Corona Update ಜ.24ರಂದು ಕರ್ನಾಟಕದಲ್ಲಿ ಪಾಸಿಟಿವ್ ಕೇಸ್ ಇಳಿಕೆ, ಸಾವಿನ ಸಂಖ್ಯೆಯಲ್ಲಿ ಏರಿಕೆ

By Suvarna News  |  First Published Jan 24, 2022, 10:32 PM IST

* ಕರ್ನಾಟಕದಲ್ಲಿ ಕೊಂಚ ಕೊರೋನಾ ಪಾಸಿಟಿವ್ ಕೇಸ್ ಇಳಿಕೆ
* ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಏರಿಕೆ 
* ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆ


ಬೆಂಗಳೂರು, (ಜ.24): ಕರ್ನಾಟಕದಲ್ಲಿ(Karnataka) ಇಂದು(ಸೋಮವಾರ) 46,426 ಕೊರೋನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 32 ಜನರು ಸಾವನ್ನಪ್ಪಿದ್ದಾರೆ. ಕೊರೋನಾ (Coronavirus) ಕೇಸ್ ಸಂಖ್ಯೆಯಲ್ಲಿ ಕೊಂಚ ಕಡಿಮೆಯಾಗಿದ್ರೆ, ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಈ ಮೂಲಕ ರಾಜ್ಯದಲ್ಲಿ ಈವರೆಗೆ ಒಟ್ಟು 35,64,108 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 31,62,977 ಜನರು ಚೇತರಿಸಿಕೊಂಡಿದ್ದಾರೆ. ಒಟ್ಟು 38,614 ಜನರು ಸಾವನ್ನಪ್ಪಿದ್ದಾರೆ. ಪ್ರಸ್ತುತ 3,62,487 ಸಕ್ರಿಯ ಪ್ರಕರಣಗಳಿದ್ದು,  ಪ್ರಸ್ತುತ ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ 32.95 ಇದೆ. ಇನ್ನು ಸಾವಿನ ಸರಾಸರಿ ಶೇ 0.06 ಇದೆ.

Tap to resize

Latest Videos

undefined

Omicron Crisis: ಸಮುದಾಯಕ್ಕೆ ಹಬ್ಬುತ್ತಿದೆ ಒಮಿಕ್ರೋನ್‌: ಹೆಚ್ಚಿನ ಸೋಂಕಿತರಲ್ಲಿ ರೋಗಲಕ್ಷಣವೇ ಇರಲ್ಲ

ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 21,569 ಜನರಿಗೆ ಸೋಂಕು ದೃಢಪಟ್ಟಿದ್ದು,  9 ಜನರು ಸಾವನ್ನಪ್ಪಿದ್ದಾರೆ. 

27,008 ಜನರು ಚೇತರಿಸಿಕೊಂಡಿದ್ದಾರೆ.ನಗರದಲ್ಲಿ ಈವರೆಗೆ 16,07,226 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಕೊವಿಡ್​ನಿಂದ ಈವರೆಗೆ ಒಟ್ಟು 16,507 ಜನರು ಸಾವನ್ನಪ್ಪಿದ್ದಾರೆ. 13,64,333 ಜನರು ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಪ್ರಸ್ತುತ 2,26,385 ಸಕ್ರಿಯ ಸೋಂಕು ಪ್ರಕರಣಗಳಿವೆ. 

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
ಬೆಂಗಳೂರು ನಗರ 21,569, ಬಾಗಲಕೋಟೆ 291, ಬಳ್ಳಾರಿ 817, ಬೆಳಗಾವಿ 625, ಬೆಂಗಳೂರು ಗ್ರಾಮಾಂತರ 1607, ಬೀದರ್ 284, ಚಾಮರಾಜನಗರ 656, ಚಿಕ್ಕಬಳ್ಳಾಪುರ 905, ಚಿಕ್ಕಮಗಳೂರು 144, ಚಿತ್ರದುರ್ಗ 642, ದಕ್ಷಿಣ ಕನ್ನಡ 655, ದಾವಣಗೆರೆ 467, ಧಾರವಾಡ 1407, ಗದಗ 257, ಹಾಸನ 1908, ಹಾವೇರಿ 304, ಕಲಬುರ್ಗಿ 379, ಕೊಡಗು 657, ಕೋಲಾರ 661, ಕೊಪ್ಪಳ 525, ಮಂಡ್ಯ 1837, ಮೈಸೂರು 4105, ರಾಯಚೂರು 281, ರಾಮನಗರ 288, ಶಿವಮೊಗ್ಗ 537, ತುಮಕೂರು 2960, ಉಡುಪಿ 677, ಉತ್ತರ ಕನ್ನಡ 626, ವಿಜಯಪುರ 270, ಯಾದಗಿರಿ 85.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು? 
ಬೆಂಗಳೂರು ನಗರ 9, ಮೈಸೂರು, ದಕ್ಷಿಣ ಕನ್ನಡ, ಉಡುಪಿ 3, ಹಾವೇರಿ, ಕಲಬುರ್ಗಿ 2, ಹಾಸನ, ಮಂಡ್ಯ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಗದಗ, ಬೆಳಗಾವಿ 1.

ದೇಶದಲ್ಲಿ ಕೊರೋನಾ
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,06,064 ಹೊಸ ಕೊವಿಡ್​ 19 ಕೇಸ್​ಗಳು (Covid 19 Cases In India) ದಾಖಲಾಗಿವೆ. ಭಾನುವಾರ 3.33 ಲಕ್ಷ ಕೇಸ್​ಗಳು ದಾಖಲಾಗಿದ್ದವು. ಅದಕ್ಕೆ ಹೋಲಿಸಿದರೆ ಇಂದು ಕಡಿಮೆಯಾಗಿದೆ. ಆದರೆ ದೈನಂದಿನ ಪಾಸಿಟಿವಿಟಿ ರೇಟ್ ಶೇ.​ 20.75ಕ್ಕೆ ಏರಿಕೆಯಾಗಿದ್ದು, ಚೇತರಿಕೆ ದರ ಶೇ.  93.07ಗೆ ಇಳಿದಿದೆ. ವಾರದ ಪಾಸಿಟಿವಿಟಿ ರೇಟ್​  17.03 ರಷ್ಟಿದೆ.  

ಹಾಗೇ, ಕಳೆದ 24ಗಂಟೆಯಲ್ಲಿ 439 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಭಾರತದಲ್ಲಿ ಕೊವಿಡ್​ 19 ಸೋಂಕಿತರ ಸಂಖ್ಯೆ ಒಟ್ಟಾರೆ 3,95,43,328 ಕ್ಕೆ ತಲುಪಿದ್ದರೆ, ಸಕ್ರಿಯ ಪ್ರಕರಣಗಳ ಸಂಖ್ಯೆ 22,49,335ಕ್ಕೆ ಏರಿದೆ. ಕಳದೆ 241 ದಿನಗಳಲ್ಲೇ ಇದು ಅತ್ಯಂತ ಹೆಚ್ಚಿನ ಸಕ್ರಿಯ ಪ್ರಕರಣಗಳು ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

click me!