ಉತ್ತರ ಕನ್ನಡದಲ್ಲಿ 32 ಹೊಸ ಚಾರಣ ತಾಣಗಳು! ಟ್ರೆಕ್ಕಿಂಗ್ ಪ್ರಿಯರಿಗೆ ಜಿಲ್ಲಾಡಳಿತದಿಂದ ಗುಡ್‌ನ್ಯೂಸ್

Published : Apr 09, 2025, 11:42 PM ISTUpdated : Apr 10, 2025, 06:12 AM IST
ಉತ್ತರ ಕನ್ನಡದಲ್ಲಿ 32 ಹೊಸ ಚಾರಣ ತಾಣಗಳು! ಟ್ರೆಕ್ಕಿಂಗ್ ಪ್ರಿಯರಿಗೆ ಜಿಲ್ಲಾಡಳಿತದಿಂದ ಗುಡ್‌ನ್ಯೂಸ್

ಸಾರಾಂಶ

ಉತ್ತರ ಕನ್ನಡ ಜಿಲ್ಲೆಯಲ್ಲಿ 32 ಹೊಸ ಚಾರಣ ತಾಣಗಳನ್ನು ಗುರುತಿಸಲಾಗಿದೆ. ಅರಣ್ಯ ಇಲಾಖೆಯು ಈ ತಾಣಗಳನ್ನು ನಿರ್ವಹಿಸಲಿದ್ದು, ಚಾರಣ ಪ್ರಿಯರಿಗೆ ಸುರಕ್ಷಿತ ಅನುಭವ ನೀಡಲಿದೆ.

ಉತ್ತರ ಕನ್ನಡ (ಏ.9) ಪ್ರಕೃತಿ ಸೌಂದರ್ಯದಿಂದ ತುಂಬಿಕೊಂಡ ಉತ್ತರಕನ್ನಡ ಜಿಲ್ಲೆಯಲ್ಲಿ ಚಾರಣ ನಡೆಸೋದು ಸಾಕಷ್ಟು ಜನರ ಆಸೆ. ಚಾರಣ ಪ್ರಿಯರ ಈ ಆಸೆ ನೆರವೇರಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಗುಡ್ ನ್ಯೂಸ್ ನೀಡಿದೆ.‌ ನಿಸರ್ಗ ಪ್ರೇಮಿಗಳನ್ನು ಇನ್ನಷ್ಟು ಆಕರ್ಷಿಸುವ ಉದ್ದೇಶದಿಂದ ಉತ್ತರಕನ್ನಡ ಜಿಲ್ಲಾಡಳಿತ ವಿಶೇಷ ಪ್ರಯತ್ನ ನಡೆಸಿದ್ದು, 32 ಸ್ಥಳಗಳಲ್ಲಿ ಟ್ರೆಕ್ಕಿಂಗ್ ಅವಕಾಶಕ್ಕಾಗಿ PCCF ಗೆ ಉತ್ತರಕನ್ನಡ ಅರಣ್ಯ ಇಲಾಖೆಯ ಅಧಿಕಾರಿ ವರದಿ ಸಲ್ಲಿಸಿದ್ದಾರೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಬಳಿಕ 32 ಸ್ಥಳಗಳಲ್ಲಿ ಚಾರಣಕ್ಕೆ ಅವಕಾಶ ದೊರೆಯಲಿದ್ದು,  ಕೆಲವೇ ದಿನಗಳಲ್ಲಿ ಅವಕಾಶ ಸಿಗುವ ಸಾಧ್ಯತೆಯಿದೆ ಎಂದ ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: Bhatkal: ಅರಣ್ಯ ಇಲಾಖೆಯ ಹೊಸ ರೂಲ್ಸ್‌, ಪಾರ್ಕ್‌ನಲ್ಲಿ ಮಕ್ಕಳು ಆಟವಾಡೋದಕ್ಕೆ ಕೊಡಬೇಕು ಫೀಸ್‌!

ಉತ್ತರಕನ್ನಡ ಜಿಲ್ಲೆಯಲ್ಲಿ 32 ಸುಂದರ ಮತ್ತು ಸುರಕ್ಷಿತ ಟ್ರೆಕ್ಕಿಂಗ್ ಸ್ಥಳಗಳಿದ್ದು,  ಈವರೆಗೂ ಕಾಣದ ಪ್ರದೇಶಗಳನ್ನು ಇನ್ಮುಂದೆ ಸುರಕ್ಷಿತವಾಗಿ ಕಾಣಬಹುದಾಗಿದೆ. ಪ್ರತಿಯೊಂದು ಟ್ರೆಕ್ಕಿಂಗ್ ಸ್ಥಳಗಳನ್ನುಅರಣ್ಯ ಇಲಾಖೆಯವರೇ ನಿರ್ವಹಣೆ  ಮಾಡಲಿದ್ದಾರೆ. ಜಿಲ್ಲೆಯಲ್ಲಿ ಶೇ. 72ರಷ್ಟು ಕಾಡು ಇದ್ರೂ ಈವರೆಗೆ ಅಧಿಕೃತವಾಗಿ ಒಂದೇ ಚಾರಣ ಪಥ ಇತ್ತು. ಕುಳಗಿ ನೇಚರ್ ಕ್ಯಾಂಪ್ ನಲ್ಲಿ ಮಾತ್ರ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಹಳಷ್ಟು ಪ್ರವಾಸಿಗರು ಇಲಾಖೆಯ ಕಣ್ತಪ್ಪಿಸಿ ಚಾರಣ ಮಾಡಿ ಅವಘಡಕ್ಕೆ ಸಾಕ್ಷಿಯಾಗಿದ್ರು. ಅಲ್ಲದೇ, ಅನೇಕರು ಅಸುರಕ್ಷಿತ ತಾಣಗಳಿಗೆ ತೆರಳಿ ಜೀವ ಹಾನಿ ಕೂಡಾ ಮಾಡಿಕೊಂಡಿದ್ದರು. ಉತ್ತರಕನ್ನಡ ಅರಣ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಸರ್ವೆ ಮಾಡಿ 32 ಚಾರಣ ಪಥಗಳ ಗುರುತು ನಡೆಯಲಿದ್ದು, ಬಳಿಕ ಜಿಲ್ಲೆಯ ಸಮೃದ್ಧವಾದ ನಿಸರ್ಗ ತಾಣಗಳನ್ನು ಚಾರಣಪ್ರಿಯರು ಸುರಕ್ಷಿತವಾಗಿ ಕಾಣಬಹುದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌