ರೈಲು ಪ್ರಯಾಣಿಕರಿಗೊಂದು ಸಂತಸದ ಸುದ್ದಿ..!

By Kannadaprabha NewsFirst Published Nov 28, 2020, 7:55 AM IST
Highlights

ಈ ವಿಶೇಷ ರೈಲುಗಳಲ್ಲಿ ಪ್ರಯಾಣಿಸಲು ಹಿಂದಿನಂತೆ 10 ದಿನ ಮುಂಚಿತವಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಬೇಕು|  ವಿಶೇಷ ಪ್ರಯಾಣ ದರವೇ ಈ ರೈಲುಗಳಿಗೆ ಅನ್ವಯ| ಕೊರೋನಾ ಮಾರ್ಗಚೂಚಿ ಪಾಲನೆ ಕಡ್ಡಾಯ| 

ಬೆಂಗಳೂರು(ನ.28): ನೈಋುತ್ಯ ರೈಲ್ವೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ರಾಜ್ಯ ಹಾಗೂ ಹೊರರಾಜ್ಯದ ವಿವಿಧ ನಗರಗಳಿಗೆ ಕಾರ್ಯಾಚರಿಸಿದ್ದ 31 ವಿಶೇಷ ರೈಲುಗಳ ಸಂಚಾರವನ್ನು ಡಿಸೆಂಬರ್‌ ಅಂತ್ಯದವರೆಗೂ ವಿಸ್ತರಿಸಿದೆ.

ಈ ವಿಶೇಷ ರೈಲುಗಳಲ್ಲಿ ಪ್ರಯಾಣಿಸಲು ಹಿಂದಿನಂತೆ 10 ದಿನ ಮುಂಚಿತವಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಬೇಕು. ವಿಶೇಷ ಪ್ರಯಾಣ ದರವೇ ಈ ರೈಲುಗಳಿಗೆ ಅನ್ವಯವಾಗಲಿದೆ. 

ಬೆಂಗಳೂರಿಂದ ಬಾಂಗ್ಲಾಗೆ ಇದೇ ಮೊದಲ ಬಾರಿ ರೈಲು ಸೇವೆ ಆರಂಭ

ಪ್ರಯಾಣಿಕರು ಕೊರೋನಾ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನೈಋುತ್ಯ ರೈಲ್ವೆ ತಿಳಿಸಿದೆ.
 

click me!