ಸಾಲ ಬಾಧೆಯಿಂದ ಐವರು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ಬಹಳ ನೋವಿನ ಸಂಗತಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರು (ನ.27): ಸಾಲ ಬಾಧೆಯಿಂದ ಐವರು ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ಬಹಳ ನೋವಿನ ಸಂಗತಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನ್ಯಾಯ ಕೊಡಿಸುವಂತೆ ಡೆತ್ ನೋಟ್‌ನಲ್ಲಿ ಗರೀಬ್ ಸಾಬ್ ಗೃಹ ಸಚಿವರ ಹೆಸರು ಪ್ರಸ್ತಾಪಿಸಿದ್ದ ಹಿನ್ನೆಲೆ ತುಮಕೂರು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ತೆರಳಿ ಮೃತದೇಹ ನೋಡಿದರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಟುಂಬದವರು ಯಾರೂ ಬೇರೆಯವರು ಇಲ್ಲ. ತಂದೆ, ತಾಯಿ,ಸಹೋದರರು ಇದ್ದರು. ಅವರಿಗೆ ಸಾಲ ತೀರಿಸಲು ಆಗಿಲ್ಲ. ಸಾಲಗಾರರು ಕಟ್ಟುವಂತೆ ಒತ್ತಾಯ ಮಾಡುತ್ತಿದ್ದರು. ಸಾಲ ತೀರಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಕೆಲವರ ಹೆಸರನ್ನು ಬರೆದಿಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಮಾಡ್ತಾರೆ. ಮುಂದೆ ಏನು ಮಾಡಬೇಕು ಅಂತ ನಿರ್ಧಾರ ಮಾಡ್ತಾರೆ. ಮುಖ್ಯಮಂತ್ರಿಗೆ ತಿಳಿಸಿ ಆದೇಶದಂತೆ ಪರಿಹಾರ ನೀಡುತ್ತೇವೆ. ಬಡ್ಡಿ ವ್ಯವಹಾರ ಇತ್ತು ಎಂದು ಜನರು ಮಾತನಾಡ್ತಿದ್ದಾರೆ. ಅದನ್ನು ಗಂಭೀರವಾಗಿ ತೆಗದುಕೊಂಡು, ಬಡ್ಡಿ ವ್ಯವಹಾರ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿತ್ತೇವೆ ಎಂದರು.
undefined
ಆಜಾನ್ ಸದ್ದು ಕೇಳಿಸುತ್ತಿದ್ದಂತೆ ಅರ್ಧಕ್ಕೆ ಮಾತು ನಿಲ್ಲಿಸಿ ಮೌನವಾಗಿ ಕುಳಿತ ಗೃಹ ಸಚಿವ!
ಘಟನೆ ಬಗ್ಗೆ ತನಿಖೆಯ ನಂತರವೇ ಸತ್ಯಾಂಶ ತಿಳಿಯಲಿದೆ. ಆತ್ಮಹತ್ಯೆಯ ಗಂಭಿರತೆ ಗೊತ್ತಿಲ್ಲ. ತನಿಖೆಯ ನಂತರ ಕಾರಣ ಏನೆಂಬುದು ತಿಳಿಯುತ್ತದೆ. ಕಡಿಮೆ ಹಣಕ್ಕೆ ಐದು ಜನ ಸಾಯುವುದು ಸಾಮಾನ್ಯ ಅಲ್ಲ. ಹೀಗಾಗಿ ಎಲ್ಲ ಆಯಾಮದಿಂದಲೂ ತನಿಖೆ ನಡೆಸಲಾಗುತ್ತದೆ. ಮುಂದೆ ಜಿಲ್ಲೆ ಪಟ್ಟಣದಲ್ಲಿ ಮೀಟರ್ ಬಡ್ಡಿ ಮಾಡುವರ, ದಂಧೆ ನಡೆಸುವವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. ಅಮಾಯಕರಿಗೆ ಸಾಲ ಕೊಟ್ಟು ಬಡ್ಡಿ ಪಡೆಯುವುದು, ಅದಕ್ಕಾಗಿ ಕಿರುಕುಳ ಕೊಡುವುದು ಜಾಸ್ತಿಯಾಗಿದೆ. ಇಂತಹ ಘಟನೆ ಮರುಕಳಿಸಬಾರದು. ಇದನ್ನು ತಡೆಯುವಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಡಿಕೆಶಿ ಕೇಸ್ ಭವಿಷ್ಯ ಸಿಬಿಐ, ಕೋರ್ಟ್‌ಗೆ ಬಿಟ್ಟದ್ದು: ಸಚಿವ ಪರಮೇಶ್ವರ್
ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ವಿಚಾರ ಸಂಬಂಧ ಮಾತನಾಡಿದ ಸಚಿವರು, ನನ್ನ ಗಮನಕ್ಕೆ ಬಂದಿಲ್ಲ. ಅಂತಹದು ಏನಾದರೂ ಇದ್ದರೆ ಗಮನಕ್ಕೆ ತಂದರೆ ತನಿಖೆ ನಡೆಸಲಾಗುವುದು. ಹಣ ನಮಗೆ ಕೊಟ್ಟಿದ್ದಾರಾ? ಏನು ಮಾತನಾಡಿದ್ದಾರಂತ ತನಿಖೆ ಮಾಡುತ್ತೇವೆ ಎಂದರು.