*ತುಮಕೂರು ಮೂಲದ ನವೀನ ಕುಮಾರ್ (35) ಮೃತಪಟ್ಟ ದುರ್ದೈವಿ
*ಆರ್.ಎಸ್. ಎಸ್ ಪ್ರಮುಖನಾಗಿ ಗುರುತಿಸಿಕೊಂಡಿದ್ದ ನವೀನ್ ಕುಮಾರ್
*ಸಂಘ ಪರಿವಾರದ 50 ಜನರೊಂದಿಗೆ ಪ್ರವಾಸಕ್ಕೆ ಬಂದಿದ್ದ ಯುವಕ
ಕಾರವಾರ (ಮಾ. 12): ಉತ್ತರ ಕನ್ನಡ ಜಿಲ್ಲೆಯ (Uttara Kannada) ಶಿರಸಿಯ ಬಳಿಯ ಮುರೇಗಾರ ಫಾಲ್ಸ್ ನಲ್ಲಿ (Murgera Falls) ಮುಳುಗಿ ಆರ್.ಎಸ್.ಎಸ್. ಪ್ರಮುಖ ಸಾವೀಗಿಡಾಗಿರುವ ಘಟನೆ ನಡೆದಿದೆ. ಮುರೇಗಾರ ಫಾಲ್ಸ್ ನಲ್ಲಿ ಈಜುತ್ತಿದ್ದಾಗ ಮುಳುಗಿ ತುಮಕೂರು ಮೂಲದ ನವೀನ ಕುಮಾರ್ (35) ಮೃತಪಟ್ಟಿದ್ದಾರೆ. ನವೀನ್ ಕುಮಾರ್ ಆರ್.ಎಸ್. ಎಸ್ (RSS) ಪ್ರಮುಖರಾಗಿ ಗುರುತಿಸಿಕೊಂಡಿದ್ದರು. ತುಮಕೂರು ನಗರದ ಸಂಘದ ಜವಾಬ್ದಾರಿ ನವೀನ್ ವಹಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.
ಸಂಘ ಪರಿವಾರದ 50 ಜನರೊಂದಿಗೆ ನವೀನ್ ಕುಮಾರ್ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಮುರೇಗಾರ ಫಾಲ್ಸ್ ನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಘಟನೆಯ ಬೆನ್ನಲ್ಲೇ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಈರಯ್ಯ ಹಾಗೂ ಶ್ಯಾಮ ಪಾವಸ್ಕರ್ ಸ್ಥಳಕ್ಕೆ ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ.
ಇದನ್ನೂ ಓದಿ: ಪರೀಕ್ಷೆಯಲ್ಲಿ ಕಾಪಿ ಮಾಡಿ ಡಿಬಾರ್: 5 ಅಂತಸ್ತಿನ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ
ಕಾರು ಅಪಘಾತ: ಸಂಸದರ ಪುತ್ರ ದಾರುಣ ಸಾವು: ಭೀಕರ ಅಪಘಾತವೊಂದರಲ್ಲಿ ತಮಿಳುನಾಡಿನ ಸಂಸದರೊಬ್ಬರ ಪುತ್ರ ದಾರುಣವಾಗಿ ಸಾವನ್ನಪ್ಪಿದ್ದಾನೆ. ತಮಿಳುನಾಡಿನ ಡಿಎಂಕೆ ಸಂಸದ ಎನ್‌ಆರ್ ಎಲಂಗೋ ಅವರ ಪುತ್ರ ರಾಕೇಶ್ ಸಾವನ್ನಪ್ಪಿದ ಯುವಕ. ರಾಕೇಶ್ ಸ್ಥಳದಲ್ಲೇ ಮೃತಪಟ್ಟರೆ, ಆತನ ಸ್ನೇಹಿತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಡಿಎಂಕೆ ರಾಜ್ಯಸಭಾ ಸಂಸದ ಎನ್.ಆರ್. ಇಲಾಂಗೋ ಅವರ ಪುತ್ರ ಇಂದು (ಮಾರ್ಚ್ 10) ಮುಂಜಾನೆ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ. 22 ವರ್ಷದ ರಾಕೇಶ್ ಅವರು ಸ್ನೇಹಿತನೊಂದಿಗೆ ಪುದುಚೇರಿಗೆ ತೆರಳುತ್ತಿದ್ದರು. ಈಸ್ಟ್ ಕೋಸ್ಟ್ ರಸ್ತೆಯಲ್ಲಿ (ಇಸಿಆರ್) ಪ್ರಯಾಣಿಸುತ್ತಿದ್ದಾಗ ಚೆನ್ನೈ ಕೊಟ್ಟಕುಪ್ಪಂ ಬಳಿಯ ಕೀಲ್‌ಪುತುಪೇಟೆಯಲ್ಲಿ ) ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.
ವಿಲ್ಲುಪುರಂ(Villupuram) ಜಿಲ್ಲೆಯ ಪುತ್ತುವಾಯಿ ((Puthuvai)) ಬಳಿ ಈ ಘಟನೆ ನಡೆದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಕಾರ, ರಾಕೇಶ್ ಮತ್ತು ಅವನ ಸ್ನೇಹಿತ ಪುದುಚೇರಿಗೆ ಹೋಗುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ವಾಹನವು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ವರದಿಯಾಗಿದೆ. ರಾಕೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಸ್ನೇಹಿತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.