಇಲ್ಲಿದೆ.

ಬೆಂಗಳೂರು, (ಜ.31): ರಾಜ್ಯದಲ್ಲಿ ಇಂದು (ಭಾನುವಾರ) 522 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ.

ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 9,39,387ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 12,217ಕ್ಕೆ ಏರಿದೆ. 

 ಲಸಿಕೆ ಪಡೆದ 5 ವೈದ್ಯರಿಗೆ ಕೊರೋನಾ ಸೋಂಕು: ವೈದ್ಯಾ​ಧಿ​ಕಾರಿ ಪ್ರತಿಕ್ರಿಯೆ

ಇನ್ನು ಕಳೆದ 24 ಗಂಟೆಗಳಲ್ಲಿ 465 ಸೋಂಕಿತರು ಗುಣಮುಖರಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ 9,21,211ಕ್ಕೆ ಏರಿಕೆಯಾದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 6029ಕ್ಕೆ ತಲುಪಿದೆ.

ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 242 ಸೋಂಕು ಪ್ರಕರಣಗಳು ವರದಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಈ ಮೂಲಕ ನಗರದಲ್ಲಿ 3,90,667ಕ್ಕೆ ಏರಿಕೆಯಾದರೆ, 4391 ಸಕ್ರಿಯ ಪ್ರಕರಣಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: ಸರ್ಕಾರಿ ಆಂಗ್ಲ ಶಾಲೇಲಿ ಕಲಿತ 30,000 ಮಕ್ಕಳು ಅತಂತ್ರ! ಬಿಇಒ, ಡಿಡಿಪಿಐ ಯಾರಿಂದಲೂ ಸ್ಪಷ್ಟ ಉತ್ತರವಿಲ್ಲ! ಯಾರನ್ನು ಕೇಳುವುದು?
₹2000 ಹಣ, ಉಚಿತ ವಿದ್ಯುತ್‌ ಪಡೆಯುತ್ತಿರುವವರೇ ಗಮನಿಸಿ ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳಾ? ಹಾಗಿದ್ದರೆ ಹೊಸದಾಗಿ ಅರ್ಜಿ ಹಾಕಿ!