4 ವರ್ಷದ ಪಾಲಿಕೆ ಕಾಮಗಾರಿಗಳು, ಬಿಲ್‌ ವಿವರ ನೀಡಿ: ಡಿಸಿಎಂ ಸೂಚನೆ

Published : Aug 04, 2023, 01:11 PM IST
4 ವರ್ಷದ ಪಾಲಿಕೆ ಕಾಮಗಾರಿಗಳು, ಬಿಲ್‌ ವಿವರ ನೀಡಿ: ಡಿಸಿಎಂ ಸೂಚನೆ

ಸಾರಾಂಶ

ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2019-20 ಹಾಗೂ 2022-23ರ ಸಾಲಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಹಾಗೂ ಬಿಲ್‌ ಪಾವತಿಯ ಸಮಗ್ರ ಮಾಹಿತಿಯನ್ನು 15 ದಿನದಲ್ಲಿ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿ ಪತ್ರ ಬರೆದಿದ್ದಾರೆ.

ಬೆಂಗಳೂರು (ಆ.4) :  ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ 2019-20 ಹಾಗೂ 2022-23ರ ಸಾಲಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಹಾಗೂ ಬಿಲ್‌ ಪಾವತಿಯ ಸಮಗ್ರ ಮಾಹಿತಿಯನ್ನು 15 ದಿನದಲ್ಲಿ ನೀಡುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಸೂಚಿಸಿ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಮೂರು ಮುಖ್ಯ ಅಂಶಗಳಾದ ಕಾಮಗಾರಿ ಶಿಫಾರಸು, ಟೆಂಡರ್‌ ಹಾಗೂ ಗುಣಮಟ್ಟದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಈ ಪೈಕಿ ಒಟ್ಟು 27 ಅಂಶಗಳನ್ನು ಒಳಗೊಂಡ ಪ್ರಶ್ನೆಗೆ ಉತ್ತರ ಸಹಿತ ಮಾಹಿತಿ ಕೊಡುವಂತೆ ನಿರ್ದೇಶಿಸಿದ್ದಾರೆ.\

Karnataka Lokayukta: ದಾಳಿಗ ಮುನ್ನ ಲೋಕಾಯುಕ್ತ ಸೀಕ್ರೆಟ್ ಆಪರೇಷನ್!

ಕಾಮಗಾರಿ ಕೈಗೆತ್ತಿಕೊಳ್ಳಲು ಯಾರಿಂದ ಶಿಫಾರಸು ಮಾಡಲಾಗಿತ್ತು. ಸ್ಥಳ ಪರಿಶೀಲನೆ ನಡೆಸಿ ಅವಶ್ಯಕತೆ ಬಗ್ಗೆ ತಾಂತ್ರಿಕ ವರದಿ ನೀಡಬೇಕು. ಜತೆಗೆ ವಸ್ತು ಸ್ಥಿತಿಯ ಛಾಯಾಚಿತ್ರ ಲಗತ್ತಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಕಾಮಾಗಾರಿಗೆ ಯಾವಾಗ ಟೆಂಡರ್‌ ಕರೆಯಲಾಗಿತ್ತು ಎನ್ನುವುದನ್ನು ನಮೂದಿಸುವುದರ ಜತೆಗೆ ಅಂದಾಜು ಪಟ್ಟಿಯಲ್ಲಿ ಅಳವಡಿಸಿದ ಅಂಶಗಳು ಮಿತವ್ಯಯದಿಂದ ಕೂಡಿದೆ ಎಂದು ಅಧಿಕಾರಿಗಳು ದೃಢಿಕರಿಸಬೇಕಿದೆ.

ಕಾಮಗಾರಿ ಆರಂಭಿಸುವುದಕ್ಕೆ ಪೂರಕವಾಗಿ ಈ ಹಿಂದೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು ಹಾಗೂ ನಿರ್ವಹಣೆಯ ಅಂಶಗಳ ವಿವರಗಳನ್ನು ರಸ್ತೆ ಇತಿಹಾಸ ಪುಸ್ತಕದಲ್ಲಿ ನಮೂದಿಸಿರುವುದನ್ನು ಖಚಿತಪಡಿಸಿ ಕೊಳ್ಳಲಾಗಿತ್ತೇ ಎನ್ನುವ ಬಗ್ಗೆ ಪ್ರಮಾಣಿಕರಿಸಿದ ಅಧಿಕಾರಿಯ ಹೆಸರು ಪದನಾಮ ಹಾಗೂ ಮಾಹಿತಿಯನ್ನು ಒಳಗೊಂಡ ರಸ್ತೆ ಇತಿಹಾಸದ ಪ್ರತಿ ಒದಗಿಸಬೇಕು.

ಡಾಂಬರು ರಸ್ತೆಗೆ ಅಂದಾಜು ಪಟ್ಟಿತಯಾರಿಸುವಾಗ ಕಡ್ಡಾಯವಾಗಿ ಡಾಂಬರು ಮಿಶ್ರಣದಲ್ಲಿ ಬ್ಲೆಂಡೆಡ್‌ ವೇಸ್ಟ್‌ ಪ್ಲಾಸ್ಟಿಕ್‌ ಬಳಕೆ ಮಾಡಿಕೊಳ್ಳಲಾಗಿದೆಯೇ ಎನ್ನುವ ಮಾಹಿತಿ ನೀಡಬೇಕಿದೆ. ನೀರು ನುಗ್ಗುವ ಪ್ರದೇಶಗಳಲ್ಲಿ ನಿರ್ವಹಿಸಿರುವ ಕಾಮಗಾರಿಗಳಲ್ಲಿ ಪುನಃ ನೀರು ನುಗ್ಗುವ ಸಮಸ್ಯೆ ಉಂಟಾಗುವುದಿಲ್ಲ ಎಂಬುದರ ಆಧಾರದ ಮೇಲೆ ಕಾಮಗಾರಿ ಮಾಡಲಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳು ದೃಢಿಕರಿಸಬೇಕು.

ರಸ್ತೆ ನಿರ್ಮಾಣದ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಮುನ್ನ ಹೊಸದಾಗಿ ನೀರು ಸರಬರಾಜು, ಒಳಚರಂಡಿ ಕೊಳವೆಗಳನ್ನು ಅಳವಡಿಸುವ ಕಾಮಗಾರಿ ಹಾಗೂ ಮನೆ ಸಂಪರ್ಕ ಕೆಲಸಗಳನ್ನು ಪೂರ್ಣಗೊಳಿಸಲಾಗಿದೆಯೇ ಎಂಬುದನ್ನು ತಿಳಿಸಬೇಕು. ವಾಹನ ಸಂಚಾರ ಹೆಚ್ಚಿರುವ ಪ್ರದೇಶಗಳ ರಸ್ತೆ ಕಾಮಗಾರಿ ನಿರ್ವಹಣೆ ವೇಳೆ ತಾಂತ್ರಿಕವಾಗಿ ಅನುಸರಿಸಬೇಕಾದ ಮಾನದಂಡಗಳನ್ನು ಪೂರ್ಣಗೊಳಿಸಲಾಗಿದೆಯೇ ಎಂಬ ಬಗ್ಗೆ ಐಆರ್‌ಸಿ ಕೋಡ್‌ ರೀತಿ ಕ್ರಮ ಕೈಗೊಂಡ ವಿನ್ಯಾಸ ನೀಡಬೇಕು.

ಅನುಮೋದಿತ ಕಾಮಗಾರಿಗಳ ಬದಲಿಗೆ ಇನ್ನೊಂದು ಕಾಮಗಾರಿಯನ್ನು ತೆಗೆದುಕೊಂಡು ಅನುಷ್ಠಾನಗೊಳಿಸಲಾಗಿತ್ತೇ ಅಥವಾ ಅನುಮೋದಿತ ಮೂಲ ಕಾಮಗಾರಿಯನ್ನು ಅಂದಾಜು ಪಟ್ಟಿಯಲ್ಲಿನ ಅಂಶಗಳು ಮತ್ತು ಬದಲಿ ಕಾಮಗಾರಿಯಲ್ಲಿ ತೆಗೆದುಕೊಂಡ ಅಂಶಗಳಿಗೆ ಹೊಂದಾಣಿಕೆ ಇತ್ತೇ? ಎಂಬ ಬಗ್ಗೆ ಕಾಮಗಾರಿಗೆ ಶಿಫಾರಸು ಮಾಡಿದ ಅಧಿಕಾರಿ ಹೆಸರು ಮತ್ತು ವಿವರ ನೀಡಲೇಬೇಕು. ಕಾಮಗಾರಿಗಳ ಬಿಲ್‌ ಪಾವತಿಸುವಾಗ ಅಧಿಕಾರಿಗಳು ಪರಿಶೀಲನೆ ಮಾಡಿರುವ ವಿವರ ಹಾಗೂ ಕಾಮಗಾರಿ ಮುಗಿದಿರುವ ಬಗ್ಗೆ ಅಧಿಕಾರಿಗಳು ತಪಾಸಣೆ ನಡೆಸಿದ ಬಗ್ಗೆ ಛಾಯಾಚಿತ್ರ ಹಾಗೂ ಗುಣಮಟ್ಟದ ಪರಿಶೀಲನೆ ಮಾಹಿತಿ ಲಗತ್ತಿಸಲೇಬೇಕಿದೆ.

ಡಿಕೆಶಿ ಸಿಂಗಾಪುರ ಆಪರೇಶನ್ ಬಾಂಬ್‌: ಸರ್ಕಾರ ಬಹಳ ದಿನ ಇರಲ್ಲ ಎಂದು ಅವರ ತಲೆಯಲ್ಲಿರಬಹುದು ಹೆಚ್‌ಡಿಕೆ ವ್ಯಂಗ್ಯ

 

ಕಾಲಕಾಲಕ್ಕೆ ಕಾಮಗಾರಿಯ ಗುಣಮಟ್ಟಪರಿಶೀಲನೆ ನಡೆಸಲಾಗಿದೆಯೇ ಎನ್ನುವ ಬಗ್ಗೆ ವರದಿ ನೀಡಬೇಕು ಹಾಗೂ ಪ್ರತಿ ಕಾಮಗಾರಿಗೆ ಕಾರ್ಯಾದೇಶ ನೀಡಿದ ದಿನಾಂಕ ಮತ್ತು ಕಾಮಗಾರಿ ಆರಂಭದ ದಿನಾಂಕ ನಮೂದು ಮಾಡಬೇಕಿದೆ. ಕಾಮಗಾರಿಗಳಿಗೆ ಎಷ್ಟುಬಿಲ್‌ಗಳನ್ನು ಸಲ್ಲಿಸಲಾಗಿದೆ ಮತ್ತು ಬಿಲ್‌ಗಳನ್ನು ಪಾವತಿಸಲಾದ ದಿನಾಂಕದ ಸಂಪೂರ್ಣ ವಿವರ ನೀಡಲೇಬೇಕು ಎಂಬ ಷರತ್ತುಗಳನ್ನು ವಿಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ನಮ್ಮನ್ನೇಕೆ ವೈರಿಗಳಂತೆ ನೋಡುತ್ತೀರಿ? ನಾವು ಸಹೋದ್ಯೋಗಿಗಳು: ಡಿಸಿಎಂ ಡಿಕೆ ಶಿವಕುಮಾರ್
ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ