ದೀಪಾವಳಿಗೆ ಬೆಂಗ್ಳೂರಿಂದ 38 ವಿಶೇಷ ರೈಲು ಸಂಚಾರ

By Kannadaprabha NewsFirst Published Oct 23, 2022, 3:00 AM IST
Highlights

ಟಿಕೆಟ್‌ ಬುಕ್ಕಿಂಗ್‌ ಅಥವಾ ನಿಲ್ದಾಣದಲ್ಲಿ ಟಿಕೆಟ್‌ ಖರೀದಿಸಬಹುದಾಗಿದ್ದು, ಪ್ರಯಾಣಿಕರು ಈ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ ನೈಋುತ್ಯ ರೈಲ್ವೆ 

ಬೆಂಗಳೂರು(ಅ.23):  ದೀಪಾವಳಿ ಹಿನ್ನೆಲೆಯಲ್ಲಿ ಅಕ್ಟೋಬರ್‌ ಅಂತ್ಯದವರೆಗೂ ರಾಜ್ಯ ಮತ್ತು ಹೊರ ರಾಜ್ಯದ ಪ್ರಮುಖ ಸ್ಥಳಗಳಿಗೆ 38 ವಿಶೇಷ ರೈಲುಗಳನ್ನು ಓಡಿಸಲು ನೈಋುತ್ಯ ರೈಲ್ವೆ ಮುಂದಾಗಿದೆ.

ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಅ.23ರಿಂದ 30ವರೆಗೂ ಬೆಂಗಳೂರಿನಿಂದ ವಿಜಯಪುರ, ಮೈಸೂರು, ಮುರ್ಡೇಶ್ವರ, ಮಂಗಳೂರು, ಕಾರವಾರ, ಹುಬ್ಬಳ್ಳಿ, ಬೆಳಗಾವಿ, ಕಲಬುರಗಿ, ಬೀದರ್‌, ಕನ್ನೂರು, ಶಿವಮೊಗ್ಗ, ಹೈದರಾಬಾದ್‌, ಚೆನ್ನೈ, ವಿಶಾಖಪಟ್ಟಣ, ರಾಮೇಶ್ವರ ಸೇರಿದಂತೆ ವಿವಿಧ ಭಾಗಗಳಿಗೆ ವಿಶೇಷ ರೈಲು ಆರಂಭಿಸಲಾಗಿದೆ. ಕೆ.ಎಸ್‌.ಆರ್‌, ಯಶವಂತಪುರ, ಬೈಯಪ್ಪನಹಳ್ಳಿಯ ಸರ್‌ಎಂವಿ ನಿಲ್ದಾಣದಿಂದ ವಿಶೇಷ ರೈಲುಗಳು ಓಡಾಟ ನಡೆಸಲಿವೆ.

ಕೆಲವೇ ದಿನಗಳಲ್ಲಿ ಕಾಶಿ ದರ್ಶನ್‌ ರೈಲು ಆರಂಭ: ಸಚಿವೆ ಶಶಿಕಲಾ ಜೊಲ್ಲೆ

ಟಿಕೆಟ್‌ ಬುಕ್ಕಿಂಗ್‌ ಅಥವಾ ನಿಲ್ದಾಣದಲ್ಲಿ ಟಿಕೆಟ್‌ ಖರೀದಿಸಬಹುದಾಗಿದ್ದು, ಪ್ರಯಾಣಿಕರು ಈ ಸೌಲಭ್ಯ ಪಡೆದುಕೊಳ್ಳಬೇಕು ಎಂದು ನೈಋುತ್ಯ ರೈಲ್ವೆ ಮನವಿ ಮಾಡಿದೆ. ರೈಲು ಓಡಾಟ ದಿನಾಂಕ, ನಿಲ್ದಾಣ, ದರ ಕುರಿತ ಹೆಚ್ಚಿನ ಮಾಹಿತಿ ರೈಲ್ವೆ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
 

click me!