ಕೊರೋನಾ ಲಕ್ಷಣವಿರುವ ಶೇ.34 ಜನಕ್ಕೆ ಪಾಸಿಟಿವ್‌!

Kannadaprabha News   | Asianet News
Published : Aug 20, 2020, 09:49 AM IST
ಕೊರೋನಾ ಲಕ್ಷಣವಿರುವ ಶೇ.34 ಜನಕ್ಕೆ ಪಾಸಿಟಿವ್‌!

ಸಾರಾಂಶ

ಕೊರೋನಾ ಮಹಾಮಾರಿ ಎಲ್ಲೆಡೆ ಹೆಚ್ಚಾಗುತ್ತಲೇ ಇದ್ದು, ಇದೀಗ ಪರೀಕ್ಷೆ ಮಾಡಿದ ಶೇ.34ರಷ್ಟು ಮಂದಿ ವರದಿ ಪಾಸಿಟಿವ್ ಬರುತ್ತಿದೆ.

 ಶ್ರೀಕಾಂತ್‌ ಎನ್‌. ಗೌಡಸಂದ್ರ

 ಬೆಂಗಳೂರು (ಆ.20):  ರಾಜ್ಯದಲ್ಲಿ ಸೋಂಕು ಪರೀಕ್ಷೆಗೆ ಒಳಪಡುವ ರೋಗ ಲಕ್ಷಣವುಳ್ಳ ಪ್ರತಿ 100 ಮಂದಿಯಲ್ಲಿ ಶೇ.34.4ರಷ್ಟುಮಂದಿಗೆ ಕೊರೋನಾ ದೃಢಪಡುತ್ತಿದೆ. ಇನ್ನು ರೋಗ ಲಕ್ಷಣ ಹೊಂದಿರದವರ ಪೈಕಿ ಪ್ರತಿ 100 ಮಂದಿಯ ಪರೀಕ್ಷೆ ನಡೆಸಿದಾಗ ಶೇ.12.8 ಮಂದಿಗೆ ಸೋಂಕು ದೃಢಪಡುತ್ತಿದೆ.

ಆರೋಗ್ಯ ಇಲಾಖೆಯು ಇದೇ ಮೊದಲ ಬಾರಿಗೆ ರೋಗ ಲಕ್ಷಣ ಹೊಂದಿರುವ ಹಾಗೂ ರೋಗ ಲಕ್ಷಣಗಳಿಲ್ಲದ ಶಂಕಿತರ ಕೊರೋನಾ ಸೋಂಕು ಪರೀಕ್ಷೆಗಳಲ್ಲಿ ಸೋಂಕು ದೃಢಪಡುತ್ತಿರುವ ಪ್ರಮಾಣವನ್ನು ವಿಶ್ಲೇಷಣೆ ಮಾಡಿದ್ದು, ಈ ವರದಿ ಲಭ್ಯವಾಗಿದೆ. ಆಗಸ್ಟ್‌ 11ರಿಂದ ಆಗಸ್ಟ್‌ 17ರವರೆಗೆ ಕಳೆದ ಒಂದು ವಾರದಲ್ಲಿ ಸಿಮ್ಟಮ್ಯಾಟಿಕ್‌ (ರೋಗ ಲಕ್ಷಣ ಹೊಂದಿರುವ) 43,631 ಶಂಕಿತರ ಪರೀಕ್ಷೆ ನಡೆಸಿದ್ದರೆ 14,922 (ಶೇ.34.4) ರಷ್ಟುಮಂದಿಗೆ ಸೋಂಕು ದೃಢಪಟ್ಟಿದೆ. 2.61 ಲಕ್ಷ ರೋಗ ಲಕ್ಷಣಗಳಿಲ್ಲದವರ ಪರೀಕ್ಷೆಯಲ್ಲಿ 33,434 ಮಂದಿಗೆ (ಶೇ.12.8) ಸೋಂಕು ದೃಢಪಪಟ್ಟಿದೆ.

ಹೀಗಾಗಿ ಜ್ವರ, ಕೆಮ್ಮು, ಗಂಟಲು ನೋವು, ಆಯಾಸದಂತಹ ರೋಗ ಲಕ್ಷಣಗಳಿರುವವರು ತಪ್ಪದೇ ಫೀವರ್‌ ಕ್ಲಿನಿಕ್‌ಗೆ ಅಥವಾ ಹತ್ತಿರದ ಕೊರೋನಾ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಬೇಕು. ರೋಗ ಲಕ್ಷಣಗಳಿಲ್ಲದಿದ್ದರೂ ಪ್ರತಿ 100 ಮಂದಿಯಲ್ಲಿ ಶೇ.12.8 ಮಂದಿಗೆ ಸೋಂಕು ದೃಢಪಡುತ್ತಿರುವುದರಿಂದ ಸೋಂಕು ಹರಡದಂತೆ ನಿಯಂತ್ರಿಸಲು ಹಾಗೂ ಸೂಕ್ತ ವೇಳೆಗೆ ಚಿಕಿತ್ಸೆ ಪಡೆಯಲು ಅನುವಾಗುವಂತೆ ಸೋಂಕಿತರ ಸಂಪರ್ಕ ಹೊಂದಿರುವವರು ರೋಗ ಲಕ್ಷಣ ಇಲ್ಲದಿದ್ದರೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.

ರೋಗ ಲಕ್ಷಣಗಳಿಲ್ಲದವರ ಪಾಸಿಟಿವಿಟಿ ದರ ಶೇ.12.8:

ಕಳೆದ ಒಂದು ವಾರದಲ್ಲಿ 2,61,072 ಮಂದಿ ರೋಗ ಲಕ್ಷಣಗಳಿಲ್ಲದವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 33,434 ಮಂದಿಗೆ ಸೋಂಕು ದೃಢಪಟ್ಟಿದ್ದು, 12,658 ಮಂದಿಗೆ ರಾರ‍ಯಪಿಡ್‌ ಆಂಟಿಜೆನ್‌ ಪರೀಕ್ಷೆಯಿಂದ, 20,776 ಮಂದಿಗೆ ಆರ್‌ಟಿ-ಪಿಸಿಆರ್‌ ಪರೀಕ್ಷೆಯಲ್ಲಿ ಸೋಂಕು ಖಚಿತವಾಗಿದೆ.

ಗುಡ್‌ ನ್ಯೂಸ್: ದೇಶಿ ಕೋವಿಡ್ ಲಸಿಕೆ ಬಳಕೆಗೆ ಶೀಘ್ರ ಸಮ್ಮುತಿ..? 

ಶೇಕಡವಾರು ಬೆಳಗಾವಿ ಶೇ.19.8, ಚಿಕ್ಕಮಗಳೂರು ಶೇ.19.1, ಶಿವಮೊಗ್ಗ ಶೇ.18.9, ಯಾದಗಿರಿ ಶೇ.18.9, ಬಳ್ಳಾರಿ ಶೇ.18.3, ಉಡುಪಿ ಶೇ.17.5, ಹಾವೇರಿ ಶೇ.16.9, ಮೈಸೂರು ಶೇ.16.8, ದಾವಣಗೆರೆ ಶೇ.16.6, ಬೀದರ್‌ ಶೇ.16, ಕೊಪ್ಪಳ ಶೇ.15.3, ಧಾರವಾಡ ಶೇ.14, ಕಲಬುರಗಿ ಶೇ.13.9, ರಾಯಚೂರು ಶೇ.13.7, ಹಾಸನ ಶೇ.12.8 ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚು ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಚಿಕ್ಕಬಳ್ಳಾಪುರದಲ್ಲಿ ಶೇ.5.3, ಚಾಮರಾನಗರದಲ್ಲಿ ಶೇ.5.7, ಉತ್ತರ ಕನ್ನಡದಲ್ಲಿ ಶೇ.5.9 ಹೀಗೆ ಅತಿ ಕಡಿಮೆ ಸೋಂಕು ದೃಢಪಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸಿಮ್ಟಮ್ಯಾಟಿಕ್‌ ಪ್ರಕರಣದಲ್ಲಿ ಶೇ.34.4 ಪಾಸಿಟಿವ್‌:

ರೋಗ ಲಕ್ಷಣಗಳಿದ್ದು ಪರೀಕ್ಷೆಗೆ ಒಳಪಟ್ಟವರ ಪೈಕಿ ಶೇ.34.4ರಷ್ಟುಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕಳೆದ 7 ದಿನಗಳಲ್ಲಿ 43,631 ಮಂದಿ ಪರೀಕ್ಷೆಗೆ ಒಳಪಟ್ಟಿದ್ದರೆ 14,992 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಲ್ಲಿ 6794 ಮಂದಿಗೆ ರಾರ‍ಯಪಿಡ್‌ ಆಂಟಿಜೆನ್‌ ಪರೀಕ್ಷೆ, 8198 ಮಂದಿಗೆ ಆರ್‌ಟಿ-ಪಿಸಿಆರ್‌ ಮೂಲಕ ಸೋಂಕು ದೃಢಪಟ್ಟಿದೆ. ಜಿಲ್ಲಾವಾರು ಉಡುಪಿಯಲ್ಲಿ ಪ್ರತಿ 100 ಮಂದಿಯಲ್ಲಿ ಶೇ.50.8 ಮಂದಿಗೆ ಸೋಂಕು ದೃಢಪಟ್ಟಿದೆ.

ಬುಧವಾರ ದೇಶದಲ್ಲಿ ದಾಖಲೆಯ 71,281 ಹೊಸ ಕೊರೋನಾ ಕೇಸು..!

ದಕ್ಷಿಣ ಕನ್ನಡದಲ್ಲಿ ಶೇ.47, ಮೈಸೂರು ಶೇ.46.5, ಶಿವಮೊಗ್ಗ ಶೇ.46.3, ಬೆಳಗಾವಿ ಶೇ.45.9, ಹಾಸನ ಶೇ.44.2, ವಿಜಯಪುರ ಶೇ.43, ಬೆಂಗಳೂರು ನಗರ ಶೇ.39, ಬಳ್ಳಾರಿ ಶೇ.38.7, ರಾಮನಗರ ಶೇ.37.5, ಬೀದರ್‌ ಶೇ.37.3, ಗದಗ ಶೇ.36.4, ಬೆಂಗಳೂರು ಗ್ರಾಮಾಂತರ ಶೇ.35.5 ಜಿಲ್ಲೆಗಳಲ್ಲಿ ಸರಾಸರಿಗಿಂತ ಹೆಚ್ಚು ಪಾಸಿಟಿವ್‌ ಪ್ರಕರಣ ವರದಿಯಾಗಿದೆ. ಇನ್ನು ಚಿತ್ರದುರ್ಗ ಶೇ.10.9, ಕಲಬುರಗಿ ಶೇ.13.1, ಉತ್ತರ ಕನ್ನಡದಲ್ಲಿ ಶೇ.14.1 ಹೀಗೆ ಕಡಿಮೆ ಪಾಸಿಟಿವಿಟಿ ದರ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ