Corona Update:ರಾಜ್ಯದಲ್ಲಿ ಕೊರೋನಾ ಎಷ್ಟಿದೆ? ಇಲ್ಲಿದೆ ಡಿ.10ರ ಅಂಕಿ-ಸಂಖ್ಯೆ

By Suvarna NewsFirst Published Dec 10, 2021, 10:11 PM IST
Highlights

* ಕರ್ನಾಟಕದಲ್ಲಿ ಕೊರೋನಾ ಏರಿಳಿತ
* ಹೊಸದಾಗಿ 314 ಜನರಿಗೆ ಕೊರೋನಾ
* ಇಲ್ಲಿದೆ ಎಲ್ಲಾ ಜಿಲ್ಲೆಗಳ  ಕೊರೋನಾ ಕೇಸ್ ವಿವರ

ಬೆಂಗಳೂರು, (ಡಿ.10): ಕರ್ನಾಟಕದಲ್ಲಿ(Karnataka) ಇಂದು (ಡಿ.10) ಹೊಸದಾಗಿ 314 ಜನರಿಗೆ ಕೊರೋನಾ (Coronavirus) ಪಾಸಿಟಿವ್  ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ

ಈ ಮೂಲಕ, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 29,99,785 ಕ್ಕೆ ಏರಿಕೆಯಾಗಿದ್ರೆ, ಸಾವಿನ ಸಂಖ್ಯೆ 38,255ಕ್ಕೆ ಏರಿಕೆಯಾಗಿದೆ.29,99,785 ಸೋಂಕಿತರ ಪೈಕಿ 29,54,196 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 7,305 ಕೊರೋನಾ ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Omicron Variant ನಿಯಂತ್ರಣಕ್ಕೆ ಸರ್ಕಾರ ಸಭೆ : ಇನ್ನೂ 1 ವಾರ ಹೊಸ ನಿರ್ಬಂಧ ಇಲ್ಲ: ಸಿಎಂ
 
ಇನ್ನು ಬೆಂಗಳೂರಿನಲ್ಲಿ(Bengaluru) ಶುಕ್ರವಾರ ಒಂದೇ ದಿನ 179 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,58,509 ಕ್ಕೆ ಏರಿಕೆಯಾಗಿದೆ. 12,58,509 ಸೋಂಕಿತರ ಪೈಕಿ 12,36,666 ಜನರು ಗುಣಮುಖರಾಗಿದ್ದಾರೆ.

ನಗರದಲ್ಲಿ ಕೊರೋನಾದಿಂದ ಈವರೆಗೆ 16,360 ಜನರ ಸಾವು ಸಂಭವಿಸಿದೆ. ಬೆಂಗಳೂರಲ್ಲಿ 5,482 ಕೊರೋನಾ ಸಕ್ರಿಯ ಪ್ರಕರಣಗಳಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ 2 ಮಂದಿ ಸಾವನ್ನಪ್ಪಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಕೊರೋನಾದಿಂದ ಸಾವು ಸಂಭವಿಸಿಲ್ಲ.

ಜಿಲ್ಲಾವಾರು ಕೊರೋನಾ ಕೇಸ್
ಬಾಗಲಕೋಟೆ 0, ಬಳ್ಳಾರಿ 8, ಬೆಳಗಾವಿ 3, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 179, ಬೀದರ್ 0, ಚಾಮರಾಜನಗರ 2, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 19, ಚಿತ್ರದುರ್ಗ 1, ದಕ್ಷಿಣ ಕನ್ನಡ 26, ದಾವಣಗೆರೆ 0, ಧಾರವಾಡ 5, ಗದಗ 0, ಹಾಸನ 4, ಹಾವೇರಿ 0, ಕಲಬುರಗಿ 1, ಕೊಡಗು 26, ಕೋಲಾರ 1, ಕೊಪ್ಪಳ 0, ಮಂಡ್ಯ 6, ಮೈಸೂರು 15, ರಾಯಚೂರು 0, ರಾಮನಗರ 0, ಶಿವಮೊಗ್ಗ 1, ತುಮಕೂರು 4, ಉಡುಪಿ 4, ಉತ್ತರ ಕನ್ನಡ 6, ವಿಜಯಪುರ 0, ಯಾದಗಿರಿ ಜಿಲ್ಲೆಯಲ್ಲಿ 0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.

ಇನ್ನೂ 1 ವಾರ ಹೊಸ ನಿರ್ಬಂಧ ಇಲ್ಲ
 ಕೋವಿಡ್‌ನ ಹೊಸ ತಳಿ ಒಮಿಕ್ರೋನ್‌ (Covid 19 New Variant Omicron) ಆತಂಕ ಉಂಟುಮಾಡಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರದ ಕಾಲ ಪರಿಸ್ಥಿತಿ ನೋಡಿಕೊಂಡು ರಾಜ್ಯದಲ್ಲಿ ಹೊಸ ಮಾರ್ಗಸೂಚಿ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ (Cabinet Meeting) ಒಂದು ವಾರದ ಪರಿಸ್ಥಿತಿ ನೋಡಿಕೊಂಡು ನಂತರ ಹೊಸ ಮಾರ್ಗಸೂಚಿ ಜಾರಿಗೆ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ಕೋವಿಡ್‌ ಕುರಿತು (Covid 19) ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿದೆ. ಹೊಸ ತಳಿ ಒಮಿಕ್ರೋನ್‌ ಸೋಂಕು ಕಾಣಿಸಿಕೊಂಡರೂ ಆತಂಕಪಡುವ ಅಗತ್ಯ ಇಲ್ಲ ಎಂದು ತಜ್ಞರು (Experts) ಸಲಹೆ ಮಾಡಿದ್ದಾರೆ. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಸರ್ಕಾರವು ಪರಿಸ್ಥಿತಿಗನುಗುಣವಾಗಿ ನಿಯಮ (Guidelines) ಅನುಷ್ಠಾನಕ್ಕೆ ತರಲಿದೆ. ಹೊಸ ಮಾರ್ಗಸೂಚಿಗಳನ್ನು ರಚಿಸಲು ತಾಂತ್ರಿಕ ಸಲಹಾ ಸಮಿತಿ ವರದಿ ನೀಡಬೇಕು. ಆ ವರದಿಯನ್ನು ಗಮನಿಸಿ ಅಗತ್ಯವೆನಿಸಿದರೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.

ಗಡಿ ಜಿಲ್ಲೆಗಳಲ್ಲಿ ಇನ್ನಷ್ಟುಬಿಗಿ:
ಗಡಿಭಾಗದ ಜಿಲ್ಲೆಗಳಲ್ಲಿ (Border Districts) ಪ್ರಸ್ತುತ ಇರುವ ನಿಯಮಗಳ ಜತೆಗೆ ಇನ್ನಷ್ಟುನಿಯಮಗಳನ್ನು ಜಾರಿ ಮಾಡಲಾಗುವುದು. ಕೇರಳ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಯಾವೆಲ್ಲಾ ನಿಯಮಗಳನ್ನು ಜಾರಿ ಮಾಡಿದ್ದೇವೋ ಅವುಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದರು.

click me!