ರಾಜ್ಯದಲ್ಲಿ ಸತತವಾಗಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯತ್ತ ಸಾಗಿದ್ದು ರಾಜಧಾನಿ ಬೆಂಗಳೂರುನಲ್ಲು ಸೋಂಕು ಗಣನೀಯವಾಗಿ ಇಳಿದಿದೆ.
ಬೆಂಗಳೂರು, (ಅ.26): ಮಹಾಮಾರಿ ಕೊರೋನಾ ಸೋಂಕು ಅಬ್ಬರದಿಂದ ತತ್ತರಿಸಿ ಹೋಗಿದ್ದ ಜನತೆ ಇದೀಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪ್ರತಿನಿತ್ಯ 9ರಿಂದ 10 ಸಾವಿರ ವರೆಗೆ ಪಾಸಿಟಿವ್ ಕೇಸ್‌ಗಳು ಪತ್ತೆಯಾಗುತ್ತಿದ್ದವು. ಆದ್ರೆ, ಕಳೆದ ಒಂದು ವಾರದಿಂದ ಸೋಂಕು ಪ್ರಕರಣಗಳು ಇಳಿಕೆಯಾಗುತ್ತಿರುವುದು ಜನರಲ್ಲಿ ಆತಂಕ ದೂರವಾಗುತ್ತಿದೆ.
undefined
ಜನರಿಗೆ ಕೊರೋನಾ ಲಸಿಕೆ ಒದಗಿಸಲು 51 ಸಾವಿರ ಕೋಟಿ ಮೀಸಲಿಟ್ಟ ಸರ್ಕಾರ
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 3130 ಪ್ರಕರಣಗಳು ಧೃಡಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 805947ಕ್ಕೆ ಏರಿಕೆಯಾಗಿದೆ ಹಾಗೆಯೇ ಸೋಂಕಿಗೆ 42 ಸೋಂಕಿತರು ಮೃತಪಟ್ಟಿದ್ದಾರೆ.
ಇನ್ನು ಸೋಂಕಿನಿಂದ ಗುಣಮುಖರಾದವರ ಸಂಖ್ಯೆಯು ಹೆಚ್ಚಿದ್ದು ರಾಜ್ಯದಲ್ಲಿ ಇಂದು (ಸೋಮವಾರ) 8715 ಸೋಂಕಿತರು ಗುಣಮುಖರಾಗಿದ್ದು, ಇದುವರೆಗೆ 719558 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಸತತವಾಗಿ ಕೊರೊನಾ ಸೋಂಕು ಪ್ರಕರಣಗಳು ಇಳಿಕೆಯತ್ತ ಸಾಗಿದ್ದು ರಾಜಧಾನಿ ಬೆಂಗಳೂರುನಲ್ಲು ಸೋಂಕು ಗಣನೀಯವಾಗಿ ಇಳಿದಿದೆ.