Corona Update: ಕರ್ನಾಟಕದಲ್ಲಿ ಕೊರೋನಾ ಏರಿಕೆ, ಇರಲಿ ಎಚ್ಚರಿಕೆ

Published : Dec 22, 2021, 09:51 PM IST
Corona Update: ಕರ್ನಾಟಕದಲ್ಲಿ ಕೊರೋನಾ ಏರಿಕೆ, ಇರಲಿ ಎಚ್ಚರಿಕೆ

ಸಾರಾಂಶ

* ರಾಜ್ಯದಲ್ಲಿ ಕೋವಿಡ್-19 ಏರಿಳಿತ ಮುಂದುವರಿಕೆ * ಕೊರೋನಾ ಕೇಸ್‌ನಲ್ಲಿ ಕೊಂಚ ಏರಿಕೆ  * ಇಂದು(ಬುಧವಾರ) ರಾಜ್ಯಾದ್ಯಂತ 321 ಹೊಸ ಸೋಂಕು ಪ್ರಕರಣ

ಬೆಂಗಳೂರು, (ಡಿ.22): ರಾಜ್ಯದಲ್ಲಿ ಕೊರೋನಾ ವೈರಸ್ ಪಾಸಿಟಿವ್ ಕೇಸ್ ಸಂಖ್ಯೆಯಲ್ಲಿ ಏರಿಕೆಯಾಗಿದ್ದು,  ಇಂದು(ಬುಧವಾರ) ರಾಜ್ಯಾದ್ಯಂತ 321 ಹೊಸ ಸೋಂಕು ಪ್ರಕರಣಗಳು ಮತ್ತು 4 ಜನರು ಸಾವನ್ನಪ್ಪಿದ್ದಾರೆ. 

ರಾಜ್ಯದಲ್ಲಿ ಒಟ್ಟು 253 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 7,138 ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 30,03,265 ಮಂದಿಗೆ ಕೊರೋನಾ ಸೋಂಕು ತಗುಲಿದೆ. 29,57,799 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Omicron In India: ಮುಂದಿನ 6 ರಿಂದ 8 ವಾರ ಭಾರತದ ಪಾಲಿಗೆ ನಿರ್ಣಾಯಕ, ವೈದ್ಯರ ಎಚ್ಚರಿಕೆ!

ಕೋವಿಡ್-19 ಮರಣ ಪ್ರಮಾಣ ಶೇ.1.24 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.32 ರಷ್ಟಿದೆ. ರಾಜ್ಯದಲ್ಲಿ ಇಂದು ಒಟ್ಟು 4,30,230 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 97,897 ಸ್ಯಾಂಪಲ್ (ಆರ್‌ಟಿಪಿಸಿಆರ್ 78,870 + 19,027 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವರು ಕೊರೋನಾ ಕೇಸ್
ಬಾಗಲಕೋಟೆ 0, ಬಳ್ಳಾರಿ 0, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 0, ಬೆಂಗಳೂರು ನಗರ 211, ಬೀದರ್ 1, ಚಾಮರಾಜನಗರ 0, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 2, ಚಿತ್ರದುರ್ಗ 2, ದಕ್ಷಿಣ ಕನ್ನಡ 20, ದಾವಣಗೆರೆ 0, ಧಾರವಾಡ 4, ಗದಗ 0, ಹಾಸನ 5, ಹಾವೇರಿ 0, ಕಲಬುರಗಿ 0, ಕೊಡಗು 20, ಕೋಲಾರ 1, ಕೊಪ್ಪಳ 0, ಮಂಡ್ಯ 1, ಮೈಸೂರು 19, ರಾಯಚೂರು 1, ರಾಮನಗರ 0, ಶಿವಮೊಗ್ಗ 3, ತುಮಕೂರು 6, ಉಡುಪಿ 5, ಉತ್ತರ ಕನ್ನಡ 13, ವಿಜಯಪುರ 1 ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಮುಂದಿನ 6 ರಿಂದ 8 ವಾರ ಭಾರತದ ಪಾಲಿಗೆ ನಿರ್ಣಾಯಕ
ಒಮಿಕ್ರಾನ್ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಲಿದ್ದಾರೆ. ಮಾರ್ಗಸೂಚಿಗಳನ್ನು ಹೊರಡಿಸುವ ಮೂಲಕ ಕೇಂದ್ರವು ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಮುಂದಿನ 6 ರಿಂದ 8 ವಾರಗಳು ಭಾರತದ ಜನರಿಗೆ ನಿರ್ಣಾಯಕ ಎಂದು ಮೇದಾಂತ ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್ ಟ್ರೆಹಾನ್ ಎಚ್ಚರಿಸಿದ್ದಾರೆ.

ಚಿಂತಿಸಬೇಕಾದ ವಿಚಾರ
ಸುದ್ದಿ ವಾಹಿನಿಯೊಂದರೊಂದಿಗಿನ ಸಂವಾದದಲ್ಲಿ ಮೇದಾಂತ ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್ ಟ್ರೆಹಾನ್ ಅವರು ಆತಂಕ ಪಡುವ ಅಗತ್ಯವಿದೆ ಎಂದು ಹೇಳಿದ್ದಾರೆ, ಈ ಆತಂಕವು ಕೆಲವು ವಾರಗಳ ಹಿಂದೆಯಷ್ಟೇ ನಮಗೆ ಅನುಭವಕ್ಕೆ ಬಂದಿದೆ. ಆಗ ದೇಶಕ್ಕೆ ಇದು ಕಾಲಿಟ್ಟಿದೆಯೋ, ಇಲ್ಲವೋ ಎಂಬ ಭೀತಿ ಇತ್ತು. ಆದರೆ ಈಗ ಅದು ಹರಡುತ್ತಿದೆ ಎಂಬುದು ಸ್ಪಷ್ಟವಾಗಿದೆ, ಇದು ಈಗಾಗಲೇ ಭಾರತದಲ್ಲಿದೆ ಮತ್ತು ಅದು ಹಬ್ಬುವ ಸಾಮರ್ಥ್ಯ (ಇದನ್ನು RO ಫ್ಯಾಕ್ಟರ್ ಎಂದು ಕರೆಯಲಾಗುತ್ತದೆ) ಡೆಲ್ಟಾ ವೈರಸ್‌ಗಿಂತ ಮೂರು-ನಾಲ್ಕು ಪಟ್ಟು ಹೆಚ್ಚಿದೆ ಎಂದಿದ್ದಾರೆ.

ರಾಜ್ಯದಲ್ಲಿ ಒಮಿಕ್ರಾನ್
ಈವರೆಗೆ ರಾಜ್ಯದಲ್ಲಿ 19 ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇಂದು(ಡಿ.22) ಯಾವುದೇ ಓಮಿಕ್ರಾನ್ ಕೇಸ್ ಪತ್ತೆಯಾಗಿಲ್ಲ.

ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿರುವ ಜತೆಗೆ ದಿನೇದಿನೆ ಮತ್ತಷ್ಟು ದೇಶಗಳಿಗೆ ಪ್ರವೇಶಿಸುತ್ತ ತನ್ನ ಕಬಂಧ ಬಾಹುಗಳನ್ನು ಆವರಿಸಿಕೊಳ್ಳುತ್ತಿರುವ ರೂಪಾಂತರಿ ವೈರಸ್ ಒಮಿಕ್ರಾನ್ ದಿನದಿಂದ ದಿನಕ್ಕೂ ಮತ್ತಷ್ಟು ಭೀತಿಯನ್ನು ಹುಟ್ಟಿಸುತ್ತಲೇ ಇದೆ.

ಹೊಸ ರೂಪಾಂತರಿ ವೈರಸ್ ಒಮಿಕ್ರಾನ್​ ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರೂ ಅದು ತೀವ್ರವಾಗಿ ಹರಡಬಲ್ಲುದಾದ್ದರಿಂದ ವೇಗವಾಗಿ ವ್ಯಾಪಿಸುತ್ತಿದೆ. ಎಷ್ಟರಮಟ್ಟಿಗೆ ಎಂದರೆ ಈ ಹಿಂದೆ ಕಾಣಿಸಿಕೊಂಡಿರುವ ಡೆಲ್ಟಾ ವೇರಿಯಂಟ್​ಗಿಂತಲೂ ಒಮಿಕ್ರಾನ್​ ಹರಡುವಿಕೆ ಮೂರು ಪಟ್ಟು ಅಧಿಕ.

ಈ ಮಧ್ಯೆ ಒಮಿಕ್ರಾನ್​ನ ಪ್ರಮುಖ ರೋಗಲಕ್ಷಣ ಏನು ಎಂಬ ಬಗ್ಗೆ ದಕ್ಷಿಣ ಆಫ್ರಿಕದ ವೈದ್ಯಕೀಯ ಪರಿಣತರು ಮತ್ತಷ್ಟು ಮಾಹಿತಿ ಹೊರಹಾಕಿದ್ದಾರೆ. ದಕ್ಷಿಣ ಆಫ್ರಿಕದಲ್ಲಿನ ಒಮಿಕ್ರಾನ್​ ಅಸ್ತಿತ್ವವನ್ನು ಮೊದಲು ಗುರುತಿಸಿದವರಲ್ಲಿ ಒಬ್ಬರಾದ ಡಾ.ಆಯಂಜೆಲಿಕ್​ ಕೊಯೆಟ್ಜೆ ಅದರ ಪ್ರಮುಖ ರೋಗಲಕ್ಷಣಗಳನ್ನು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ