* ಕರ್ನಾಟಕದಲ್ಲಿ ಕೊರೋನಾ ಡಬಲ್
* ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಮಹಾಮಾರಿ
* ಕೊರೋನಾ ಪಾಸಿಟಿವಿಟಿ ರೇಟ್ ಶೇ. 3.33
ಬೆಂಗಳೂರು, (ಜ.05): ಕರ್ನಾಟಕ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಆದರೂ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಿಗೆ ದಿನ ದಿನಕ್ಕೆ ದ್ವಿಗುಣವಾಗುತ್ತಿದೆ.
ಹೌದು...ನಿನ್ನೆಗಿಂತ (ಜ.04)ಗ ಇಂದು(ಜ.05) ಕೊರೋನಾ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಡಬಲ್ ಆಗಿದೆ. ಕಳೆದ 24 ಗಂಟೆಗಳಲ್ಲಿ 4,246 ಪ್ರಕರಣಗಳು ಪತ್ತೆ ಆಗಿವೆ.
undefined
ಇನ್ನು ಕೊರೋನಾ ಹಾಟ್‌ಸ್ಫಾಟ್ ಆಗುತ್ತಿರುವ ಬೆಂಗಳೂರಿನಲ್ಲಿ ಇಂದು ಒಂದೇ ದಿನ 3,605 ಜನರಿಗೆ ಸೋಂಕು ದೃಢವಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಶೇ. 3.33ಕ್ಕೇರಿದೆ. ಕೊರೋನಾ ಆತಂಕದ ಮಧ್ಯೆ ರೂಪಾಂತರಿ ವೈರಸ್ ಒಮಿಕ್ರಾನ್ ಸಹ ಹೆಚ್ಚಳವಾಗಿದ್ದು, ಇದುವರೆಗೆ 226 ಜನರಿಗೆ ಕೇಸ್ ಪತ್ತೆಯಾಗಿದೆ ಎಂದು ಟ್ವಿಟರ್ನಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.
Covid Crisis in Karnataka: ಫೆಬ್ರವರಿಗೆ ರಾಜ್ಯದಲ್ಲಿ ನಿತ್ಯ 1.2 ಲಕ್ಷ ಕೇಸ್!
Covid cases nearly double in 24 hours to 4,246. TPR of 3.33%:
◾New cases in State: 4,246
◾New cases in B'lore: 3,605
◾Positivity rate: 3.33%
◾New Omicron cases: NA
◾Total Omicron cases: 226
◾Deaths:02 (B'lore- 02)
◾Tests: 1,27,328
Bengaluru's positivity rate spikes up to 6.45% today with 3,605 new cases!
Bengaluru accounts for 85% of Karnataka's cases!
Cases nearly doubled in 24 hours!
Mask up and stay safe Bengaluru!
ಭಾರತದ ವರದಿ
ಭಾರತದಲ್ಲಿ ಕೋವಿಡ್ 19 (Covid 19) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ 20 ಸಾವಿರಗಳಷ್ಟು ಏರಿಕೆಯಾಗುತ್ತಿದೆ. ನಿನ್ನೆ 37, 379 ಸೋಂಕಿನ ಪ್ರಕರಣಗಳು ದಾಖಲಾಗಿದ್ದವು. ಆದರೆ ಇಂದು, ಕೇವಲ 24ಗಂಟೆಯಲ್ಲಿ ಬರೋಬ್ಬರಿ 58,097 ಕೊರೋನಾ ಸೋಂಕಿನ ಕೇಸ್ಗಳು ಪತ್ತೆಯಾಗಿವೆ. ಇದು ನಿನ್ನೆಗಿಂತಲೂ ಶೇ.55ರಷ್ಟು ಅಧಿಕವಾದ ಹಾಗಾಗಿದೆ. ಒಟ್ಟಾರೆ ಕೊರೊನಾ ಕೇಸ್(Corona Cases)ಗಳಲ್ಲಿ 18,466 ಕೇಸ್ಗಳು ಮಹಾರಾಷ್ಟ್ರದಲ್ಲೇ ಪತ್ತೆಯಾಗಿವೆ. ಕಳೆದ 24ಗಂಟೆಯಲ್ಲಿ 534 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಹಾಗೇ, ಒಮಿಕ್ರಾನ್ ಸೋಂಕಿತರ ಸಂಖ್ಯೆ ದೇಶದಲ್ಲಿ 2135ಕ್ಕೆ ತಲುಪಿದೆ.
ದೇಶದಲ್ಲಿ 24 ಗಂಟೆಯಲ್ಲಿ 15,389 ಕೊರೊನಾ ಸೋಂಕಿತರು ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 2,14,004 ಆಗಿದೆ. ಹಾಗೇ, ಭಾರತದಲ್ಲಿ ಸದ್ಯ ಕೊರೊನಾದಿಂದ ಒಟ್ಟಾರೆ ಚೇತರಿಸಿಕೊಂಡವರು 3,43,21,803 ಜನರು. ಸಾವಿನ ಸಂಖ್ಯೆ 4,82,551ಕ್ಕೆ ಏರಿಕೆಯಾಗಿದೆ. ದಿನದ ಪಾಸಿಟಿವಿಟಿ ರೇಟ್ ಶೇ. 4.18 ಮತ್ತು ವಾರದ ಪಾಸಿಟಿವಿಟಿ ಪ್ರಮಾಣ ಶೇ.2.60 ರಷ್ಟಿದೆ. ಹಾಗೇ ಚೇತರಿಕೆ ಪ್ರಮಾಣ ಶೇ.98.01ಕ್ಕೆ ನಿಂತಿದೆ.
ಒಮಿಕ್ರಾನ್‌ಗೆ ಮೊದಲ ಬಲಿ
ಭಾರತದಲ್ಲಿ ಒಮಿಕ್ರಾನ್‌ಗೆ ಮೊದಲ ಬಲಿಯಾಗಿದೆ. ರಾಜಸ್ಥಾನದಲ್ಲಿ ಲಕ್ಷ್ಮೀನಾರಾಯಣನಗರದ 73 ವರ್ಷದ ವ್ಯಕ್ತಿ ಒಮಿಕ್ರಾನ್ನಿಂದ ಮೃತಪಟ್ಟಿದ್ದಾರೆ. ಅವರು ಡಿಸೆಂಬರ್ 15 ರಂದು ಕೊವಿಡ್‌ಗೆ ಧನಾತ್ಮಕ ಪರೀಕ್ಷೆ ನಡೆಸಿದ್ದರು ಮತ್ತು ಅಂದಿನಿಂದ ಆಸ್ಪತ್ರೆಯಲ್ಲಿದ್ದಾರೆ. ಮಧುಮೇಹ, ಅಧಿಕ ರಕ್ತದೊತ್ತಡ ಮುಂತಾದ ಕೊಮೊರ್ಬಿಡಿಟಿಗಳು ಅವರಿಗಿತ್ತು ಎಂದು ವರದಿಯಾಗಿದೆ.
ಅವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ (genome sequencing) ಕಳುಹಿಸಲಾಗಿದೆ. ಏತನ್ಮಧ್ಯೆ ಡಿಸೆಂಬರ್ 21 ರಂದು ಅವರಿಗೆ ಕೋವಿಡ್ ನೆಗೆಟಿವ್ ಕಂಡುಬಂದಿದೆ. ಜೀನೋಮ್ ಸೀಕ್ವೆನ್ಸಿಂಗ್ ಫಲಿತಾಂಶಗಳು ಡಿಸೆಂಬರ್ 25 ರಂದು ಬಂದವು ಮತ್ತು ಅವರು ಒಮಿಕ್ರಾನ್ ರೂಪಾಂತರವನ್ನು ಹೊಂದಿದ್ದಾರೆಂದು ಕಂಡುಬಂದಿದೆ.